ಪ್ರಯಾಣದಲ್ಲಿ ಹೀಗೆ ಯಾವತ್ತೂ ಮಾಡಬೇಡಿ: ಯುವ ಕ್ರಿಕೆಟಿಗರಿಗೆ ಅಮೂಲ್ಯ ಸಲಹೆ ನೀಡಿದ ಕಪಿಲ್ ದೇವ್

ಟೀಮ್ ಇಂಡಿಯಾ ಆಟಗಾರ ರಿಷಭ್ ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರವಾಗಿ ಮಾಜಿ ನಾಯಕ ಕಪಿಲ್‌ದೇವ್ ಪ್ರತಿಕ್ರಿಯೆ ನೀಡಿದ್ದು ಪಂತ್ ಅಪಾಯದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿರುವುದು ಸಮಾಧಾನಕರ ಸಂಗತಿ ಎಂದಿದ್ದಾರೆ. ಈ ಸಂದರ್ಭದಲ್ಲಿ ಕಪಿಲ್‌ದೇವ್ ಯುವ ಕ್ರಿಕೆಟ್ ಆಟಗಾರರು ಪ್ರಯಾಣದಲ್ಲಿ ಅನುಸರಿಸಬೇಕಾದ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ.
ಕಳೆದ ಶುಕ್ರವಾರ ಮುಂಜಾನೆ ದೆಹಲಿಯಿಂದ ಡೆಹ್ರಾಡೂನ್‌ನತ್ತ ಪ್ರಯಾಣಿಸುತ್ತಿದ್ದ ರಿಷಭ್ ಪಂತ್ ರೂರ್ಕಿ ಸಮೀಪ ಅಪಘಾತಕ್ಕೆ ಒಳಗಾಗಿದ್ದರು. ಭೀಕರ ಅಪಘಾತದಲ್ಲಿ ಪಂತ್ ಕಾರುಸ ಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಆದರೆ ಅದೃಷ್ಟವಶಾತ್ ಪಂತ್ ಪ್ರಾಣಾಪಾಯದಿಂದ ಪಾರಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.

ಯುವ ಕ್ರಿಕೆಟಿಗರಿಗೆ ಕಪಿಲ್ ಅಮೂಲ್ಯ ಸಲಹೆ
ಈ ಸಂದರ್ಭದಲ್ಲಿ ಕಪಿಲ್‌ದೇವ್ ಕ್ರಿಕೆಟಿಗರು ತಾವೇ ಕಾರನ್ನು ಚಲಾಯಿಸಿಕೊಂಡು ಹೋಗುವುದು ಸೂಕ್ತವಲ್ಲ. ಬದಲಿಗೆ ಅದಕ್ಕಾಗಿ ಪರಿಣತ ಡ್ರೈವರ್‌ಗಳನ್ನು ಇಟ್ಟುಕೊಂಡು ಆ ಕೆಲಸವನ್ನು ಅವರಲ್ಲಿಯೇ ಮಾಡಿಸಿಕೊಳ್ಳಬೇಕು ಎಂದಿದ್ದಾರೆ. "ಹೌದು, ನಿಮ್ಮಲ್ಲಿ ಉತ್ತಮವಾದ ಕಾರುಗಳು ಇರಬಹುದು. ಅದು ಅದ್ಭುತ ವೇಗವನ್ನು ಹೊಂದಿರಬಹುದು. ಆದರೆ ನೀವು ಒಂಟಿಯಾಗಿ ಡ್ರೈವ್ ಮಾಡಿಕೊಂಡು ಹೋಗುವುದು ಉತ್ತಮವಲ್ಲ. ಅದು ನಿಮಗೆ ಹವ್ಯಾಸ ಅಥವಾ ಇಷ್ಟದ ವಿಚಾರವಾಗಿರಬಹುದು. ಈ ವಯಸ್ಸಿನಲ್ಲಿ ಅದು ಸಹಜ ಕೂಡ. ಆದರೆ ನಿಮಗೆ ಜವಾಬ್ಧಾರಿಗಳು ಇದೆ. ನೀವು ಮಾತ್ರವೇ ನಿಮ್ಮ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬಹುದು. ನಿಮ್ಮ ವಿಚಾರಗಳ ಬಗ್ಗೆ ನೀವೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ" ಎಂದಿದ್ದಾರೆ ಮಾಜಿ ನಾಯಕ ಕಪಿಲ್‌ದೇವ್.

ತಮ್ಮ ಬೈಕ್ ಅಪಘಾತದ ಬಗ್ಗೆ ಹೇಳಿಕೊಂಡ ಕಪಿಲ್
ಇನ್ನು ಈ ಸಂದರ್ಭದಲ್ಲಿ ಕಪಿಲ್‌ದೇವ್ ತಾವು ಬೈಕ್ ಅಪಘಾತಕ್ಕೆ ಒಳಗಾಗಿದ್ದ ವಿಚಾರವನ್ನು ನೆನಪಿಸಿಕೊಂಡಿದ್ದಾರೆ. "ನಾನು ಆಗಷ್ಟೇ ಕ್ರಿಕೆಟ್ ಆಟಗಾರನಾಗಿ ಗುರುತಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಬೈಕ್ ಅಪಘಾತಕ್ಕೆ ಒಳಗಾಗಿದ್ದೆ. ಅದಾದ ಬಳಿಕ ನನ್ನ ಸೋದರ ನನಗೆ ಬೈಕನ್ನು ಮುಟ್ಟಲು ಕೂಡ ಬಿಟ್ಟಿರಲಿಲ್ಲ" ಎಂದಿದ್ದಾರೆ ಕಪಿಲ್ ದೇವ್. ಇನ್ನು ಇದೇ ಸಂದರ್ಭದಲ್ಲಿ ಅವರು ರಿಷಭ್ ಪಂತ್ ಸುರಕ್ಷಿತವಾಗಿ ಇರುವುದಕ್ಕೆ ದೇವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಪಂತ್ ಅಲಭ್ಯ
ಇನ್ನು ರಿಷಭ್ ಪಂತ್ ಫೆಬ್ರವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಟೆಸ್ಟ್ ಸರಣಿಗೆ ಲಭ್ಯವಾಗುವ ಸಾಧ್ಯತೆಯಿಲ್ಲ. ಇನ್ನು ಐಪಿಎಲ್ ವೇಳೆಗೆ ಕೂಡ ಪಂತ್ ಸಂಪೂರ್ಣವಾಗಿ ಚೇತರಿಕೆ ಕಾಣುವ ಸಾಧ್ಯತೆ ಕಷ್ಟ ಎನ್ನಲಾಗಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ನೂತನ ನಾಯಕನ ಮುಂದಾಳತ್ವದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಇನ್ನು ಮತ್ತೊಂದೆಡೆ ಟೀಮ್ ಇಂಡಿಯಾ 2023ರ ಕ್ಯಾಲೆಂಡರ್ ವರ್ಷವನ್ನು ಶ್ರೀಲಂಕಾ ವಿರುದ್ಧದ ಟಿ20 ಸರಣಿಯೊಂದಿಗೆ ಆರಂಭಿಸಲಿದೆ. ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು ಜನವರಿ 3ರಿಂದ ಆರಂಭವಾಗಲಿದೆ. ಅದಾದ ಬಳಿಕ ಏಕದಿನ ಸರಣಿ ಕೂಡ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications