ಪ್ರೆಶರ್ ಎಂದವರಿಗೆ ಕಪಿಲ್ ಚಾಟಿ: ಒತ್ತಡವಿದ್ದರೆ ಐಪಿಎಲ್ ಆಡಬೇಡಿ ಎಂದ ದಿಗ್ಗಜ ಕ್ರಿಕೆಟಿಗ!

ಮಾಜಿ ನಾಯಕ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಕಟುವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿ ಸುದ್ದಿಯಾಗಿದ್ದಾರೆ. ಆಧುನಿಕ ಕ್ರಿಕೆಟ್‌ನಲ್ಲಿ ಭಾರತೀಯ ಆಟಗಾರರು ಅತಿಯಾದ ಒತ್ತಡವನ್ನು ನಿಭಾಯಿಸುವ ಬಗ್ಗೆ ಎಂದು ದಿಗ್ಗಜ ಕ್ರಿಕೆಟಿಗನಲ್ಲಿ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಬಗ್ಗೆ ಮಾತನಾಡಿದ ಕಪಿಲ್ ದೇವ್ ಆಟಗಾರಿಗೆ ಒತ್ತಡವಿದೆ ಎನಿಸಿದರೆ ಅವರು ಐಪಿಎಲ್‌ನಲ್ಲಿ ಆಡುವುದರಿಂದ ಹಿಂದಕ್ಕೆ ಸರಿಯಲಿ ಎಂದಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಕಪಿಲ್ ದೇವ್ ಐಪಿಎಲ್‌ನಲ್ಲಿ ಆಡುವುದರಿಂದಾಗಿ ಆಟಗಾರರಿಗೆ ಸಾಕಷ್ಟು ಒತ್ತಡಗಳು ಉಂಟಾಗುತ್ತಿವೆ ಎಂಬ ಬಗ್ಗೆ ದೂರುಗಳನ್ನು ಕೇಳಿದ್ದೇನೆ ಎಂದಿದ್ದು ಒಂದು ವೇಳೆ ಅದು ಹೌದಾಗಿದ್ದಲ್ಲಿ ಅವರು ಐಪಿಎಲ್‌ನಲ್ಲಿ ಆಡುವುದರಿಂದ ಹೊರಗುಳಿಯಲಿ ಎಂದು ಹೇಳಿಕೆ ನೀಡಿದ್ದಾರೆ.

ಐಪಿಎಲ್‌ನಲ್ಲಿ ಆಡುವುದು ಬೇಡ
ನಾನು ಟಿವಿಯಲ್ಲಿ ಸಾಕಷ್ಟು ಸಂದರ್ಭದಲ್ಲಿ ಕೇಳಿಕೊಂಡಿದ್ದೇನೆ. ಐಪಿಎಲ್‌ನಲ್ಲಿ ಆಡುವುದರಿಂದಾಗಿ ಆಟಗಾರರ ಮೇಲೆ ಸಾಕಷ್ಟು ಒತ್ತಡಗಳು ಬೀಳುತ್ತದೆ ಎಂಬುದಾಗಿ. ಅದಕ್ಕೆ ನಾನು ಒಂದನ್ನು ಹೇಳಲು ಬಯಸುತ್ತೇನೆ. ಅದೇನೆಂದರೆ ಐಪಿಎಲ್‌ನಲ್ಲಿ ಆಡಬೇಡಿ" ಎಂದು ಕಪಿಲ್ ದೇವ್ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕಪಿಲ್ ದೇವ್ "ಆಟದ ಮೇಲೆ ಒಲವು ಬದ್ಧತೆಯಿದ್ದರೆ ಅದು ಒತ್ತಡ ಎನಿಸಲು ಸಾಧ್ಯವೇ ಇಲ್ಲ" ಎಂದಿದ್ದಾರೆ ಕಪಿಲ್ ದೇವ್.

ನಾವು ಆನಂದಿಸುತ್ತಿದ್ದ ಕಾರಣ ಆಡುತ್ತಿದ್ದೆವು!
"ಆಟಗಾರನಿಗೆ ಆಟದ ಮೇಲೆ ಅತೀವ ಪ್ರೀತಿಯಿದ್ದರೆ ಅದು ಒತ್ತಡ ಎನಿಸಿಕೊಳ್ಳಲು ಸಾಧ್ಯವೇ ಇಲ್ಲ. ನನಗೆ ಈ ಡಿಪ್ರೆಶನ್ ರೀತಿಯ ಅಮೇರಿಕನ್ ಟರ್ಮ್‌ಗಳು ಅರ್ಥವಾಗುವುದಿಲ್ಲ. ನಾನು ಕೂಡ ಮಾಜಿ ಆಟಗಾರ. ನಾನು ಆಟವನ್ನು ಆನಂದಿಸುತ್ತಿದ್ದ ಕಾರಣ ಆಡುತ್ತಿದ್ದೆವು. ನೀವು ಆಟವನ್ನು ಆನಂದಿಸುತ್ತಿದ್ದರೆ ಒತ್ತಡ ಎನಿಸಲು ಸಾಧ್ಯವೇ ಇಲ್ಲ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಏಕದಿನ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್.

ಚುಟುಕು ವಿಶ್ವಕಪ್‌ಗೆ ಸಜ್ಜಾಗುತ್ತಿದೆ ಟೀಮ್ ಇಂಡಿಯಾ
ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಈ ಬಾರಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದು ಅಭ್ಯಾಸವನ್ನು ಆರಂಭಿಸಿದೆ. ವಿಶ್ವಕಪ್‌ಗೂ ಮುನ್ನ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಿದ್ದು ಮಹತ್ವದ ಟೂರ್ನಿಗೆ ಸಿದ್ಧತೆ ನಡೆಸುತ್ತಿದೆ. ಕಳೆದ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೂ ಪ್ರವೇಶಿಸುವಲ್ಲಿ ವಿಫಲವಾಗಿದ್ದ ಭಾರತ ಈ ವರ್ಷ ನಡೆದ ಏಷ್ಯಾಕಪ್ ಟೂರ್ನಿಯಲ್ಲಿಯೂ ಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಭಾರತದ ಬೌಲಿಂಗ್ ವಿಭಾಗದ ಪ್ರದರ್ಶನ ತಂಡಕ್ಕೆ ತಲೆನೋವು ತಂದಿದೆ. ಹೀಗಾಗಿ ಈ ವಿಭಾಗದ ಸಮಸ್ಯೆಗಳನ್ನು ಪರಿಹರಿಸಿಕೊಂಡು ಭಾರತ ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ಭಾಗಿ
ಒಂದೆಡೆ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಭಾರತ ತಂಡದ ಸದಸ್ಯರು ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಿದ್ದರೂ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಶಿಖರ್ ಧವನ್ ನೇತೃತ್ವದಲ್ಲಿ ಯುವ ಆಟಗಾರರನ್ನು ಒಳಗೊಂಡ ಭಾರತ ತಂಡ ಭಾಗಿಯಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದ್ದು ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಮೂಲಕ ಭಾರತ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹವಣಿಸುತ್ತಿರುವ ಯುವ ಆಟಗಾರರಿಗೂ ಮತ್ತೊಂದು ಅವಕಾಶ ದೊರೆತಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications