Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಾಕ್‌ಡೌನ್‌: ಹೊಸ ಲುಕ್‌ನಲ್ಲಿ ಭಾರತದ ಮಾಜಿ ನಾಯಕ ಕಪಿಲ್‌ದೇವ್

Kapil Devs Lockdown Look: World Cup Winner Shaves Head, Leaves Fans In Awe

ಟೀಮ್ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಹೊಸಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಆಗಿರುವ ಕಾರಣದಿಂದ ಮನೆಯಲ್ಲೇ ಕಪಿಲ್‌ದೇವ್ ವಿಶಿಷ್ಟ ಲುಕ್‌ ಮಾಡಿಸಿಕೊಂಡಿದ್ದಾರೆ.

ಕಪಿಲ್ ದೇವ್ ಅವರ ಹೊಸ ಲುಕ್‌ ಅನ್ನು ಇನ್ನೋರ್ವ ಮಾಜಿ ಆಟಗಾರ, ಕಪಿಲ್‌ದೇವ್ ಸ್ನೇಹಿತ ಚೇತನ್ ಶರ್ಮಾ ಟ್ವಿಟ್ಟರ್ ಖಾತೆಯ ಮೂಲಕ ಬಹಿರಂಗಪಡಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಹೊಸ ಲುಕ್‌ನಲ್ಲಿ ಕಪಿಲ್‌ದೇವ್ ತಲೆಯನ್ನು ಸಂಪೂರ್ಣವಾಗಿ ಶೇವ್ ಮಾಡಿದರೆ, ತಮ್ಮ ಬಿಳಿ ಗಡ್ಡವನ್ನು ಉಳಿಸಿಕೊಂಡಿದ್ದಾರೆ. ಈ ಬದಲಾವಣೆ ಮಾಡಿಕೊಂಡ ಬಳಿಕ ಫೋಟೋಗೆ ಕಪಿಲ್‌ದೇವ್ ಪೋಸ್‌ ಕೊಟ್ಟಿದ್ದಾರೆ. ತಮ್ಮ ಹೇರ್‌ಸ್ಟೈಲ್‌ನಂತರ ನಂತರ ಕಪಿಲ್‌ದೇವ್ ಕಪ್ಪು ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಕಪಿಲ್‌ದೇವ್ ಅವರ ಗುಂಗುರು ಕೂದಲು ಅವರ ಆಟದ ಸಮಯದಿಂದಲೂ ಸಾಕಷ್ಟು ಖ್ಯಾತಯನ್ನು ಪಡೆದುಕೊಂಡಿತ್ತು. ತಮ್ಮ ಲುಕ್‌ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂಬ ಹಂಬಲಹೊಂದಿದ್ದ ಕಪಿಲ್ ಲಾಕ್‌ಡೌನ್ ಸಂದರ್ಭದಲ್ಲಿ ಈ ಪ್ರಯೋಗಕ್ಕೆ ಒಳಗಾಗಿದ್ದಾರೆ. ಅಭಿಮಾನಿಗಳು ಕೊಇಲ್ ದೇವ್ ಅವರ ಹೊಸ ಲುಕ್‌ಅನ್ನು ಇಷ್ಟಪಟ್ಟಿದ್ದಾರೆ.

ಇದಕ್ಕೂ ಮುನ್ನ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ತಮ್ಮ ಹೇರ್‌ ಸ್ಟೈಲ್ ತಾವೇ ಮಾಡಿಕೊಳ್ಳುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಈಗ ಮತ್ತೋರ್ವ ಮಾಜಿ ಆಟಗಾರ ಹೇರ್‌ಸ್ಟೈಲ್‌ ಕಾರಣಕ್ಕೆ ಸುದ್ಧಿಯಾಗಿದ್ದಾರೆ.

Story first published: Tuesday, April 21, 2020, 16:35 [IST]
Other articles published on Apr 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+