ಟೀಮ್ ಇಂಡಿಯಾ ವೈಟ್-ಬಾಲ್ ನಾಯಕತ್ವಕ್ಕೆ ಹಾರ್ದಿಕ್ ಪಾಂಡ್ಯ ಬೆಸ್ಟ್; ಕಪಿಲ್ ದೇವ್
ಪ್ರಸ್ತುತ ಭಾರತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಸೀಸನ್ ಅದ್ಧೂರಿಯಾಗಿ ನಡೆಯುತ್ತಿದೆ. ಪ್ರಶಸ್ತಿ ಗೆಲ್ಲಲು ಹತ್ತು ತಂಡಗಳ ನಡುವೆ ಹೋರಾಟ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತ ವೈಟ್ ಬಾಲ್ ತಂಡದ ನಾಯಕನ ಆಯ್ಕೆ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ. ಈ ರೇಸ್‌ನಲ್ಲಿ ಸ್ಟಾರ್ ಆಟಗಾರರು ರೇಸ್‌ನಲ್ಲಿದ್ದಾರೆ. ಭಾರತ ಟಿ20 ನಾಯಕ ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಹೆಸರುಗಳು ಟೀಮ್ ಇಂಡಿಯಾ ವೈಲ್ ನಾಯಕನ ಆಯ್ಕೆಗೆ ಮುಂಚೂಣಿಯಲ್ಲಿವೆ.
ಇತ್ತೀಚೆಗೆ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾ ಐಸಿಸಿ 2025ರ ಚಾಂಪಿಯನ್ ಟ್ರೋಫಿಯನ್ನು ಗೆದ್ದು ಇತಿಹಾಸ ಸೃಷ್ಟಿಸಿದೆ. ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ರೋಹಿತ್ ಶರ್ಮಾ ಅವರ ಪ್ರಸ್ತುತ ಫಾರ್ಮ್ ನೋಡಿದರೆ ಅವರು ಐಪಿಎಲ್ ನಂತರ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ರೋಹಿತ್ ಶರ್ಮಾ ನಂತರ ಟೀಮ್ ಇಂಡಿಯಾ ವೈಟ್ ಬಾಲ್ ನಾಯಕ ಯಾರು ಎಂಬ ಪ್ರಶ್ನೆ ಎದುರಾಗಿದೆ.

ರೋಹಿತ್ ಶರ್ಮಾ ನಂತರ ಟೀಮ್ ಇಂಡಿಯಾಕ್ಕೆ ವೈಟ್ ಬಾಲ್ ನಾಯಕನನ್ನು ಹುಡುಕುವುದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ತಕ್ಷಣದ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಮಾಜಿ ವಿಶ್ವ ಚಾಂಪಿಯನ್ ನಾಯಕ ಕಪಿಲ್ ದೇವ್ ಅವರು ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹೆಸರನ್ನು ಟೀಮ್ ಇಂಡಿಯಾ ವೈಟ್ ಬಾಲ್ ನಾಯಕತ್ವ ಸೂಚಿಸಿದ್ದಾರೆ. ಮೈಖೇಲ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಕಪಿಲ್ ದೇವ್ ಈ ಬಗ್ಗೆ ಮಾತನಾಡಿದ್ದಾರೆ.
ಟೀಮ್ ಇಂಡಿಯಾ ವೈಟ್ ಬಾಲ್ ನಾಯಕತ್ವಕ್ಕೆ ಹಲವು ಸ್ಪರ್ಧಿಗಳಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ ನನ್ನ ಆಯ್ಕೆ. ಕಳೆದ ಕೆಲವು ವರ್ಷಗಳಲ್ಲಿ ಹಾರ್ದಿಕ್ ಪಾಂಡ್ಯ ಒಬ್ಬ ಉತ್ತಮ ಆಟಗಾರನಾಗಿ ಬೆಳೆದಿದ್ದಾರೆ. ಇದನ್ನು ನೋಡಿದ ನಂತರ, ವೈಟ್ ಬಾಲ್ ನಾಯಕನ ಹುದ್ದೆಯನ್ನು ಬೇರೆ ಯಾರೂ ವಹಿಸಿಕೊಳ್ಳುವುದನ್ನು ನೋಡಲು ಸಾಧ್ಯವಿಲ್ಲ. ಹಾರ್ದಿಕ್ ಪಾಂಡ್ಯ ವಯಸ್ಸಿನಲ್ಲಿ ಚಿಕ್ಕವನು. ಆದರಿಂದ ಮುಂಬರುವ ಐಸಿಸಿ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಅದ್ಭುತವಾಗಿ ಮುನ್ನಡೆಸಬಹುದು ಎಂದು ಕಪಿಲ್ ದೇವ್ ಹೇಳಿದ್ದಾರೆ.
ಎಲ್ಲಾ ಸ್ವರೂಪದ ಆಟಗಾರರ ಕೊರತೆಯಿಂದಾಗಿ ಭಾರತವು ಎಲ್ಲಾ ಸ್ವರೂಪಗಳಿಗೆ ಒಬ್ಬ ನಾಯಕನನ್ನು ನೇಮಿಸಲು ಸಾಧ್ಯವಾಗುವುದಿಲ್ಲ. ಹಾರ್ದಿಕ್ ಪಾಂಡ್ಯ ಕೂಡ ಟೆಸ್ಟ್ ಕ್ರಿಕೆಟ್ ಆಡಬೇಕು. ಅವರು ಆಡುತ್ತಿಲ್ಲವಾದ್ದರಿಂದ ಭಾರತಕ್ಕೆ ಮೂರು ಸ್ವರೂಪಗಳಿಗೆ ಬಹು ನಾಯಕರ ಅಗತ್ಯವಿರುತ್ತದೆ ಎಂದು ಕಪಿಲ್ ದೇವ್ ತಿಳಿಸಿದ್ದಾರೆ.
ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಭಾರತ ಮುಂದಿನ ಸವಾಲುಗಳಿಗೆ ಸಿದ್ಧವಾಗುತ್ತಿದ್ದಂತೆ, ಹಾರ್ದಿಕ್ ಪಾಂಡ್ಯ ಅವರಿಗೆ ಕಪಿಲ್ ದೇವ್ ಭಾರಿ ಪ್ರೋತ್ಸಾಹ ನೀಡಿದ್ದಾರೆ. ಕಪಿಲ್ ದೇವ್ ಕೂಡ ಆಲ್‌ರೌಂಡರ್ ಆಗಿದ್ದವರು. ಹೀಗಾಗಿ ಭಾರತ ತಂಡಕ್ಕೆ ಮತ್ತೊಬ್ಬ ಸ್ಟಾರ್ ಆಲ್‌ರೌಂಡರ್ ನಾಯಕನಾಗಬೇಕು ಎಂಬುದು ಕಪಿಲ್ ದೇವ್ ಅವರ ಅಭಿಪ್ರಾಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications