Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ ರೀತಿ ಕವರ್ ಡ್ರೈವ್ ಶಾಟ್ ಹೊಡೆದ ಕಾರ್ಕಳದ ಹುಡುಗಿ: ವೈರಲ್ ವೀಡಿಯೋ

Karkala Girl Jyothi Poojarys cover drive goes viral

ಕಾರ್ಕಳ, ಜೂನ್ 13: ಈಕೆ ಹೆಸರು ಜ್ಯೋತಿ ಪೂಜಾರಿ. ಉಡುಪಿ ಜಿಲ್ಲೆಯ ಕಾರ್ಕಳವರು. ಮನೆಯಂಗಳದಲ್ಲಿ ಕ್ರಿಕೆಟ್‌ ಆಡುವಾಗ ಈಕೆ ಕೊಹ್ಲಿ ರೀತೀಲಿ ಬ್ಯಾಟಿಂಗ್ ಮಾಡಿರುವ ವೀಡಿಯೋ ಸಖತ್ ವೈರಲ್ ಆಗಿದೆ. ಪರಿಣಿತ ಬ್ಯಾಟ್ಸ್‌ಮನ್‌ಗಳಂತೆ ಈಕೆ ಹೊಡೆದಿರುವ ಕವರ್‌ ಡ್ರೈವ್ ಶಾಟ್‌ನ ವೀಡಿಯೋವನ್ನು ಇಎಸ್‌ಪಿಎನ್ ಕ್ರಿಕ್ ಇನ್ಫೋ ಟ್ವೀಟ್ ಮಾಡಿದೆ.

ಕಾರ್ಕಳದ ಕೆರ್ವಾಶೆ ಗ್ರಾಮದ ಜ್ಯೋತಿ ಬ್ಯಾಟಿಂಗ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಕರ್ನಾಟಕದ ಅದರಲ್ಲೂ ಉಡುಪಿ ಜಿಲ್ಲೆಯ ಹುಡುಗಿ ಜ್ಯೋತಿಯ ಬ್ಯಾಟಿಂಗ್ ಶೈಲಿಗೆ ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದಾರೆ.

'ಲೆಗ್ ಸೈಡ್ ಬದಿಗೆ ಸರಿದು ಕವರ್‌ ಡ್ರೈವ್ ಮೂಲಕ ಶಾಟ್ ಹೊಡೆದರು. ನಾವಿದನ್ನು ಇದಕ್ಕೂ ಮೊದಲು ಎಲ್ಲಿ ನೋಡಿದ್ದೇವೆ ಹೇಳಿ?' ಅಂತ ಪ್ರಶ್ನಿಸಿ ಖ್ಯಾತ ಕ್ರಿಕೆಟ್ ವೆಬ್‌ಸೈಟ್ ಇಎಸ್‌ಪಿಎನ್ ಕ್ರಿಕ್‌ ಇನ್ಫೋ ಟ್ವೀಟ್ ಮಾಡಿದೆ.

ಜ್ಯೋತಿ ಬ್ಯಾಟಿಂಗ್ ಮಾಡಿರುವ ಇದೇ ವೀಡಿಯೋವನ್ನು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ತನ್ನ ಫೇಸ್ಬುಕ್ ಖಾತೆಯಲ್ಲೂ ಹಾಕಿಕೊಂಡಿದೆ. ಜ್ಯೋತಿ ಬ್ಯಾಟಿಂಗ್ ಶೈಲಿಗೂ, ಕೊಹ್ಲಿಯೂ ಸೇರಿ ಖ್ಯಾತ ಕ್ರಿಕೆಟಿಗರು ಕವರ್‌ ಡ್ರೈವ್ ಶಾಟ್‌ಗೂ ಹೋಲಿಕೆಯಿರುವ ವೀಡಿಯೋವನ್ನು ಒಟ್ಟಿಗೆ ಸೇರಿಸಿ ವೈರಲ್ ಮಾಡಲಾಗಿದೆ (ವೀಡಿಯೋ ಕೃಪೆ: ಉಡುಪಿ ವೈವ್ ಫೇಸ್ಬುಕ್ ಪೇಜ್)

Story first published: Saturday, June 13, 2020, 17:59 [IST]
Other articles published on Jun 13, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+