ಕರ್ನಾಟಕ ಹಾಗೂ ಮಧ್ಯ ಪ್ರದೇಶ ನಡುವಣ ಸಿ ಗುಂಪಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯ ಡ್ರಾದಲ್ಲಿ ಕೊನೆಯಾಗಿದೆ. ಉಭಯ ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಂಡಿವೆ. ಪ್ರಸಕ್ತ ಸರಣಿಯನ್ನು ಗೆಲುವಿನ ಮೂಲಕ ಆರಂಭಿಸಬೇಕು ಎಂಬ ಕರ್ನಾಟಕದ ಆಸೆಗೆ ಪೆಟ್ಟು ಬಿದ್ದಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಧ್ಯ ಪ್ರದೇಶ 8 ವಿಕೆಟ್‌ಗೆ 425 ರನ್ ಸೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಆಟದ ಕೊನೆಯ ದಿನವಾದ ಸೋಮವಾರ ಕರ್ನಾಟಕ 5 ವಿಕೆಟ್‌ಗೆ 206 ರನ್ ಸೇರಿಸಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಪರಿಣಾಮ ಉಭಯ ತಂಡಗಳು ತಲಾ ಒಂದು ಅಂಕ ಕಲೆ ಹಾಕಿವೆ.

ಭಾನುವಾರ 425 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ಮಧ್ಯ ಪ್ರದೇಶ ತಂಡ ಡಿಕ್ಲೇರ್ ಮಾಡಿಕೊಂಡಿತು. ಸೋಮವಾರ ದಿನದಾಟವನ್ನು ಆರಂಭಿಸಿದ ಕರ್ನಾಟಕ ತಂಡದ ನಾಯಕ ಮಾಯಂಕ್ ಅಗರ್‌ವಾಲ್ ಸೊನ್ನೆ ಸುತ್ತಿದರು. ಭರವಸೆಯ ಆಟಗಾರ ದೇವದತ್ ಪಡಿಕ್ಕಲ್ 16 ರನ್‌ಗಳಿಗೆ ಆಟ ಮುಗಿಸಿದರು. ಆರ್ ಸ್ಮರಣ್, ಮನೀಷ್ ಪಾಂಡೆ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.
72 ರನ್ ಆಗುಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಿಕ್ಕಿನ್ ಜೋಸ್ ಹಾಗೂ ಶ್ರೇಯಸ್ ಗೋಪಾಲ್ ಜೊತೆಗೂಡಿ ಐದನೇ ವಿಕೆಟ್‌ಗೆ 127 ರನ್ ಸೇರಿಸಿದರು. ನಿಕ್ಕಿನ್ ಜೋಸ್ 8 ಬೌಂಡರಿ, 4 ಸಿಕ್ಸರ್ ನೆರವಿನಿಂದ 99 ರನ್ ಬಾರಿಸಿ ಔಟ್ ಆದರು. ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಏಳು ಬೌಂಡರಿ, 1 ಸಿಕ್ಸರ್ ಅಜೇಯ 60 ರನ್ ಸಿಡಿಸಿದರು.

ಬರೋಡಾ ಹಾಗೂ ಮುಂಬೈ ನಡುವಣ ವಡೋಧರಾದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 84 ರನ್‌ಗಳಿಂದ ಸೋಲು ಕಂಡಿದೆ. ಮೊದಲ ಇನಿಂಗ್ಸ್‌ನಲ್ಲಿ ಬರೋಡಾ 290 ರನ್ ಸೇರಿಸಿತು. ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 214 ರನ್ ಮಾತ್ರ ಸೇರಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಬರೋಡಾ 185 ರನ್‌ಗಳಿಗೆ ಆಲೌಟ್ ಆಯಿತು. 261 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಮುಂಬೈ 177 ರನ್‌ಗಳಿಗೆ ಆಲೌಟ್ ಆಗಿ ಸೋಲು ಕಂಡಿತು.
ಉಳಿದ ರಣಜಿ ಪಂದ್ಯಗಳಲ್ಲಿ ಜಮ್ಮ ಕಾಶ್ಮಿರ್ ಹಾಗೂ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಪುದುಚೇರಿ, ಜಾರ್ಖಂಡ್ ಮತ್ತು ಅಸ್ಸಾಂ, ಚತ್ತಿಸಗಢ್, ದೆಹಲಿ ನಡುವಿನ ಪಂದ್ಯ ಡ್ರಾ ಆಗಿದೆ. ಇನ್ನುಳಿದಂತೆ ಹೈದರಾಬಾದ್ ತಂಡವನ್ನು 126 ರನ್‌ಗಳಿಂದ ಗುಜರಾತ್ ಮಣಿಸಿತು. ಬೀಹಾರ್ ತಂಡವನ್ನು 43 ರನ್‌ಗಳಿಂದ ಮಣಿಸಿದ ಹರಿಯಾಣ ಜಯದ ಅಭಿಯಾನ ಆರಂಭಿಸಿದೆ. ಪಂಜಾಬ್‌ನ್ನು ಕೇರಳಾ, ಚಂದೀಗರ್‌ನ್ನು ರೈಲ್ವೇಸ್, ಮೀಜೋರಾಂನ್ನು ಗೋವಾ ಮಣಿಸಿತು.