ರಣಜಿ ಟ್ರೋಫಿ 2019-20: 15 ಆಟಗಾರರ ಕರ್ನಾಟಕ ತಂಡ ಪ್ರಕಟ

ಬೆಂಗಳೂರು, ಡಿಸೆಂಬರ್ 4: ಡಿಸೆಂಬರ್ 9ರಿಂದ 2020ರ ಮಾರ್ಚ್ 13ರ ವರೆಗೆ ನಡೆಯಲಿರುವ 2019-20ರ ರಣಜಿ ಟ್ರೊಫಿ ಟೂರ್ನಿಗಾಗಿ ಕರ್ನಾಟಕ ತಂಡ ಪ್ರಕಟಗೊಂಡಿದೆ. 15 ಜನರನ್ನೊಳಗೊಂಡಿರುವ ತಂಡವನ್ನು ಕರುಣ ನಾಯರ್ ಮುನ್ನಡೆಸಲಿದ್ದಾರೆ. ಶ್ರೇಯಸ್ ಗೋಪಾಲ್ ಉಪನಾಯಕ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಸದ್ಯ ಪ್ರಕಟಿತ ತಂಡ ಟೂರ್ನಿಯ ಮೊದಲ ಪಂದ್ಯಕ್ಕಾಗಿ. ತಮಿಳುನಾಡಿನ ದಿಂಡಿಗಲ್‌ನ ಎನ್‌ಪಿಆರ್ ಕಾಲೇಜ್ ಗ್ರೌಂಡ್‌ನಲ್ಲಿ ಡಿಸೆಂಬರ್ 9ರಿಂದ 12ರ ವರೆಗೆ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ತಂಡ ತಮಿಳುನಾಡಿನ ವಿರುದ್ಧ ಮೊದಲ ಸವಾಲು ಸ್ವೀಕರಿಸಲಿದೆ.
ಕರ್ನಾಟಕ vs ತಮಿಳುನಾಡು ನಡುವಿನ ಮೊದಲ ಪಂದ್ಯ 9:30 AMಗೆ ಆರಂಭಗೊಳ್ಳಲಿದೆ. ವಿದರ್ಭ ತಂಡ ಹಾಲಿಚಾಂಪಿಯನ್ ಆಗಿದ್ದು, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದಿರುವ ಕರ್ನಾಟಕ ತಂಡ, ರಣಜಿ ಟ್ರೋಫಿಯತ್ತಲೂ ಕಣ್ಣಿಟ್ಟಿದೆ. ಕರ್ನಾಕಟ ತಂಡ 2014-15ರಲ್ಲಿ ಕಡೇಯ ಸಾರಿ ಚಾಂಪಿಯನ್ ಪಟ್ಟ ಜಯಿಸಿತ್ತು.
ಕರ್ನಾಟಕ ತಂಡ: ಕರುಣ್ ನಾಯರ್ (ನಾಯಕ), ಶ್ರೇಯಸ್ ಗೋಪಾಲ್ (ಉಪ ನಾಯಕ), ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ದೇಗಾ ನಿಶ್ಚಲ್, ರವಿಕುಮಾರ್ ಸಮರ್ಥ್, ಪವನ್ ದೇಶಪಾಂಡೆ, ಕೃಷ್ಣಪ್ಪ ಗೌತಮ್, ಜಗದೀಶ್ ಸುಚಿತ್, ಬಿ.ಆರ್ ಶರತ್ (ವಿಕೆ), ಶರತ್ ಶ್ರೀನಿವಾಸ್ (ವಿಕೆ), ರೋನಿತ್ ಮೋರೆ, ಡೇವಿಡ್ ಮಾಥಿಯಾಸ್, ವಾಸುಕಿ ಕೌಶಿಕ್, ಕೆ.ಎಸ್. ದೇವಯ್ಯ. (ಅಭಿಮನ್ಯು ಮಿಥುನ್ ಮತ್ತು ಪ್ರಸಿದ್ಧ್ ಕೃಷ್ಣ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications