For Quick Alerts
ALLOW NOTIFICATIONS  
For Daily Alerts
 

ಕರ್ನಾಟಕ ಮೂಲದ 'ರಾಚಿನ್ ರವೀಂದ್ರ' ಇದೀಗ ಕಿವೀಸ್ ಸ್ಟಾರ್ ಕ್ರಿಕೆಟಿಗ; ಈ ಹೆಸರಿನ ಹಿಂದೆ ಇದೆ ರೋಚಕ ಕಥೆ!

ಗುರುವಾರ, ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಇಂಗ್ಲೆಂಡ್ ನೀಡಿದ್ದ 283 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಡೆವೋನ್ ಕಾನ್ವೇ ಅವರ 152 ರನ್‌ಗಳ ಭರ್ಜರಿ ಶತಕ ಮತ್ತು ರಾಚಿನ್ ರವೀಂದ್ರ ಅವರ 123 ರನ್‌ಗಳ ಅಮೋಘ ಶತಕದ ನೆರವಿನಿಂದ ಕಳೆದ ವಿಶ್ವಕಪ್‌ನ ಫೈನಲ್ ಪಂದ್ಯದ ಸೋಲಿಗೆ ಪ್ರತೀಕಾರ ತೀರಿಸಿಕೊಂಡಿತು.

Karnataka-based Rachin Ravindra Is Now Star Cricketer For New Zealand; Exciting Story Behind This Name

ಇನ್ನು ನ್ಯೂಜಿಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್ ರಾಚಿನ್ ರವೀಂದ್ರ ಅವರದ್ದು ಕರ್ನಾಟಕ ಮೂಲ. ಅವರ ತಂದೆ ಬೆಂಗಳೂರಿನವರು. ಅವರ ಕುಟುಂಬ ಸದ್ಯ ನ್ಯೂಜಿಲೆಂಡ್‌ನ ವೆಲ್ಲಿಂಗ್‍ಟನ್‌ನಲ್ಲಿ ನೆಲೆಸಿದೆ.

ರಾಚಿನ್ ರವೀಂದ್ರ ಹೆಸರು ಸಚಿನ್ ಮತ್ತು ದ್ರಾವಿಡ್ ಅವರ ಹೆಸರಿನೊಂದಿಗೆ ಪ್ರಾಸಬದ್ಧವಾಗಿದೆ. ಅವರ ತಂದೆ ಅವರಿಗೆ ಭಾರತೀಯ ಲೆಜೆಂಡ್ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು ಒಟ್ಟಿಗೆ ಸೇರಿಸಿ ಇಟ್ಟಿದ್ದಾರೆ.

ನ್ಯೂಜಿಲೆಂಡ್‌ನ ತಂಡಕ್ಕೆ ರಾಚಿನ್ ರವೀಂದ್ರ ಹೇಗೆ ಆಯ್ಕೆಯಾದರು ಮತ್ತು ವೃತ್ತಿಪರ ಕ್ರಿಕೆಟಿಗರಾಗಲು ಅವರನ್ನು ಪ್ರೇರೇಪಿಸಿದ್ದು ಯಾವುದು ಎಂಬುದರ ರೋಚಕ ಕಥೆ ಇಲ್ಲಿದೆ.

Karnataka-based Rachin Ravindra Is Now Star Cricketer For New Zealand; Exciting Story Behind This Name

ವೆಲ್ಲಿಂಗ್ಟನ್‌ನಲ್ಲಿ ಭಾರತೀಯ ಮೂಲದ ಪೋಷಕರಿಗೆ ಜನಿಸಿದ ರಾಚಿನ್ ರವೀಂದ್ರ, ಕ್ರಿಕೆಟ್‌ಗೆ ಬಲವಾದ ಸಂಪರ್ಕವನ್ನು ಹೊಂದಿದ್ದಾರೆ. ಅವರ ಕುಟುಂಬದ ಬೆಂಗಳೂರಾಗಿದ್ದು, ಎರಡು ವರ್ಷಗಳ ಹಿಂದೆ ಭಾರತದಲ್ಲಿಯೇ ಟೆಸ್ಟ್‌ ಕ್ರಿಕೆಟ್ ಮೂಲಕ ಪದಾರ್ಪಣೆ ಮಾಡಿದರು.

ರಾಚಿನ್ ರವೀಂದ್ರ ಅವರ ಬೆಂಗಳೂರು ಮೂಲದ ತಂದೆಯು ಭಾರತೀಯ ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿಯಾಗಿದ್ದರು.

ರಾಚಿನ್ ಜನಿಸಿದ ನಂತರ, ರಾಹುಲ್‌ ದ್ರಾವಿಡ್‌ನಿಂದ 'ರಾ' ಮತ್ತು ಸಚಿನ್‌ ತೆಂಡೂಲ್ಕರ್‌ನಿಂದ 'ಚಿನ್' ಅನ್ನು ತೆಗೆದುಕೊಂಡು ಎರಡನ್ನೂ ಸೇರಿಸಿ 'ರಾಚಿನ್" ಎಂಬ ಹೆಸರನ್ನು ಇಟ್ಟಿದ್ದಾರೆ.

ರಾಚಿನ್ 2019ರ ವಿಶ್ವಕಪ್ ಪಂದ್ಯಾವಳಿಯನ್ನು ಅಭಿಮಾನಿಯಾಗಿ ವೀಕ್ಷಿಸಿದರು ಮತ್ತು ಈಗ ಅವರು 2023ರ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಅದ್ಭುತ ಪ್ರದರ್ಶನ ನೀಡಿದವರಲ್ಲಿ ಒಬ್ಬರಾದರು.

"ಇದು ನಿಜವಾಗಿ ದೊಡ್ಡ ಕಥೆಯಾಗಿದೆ. ನನ್ನ ತಂದೆ ಭಾರತಕ್ಕೆ ವಾರ್ಷಿಕವಾಗಿ ಒಂದು ಹುಡುಗರ ತಂಡವನ್ನು ಕರೆದೊಯ್ಯುತ್ತಾರೆ. ನಾವು ಬೆಂಗಳೂರಿನ ಪ್ರವಾಸದಲ್ಲಿದ್ದೆವು. ನಾವು ಸ್ಟಾಕ್ ಎಕ್ಸ್ಚೇಂಜ್ ಬಾರ್‌ನಲ್ಲಿ 2019ರ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸುತ್ತಿದ್ದೆವು," ಎಂದು ರಾಚಿನ್ ರವೀಂದ್ರ ಪಿಟಿಐಗೆ ತಿಳಿಸಿದ್ದಾರೆ.

"ನಾನು ಸಂಪೂರ್ಣ ಫೈನಲ್ ಪಂದ್ಯವನ್ನು ವೀಕ್ಷಿಸಿದೆ. ಇದು ನಂಬಲಸಾಧ್ಯವಾಗಿತ್ತು ಮತ್ತು ಅಂತಹ ರೋಲರ್‌ಕೋಸ್ಟರ್ ಅನುಭವವು ಆಟದ ಏರಿಳಿತವಾಗಿತ್ತು. ನಮ್ಮ ಸುತ್ತಲೂ ಭಾರತೀಯ ಬೆಂಬಲಿಗರು ಇರುವುದು ತುಂಬಾ ತಂಪಾಗಿತ್ತು. ಇದು ನಾನು ಎಂದಿಗೂ ಮರೆಯಲಾಗದ ಅನುಭವ," ಎಂದು ರಾಚಿನ್ ರವೀಂದ್ರ ಹೇಳಿದರು.

2019ರ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡಕ್ಕಾಗಿ ಒಂದು ದಿನ ಆಡುವ ಭಾರತೀಯ ಮೂಲದ ಯುವ ಕ್ರಿಕೆಟಿಗನ ಗುರಿಯನ್ನು ಪಂದ್ಯದ ಸೋಲಿನಿಂದ ಕುಗ್ಗಿಸಿತು. ಆದರೆ ಇದೇ ವೇಳೆ ಕಿವೀಸ್‌ಗಾಗಿ ಆಡುವ ಅವರ ಉತ್ಸಾಹವು ಬಲವಾಯಿತು.

"ಇದೊಂದು ಉತ್ತಮ ಸವಾರಿಯಾಗಿದೆ. ಒಂದು ದಿನ ನಿಮಗೆ ಅವಕಾಶ ಸಿಗಬಹುದೆಂದು ನೀವು ಯಾವಾಗಲೂ ಯೋಚಿಸುತ್ತೀರಿ. ಆ ಸಮಯದಲ್ಲಿ 19 ವರ್ಷ ವಯಸ್ಸಿನವರಾಗಿದ್ದೆ ಮತ್ತು ವೃತ್ತಿಪರ ಕ್ರಿಕೆಟ್‌ನ ಕೆಲವೇ ವರ್ಷಗಳ ನಂತರ, ನೀವು ವಿಶ್ವಕಪ್‌ನ ಭಾಗವಾದ ನಂತರ ಕನಸುಗಳು ನನಸಾಗಿರುವುದು ತುಂಬಾ ಸುಂದರವಾಗಿದೆ," ಎಂದು ರಾಚಿನ್ ರವೀಂದ್ರ ವಿವರಿಸಿದರು.

ತನ್ನ ತಂದೆಯೊಂದಿಗೆ ಭಾರತದಲ್ಲಿ ಕ್ರಿಕೆಟ್ ಪ್ರವಾಸಗಳು ತುಂಬಾ ಸೂಕ್ತವಾಗಿ ಬರುತ್ತವೆ ಎಂದು ನ್ಯೂಜಿಲೆಂಡ್ ಯುವ ಕ್ರಿಕೆಟಿಗ ನಂಬಿದ್ದಾರೆ. ರಾಚಿನ್ ರವೀಂದ್ರ ನ್ಯೂಜಿಲೆಂಡ್‌ನ ವೆಲ್ಲಿಂಗ್‌ಟನ್‌ಗಾಗಿ ಆಡುತ್ತಾರೆ. ಇದೀಗ 2023ರ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು.

Story first published: Friday, October 6, 2023, 8:38 [IST]
Other articles published on Oct 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+