Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Karnataka vs Punjab: ವಾಸುಕಿ ಕೌಶಿಕ್‌, ಅಭಿಲಾಶ್‌ ಶೆಟ್ಟಿ ವೇಗಕ್ಕೆ ನಲುಗಿದ ಪಂಜಾಬ್

ವಿಜಯ್ ಹಜಾರೆ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್‌ ಪಟ್ಟ ಅಲಂಕರಿಸಿರುವ ಕರ್ನಾಟಕ, ರಣಜಿ ಟ್ರೋಫಿಯಲ್ಲಿ ಭರ್ಜರಿ ಕಂ ಬ್ಯಾಕ್ ಮಾಡಿದೆ. ಗುರವಾರದಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಆರಂಭವಾದ "ಸಿ" ಗುಂಪಿನ ಪಂದ್ಯದಲ್ಲಿ ಕರ್ನಾಟಕದ ಬೌಲರ್‌ಗಳು ಆರ್ಭಟ ನಡೆಸಿದ್ದಾರೆ. ಕರ್ನಾಟಕದ ಸ್ಟಾರ್ ಬೌಲರ್‌ಗಳು ಅಮೋಘ ಬೌಲಿಂಗ್ ದಾಳಿ ನಡೆಸಿ ಪಂಜಾಬ್‌ ಬ್ಯಾಟರ್‌ಗಳನ್ನು ಕಾಡಿದರು. ಪರಿಣಾಮ ಪ್ರವಾಸಿ ತಂಡ ಅಲ್ಪ ಮೊತ್ತಕ್ಕೆ ಆಲೌಟ್ ಆಯಿತು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಜಸ್ಟ್‌ 29 ಓವರ್‌ಗಳಲ್ಲಿ 55 ರನ್‌ಗಳಗೆ ಸರ್ವಪತನ ಕಂಡಿತು. ಪಂಜಾಬ್ ತಂಡದ ಯಾವೊಬ್ಬ ಬ್ಯಾಟರ್‌, ಕರ್ನಾಟಕದ ಕಾರುವಕ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು. ಪರಿಣಾಮ ಪಟಪಟನೇ ವಿಕೆಟ್ ಬೀಳುತ್ತಾ ಸಾಗಿತು. ಐಪಿಎಲ್‌ನಲ್ಲಿ ಆಡಿರುವ ಅನುಭವ ಹೊಂದಿರುವ ರಮಣ್‌ ದೀಪ್‌ ಸಿಂಗ್‌ (16), ಮಯಾಂಕ್‌ ಮಾರ್ಕಂಡೆ (12) ಮಾತ್ರ ಡಬಲ್‌ ಡಿಜಿಟ್ ಮುಟ್ಟಿದರು.

Karnataka Bowlers Vasuki Kaushik and Abhilash Shetty Dismantle Punjab for 55 in Ranji Trophy

ಬಾರದ ಜೊತೆಯಾಟ

ಪಂಜಾಬ್‌ ತಂಡದ ಪರ ಜೊತೆಯಾಟಗಳು ಬಾರದೇ ಇರುವುದು ತಂಡಕ್ಕೆ ನಷ್ಟವಾಯಿತು. ಆರಂಭಿಕರು 11, ಏಳನೇ ವಿಕೆಟ್‌ಗೆ ರಮಣ್‌ ದೀಪ್‌ ಹಾಗೂ ಮಯಾಂಕ್‌ ಮಾರ್ಕಂಡೇಯ ಅವರು ಸೇರಿಸಿದ 18 ರನ್‌ಗಳೇ ತಂಡದ ಪರ ದಾಖಲಾದ ಗರಿಷ್ಠ ರನ್‌ಗಳಾಗಿದ್ದವು. ಉಳಿದಂತೆ ಬ್ಯಾಟರ್‌ಗಳು ನೆಲಕಚ್ಚಿ ನಿಂತು ಬ್ಯಾಟ್‌ ಮಾಡುವುದನ್ನು ಮರೆತು ಬಿಟ್ಟರು.

ನಾಯಕನ ನಿರ್ಧಾರ ಸಮರ್ಥಿಸಿಕೊಂಡ ಬೌಲರ್ಸ್‌

ಟಾಸ್‌ ಗೆಲ್ಲುತ್ತಿದ್ದಂತೆ ಬೌಲಿಂಗ್ ಆಯ್ಕೆ ಮಾಡಿಕೊಂಡ ನಾಯಕನ ನಿರ್ಧಾರವನ್ನು ಬೌಲರ್‌ಗಳು ಸಮರ್ಥಿಸಿಕೊಂಡರು. ಪಂಜಾಬ್‌ ಬ್ಯಾಟರ್‌ಗಳಿಗೆ ಬಹುವಾಗಿ ಕಾಡಿದ ಕರ್ನಾಟಕದ ಬೌಲರ್‌ಗಳ ಆರ್ಭಟ ಜೋರಾಗಿತ್ತು. ಪಂದ್ಯದ ನಾಲ್ಕನೇ ಓವರ್‌ನಲ್ಲೇ ಮೊದಲ ಬ್ರೇಕ್‌ ತಂದು ಕೊಟ್ಟ ಅಭಿಲಾಷ್‌ ಅಬ್ಬರಿಸಿದರು. ಟೀಮ್ ಇಂಡಿಯಾ ಪರ ಆಡುವ ಯುವ ಆಟಗಾರ ಶುಭಮನ್‌ ಗಿಲ್‌ ಅವರಿಗೆ ಅಭಿಲಾಶ್ ಶೆಟ್ಟಿ ಖೆಡ್ಡಾ ತೋಡಿದಿರು. ಇಲ್ಲಿಂದ ಪಂಜಾಬ್‌ ಚೇತರಿಸಿಕೊಳ್ಳಲೇ ಇಲ್ಲ.

ಕಳಪೆ ಬ್ಯಾಟಿಂಗ್

ಪಂಜಾಬ್‌ ತಂಡದ ಐವರು ಬ್ಯಾಟರ್‌ಗಳು ಸಿಂಗಲ್ ಡಿಜಿಟ್‌ ಎದುರಿಸುವಲ್ಲಿ ಸುಸ್ತಾದರು. ಉಳಿದಂತೆ ಹಲವು ಬ್ಯಾಟರ್‌ಗಳು ಹೆಚ್ಚಿನ ಚೆಂಡನ್ನು ಎದುರಿಸದರೂ, ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಕರ್ನಾಟಕದ ಸ್ಟಾರ್‌ ಬೌಲರ್‌ಗಳ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿ ಅಬ್ಬರಿಸಿದರು.

ವೇಗಕ್ಕೆ ನಲುಗಿದ ಪಂಜಾಬ್‌

ಕರ್ನಾಟಕ ತಂಡದ ಅನುಭವಿ ವೇಗದ ಬೌಲರ್‌ಗಳ ಶಿಸ್ತು ಬದ್ಧ ದಾಳಿಯನ್ನು ಎದುರಿಸುವಲ್ಲಿ ಪಂಜಾಬ್ ಬ್ಯಾಟರ್‌ಗಳು ವಿಫಲರಾದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ನೀಡಿದ ಪ್ರದರ್ಶನವನ್ನೇ ಕರ್ನಾಟಕದ ಬೌಲರ್‌ಗಳು ರಣಜಿಯಲ್ಲಿ ಮುಂದುವರೆಸಿದರು. ಭರವಸೆಯ ಬೌಲರ್‌ ವಾಸುಕಿ ಕೌಶಿಕ್ 4, ಅಭಿಲಾಶ್ ಶೆಟ್ಟಿ 3, ಪ್ರಸಿದ್ಧ ಕೃಷ್ಣ 2 ವಿಕೆಟ್‌ ಪಡೆದರು ಮಿಂಚಿದರು.

ಕರ್ನಾಟಕದ ಸ್ಟಾರ್ ಬ್ಯಾಟರ್‌ಗಳು ಸಮಯೋಚಿತ ಬ್ಯಾಟಿಂಗ್‌ ನಡೆಸಿ ದೊಡ್ಡ ಮೊತ್ತವನ್ನು ಕಲೆ ಹಾಕುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಗೆಲುವು ಸಾಧಿಸಲು ನೆರವಾಗುತ್ತದೆ.

Story first published: Thursday, January 23, 2025, 12:32 [IST]
Other articles published on Jan 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+