Karnataka Bulldozers: ನಟನೇ ಅಷ್ಟೇ ಅಲ್ಲಾ ಡಾರ್ಲಿಂಗ್ ಕೃಷ್ಣಾ ಬ್ಯಾಟಿಂಗ್‌ನಲ್ಲೂ ಶಕತದ ಕಮಾಲ್
ಕರ್ನಾಟಕ ಬುಲ್ಡೋಜರ್ಸ್ ತಂಡದ ಭರವಸೆಯ ಬ್ಯಾಟರ್ ಡಾರ್ಲಿಂಗ್ ಕೃಷ್ಣಾ, ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ತಮ್ಮ ಅಭಿಮಾನಿಗಳ ಮೂಲಕ ಮನೋರಂಜನೆ ನೀಡುತ್ತಿದ್ದ ಡಾರ್ಲಿಂಗ್ ಕೃಷ್ಣ, ಸಿಸಿಎಲ್‌ನಲ್ಲಿ ತಮ್ಮ ಮನಮೋಹಕ ಬ್ಯಾಟಿಂಗ್‌ನಿಂದಲೂ ಅಭಿಮಾನಿಗಳ ಮನ ಕದ್ದಿದ್ದಾರೆ. ಶನಿವಾರ ಡಾರ್ಲಿಂಗ್ ಮುಂಬೈ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರು.
ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡದ ಪರ ಡಾರ್ಲಿಂಗ್ ಅಮೋಘ ಪ್ರದರ್ಶನ ನೀಡಿದರು. ಇವರ ಆಟಕ್ಕೆ ಬ್ರೇಕ್ ಹಾಕುವ ಮುಂಬೈ ಹಿರೋಸ್ ಕನಸು ನನಸಾಗಲೇ ಇಲ್ಲ. ನಿಶ್ಚಿತವಾಗಿ ಡಾರ್ಲಿಂಗ್ ಶನಿವಾರ ಮುಟ್ಟಿದೆಲ್ಲವೂ ಚಿನ್ನ. ಮುತ್ತಿನ ನಗರಿಯಲ್ಲಿ ಡಾರ್ಲಿಂಗ್ ಕೃಷ್ಣ ಬ್ಯಾಟಿಂಗ್ ವೈಭವಕ್ಕೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಪ್ರಸಕ್ತ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಡಾರ್ಲಿಂಗ್ ಕೃಷ್ಣಾ, ಇದೇ ಫಾರ್ಮ್ ಮುಂದುವರಿಸಿದರು. ಶನಿವಾರ ನಡೆದ ಪಂದ್ಯದಲ್ಲಿ ಮೊದಲ 10 ಓವರ್‌ಗಳಲ್ಲಿ ಕೃಷ್ಣ ಶತಕ ಬಾರಿಸಿ ಅಬ್ಬರಿಸಿದರು. ಇವರು 36 ಬೌಲ್ ಎದುರಿಸಿದ್ದು, ಇದರಲ್ಲಿ 11 ಬೌಂಡರಿ ಅಮೋಘ 9 ಸಿಕ್ಸರ್ ಸಿಡಿಸಿದರು. ಈ ಮೂಲಕ ಡಾರ್ಲಿಂಗ್ ಅಜೇಯ 111 ರನ್ ಸಿಡಿಸಿ ಮಿಂಚಿದರು. ಪ್ರಸಕ್ತ ಟೂರ್ನಿಯಲ್ಲಿ ಮೂರನೇ ಬಾರಿ ಡಾರ್ಲಿಂಗ್ 50ಕ್ಕೂ ಹೆಚ್ಚು ರನ್ ಸೇರಿಸಿದರು.
ಪ್ರಸಕ್ತ ಸರಣಿಯಲ್ಲಿ ತೆಲುಗು ವಾರಿಯರ್ಸ್ ವಿರುದ್ಧ ಡಾರ್ಲಿಂಗ್ ಮೊದಲ ಪಂದ್ಯದಲ್ಲಿ 80, ಶುಕ್ರವಾರ ಚೆನ್ನೈ ವಿರುದ್ಧದ ಪಂದ್ಯದಲ್ಲಿ 50 ರನ್ ಸಿಡಿಸಿ ತಂಡಕ್ಕೆ ಆಧಾರವಾಗಿದ್ದರು.
ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡದ ಶಬೀರ್ ಅಹ್ಲುವಾಲಿಯಾ ಸೊಗಸಾದ ಬ್ಯಾಟಿಂಗ್ ನಡೆಸಿದರು. ಇವರು 16 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ 35 ರನ್ ಸಿಡಿಸಿ ಔಟ್ ಆದರು. ಉಳಿದಂತೆ ಮುಂಬೈ ತಂಡದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಮೊದಲ 10 ಓವರ್‌ಗಳಲ್ಲಿ 7 ವಿಕೆಟ್‌ಗೆ 100 ರನ್ ಸೇರಿಸಿ ಹಿನ್ನಡೆ ಅನುಭವಿಸಿದರು. ಕರ್ನಾಟಕದ ಪರ ಕರಣ್ ಆರ್ಯನ್ 3, ಕಾರ್ತಿಕ್ ಜಯರಾಮ್ 2 ವಿಕೆಟ್ ಪಡೆದರು.
ಮಂಜು ಅರ್ಧಶತಕ
ಎರಡನೇ ಬಾರಿ ಬ್ಯಾಟ್ ಮಾಡಿದ ಕರ್ನಾಟಕ ತಂಡದ ಪರ ಮಂಜುನಾಥ್ ಗೌಡ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಇವರು 26 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್ ಸಹಾಯದಿಂದ 55 ರನ್ ಸಿಡಿಸಿದರು. ಉಳಿದಂತೆ ಕಾರ್ತಿಕ್ ಜಯರಾಮ್ 17, ಮೊದಲು ಬ್ಯಾಟ್ ಮಾಡುವಾಗ ಶತಕ ಸಿಡಿಸಿದ್ದ ಡಾರ್ಲಿಂಗ್ ಕೃಷ್ಣಾ 19 ರನ್ ಸಿಡಿಸಿದರು. ಎರಡನೇ ವೇಳೆ ಬ್ಯಾಟಿಂಗ್ ಮಾಡುವಾಗ ಕರ್ನಾಟಕ 10 ಓವರ್‌ಗಳಲ್ಲಿ 3 ವಿಕೆಟ್‌ಗೆ 127 ರನ್ ಸಿಡಿಸಿತು.
ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಮುಂಬೈ ತಂಡ ಎರಡನೇ ವೇಳೆ ಬ್ಯಾಟಿಂಗ್ ಮಾಡಿದಾಗ 10 ಓವರ್‌ಗಳಲ್ಲಿ 5 ವಿಕೆಟ್‌ಗೆ 113 ರನ್ ಸಿಡಿಸಿ ಸೋಲು ಕಂಡಿತು. ಕರ್ನಾಟಕ 85 ರನ್‌ಗಳಿಂದ ಜಯ ಸಾಧಿಸಿತು. ಮುಂಬೈ ಪರ ಶಬೀರ್ ಅಹ್ಲುವಾಲಿಯಾ 51 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications