ಕರ್ನಾಟಕದ ಭರವಸೆಯ ಆಟಗಾರರಾದ ಶ್ರೇಯಸ್ ಗೋಪಾಲ್ (70ಕ್ಕೆ 4) ಹಾಗೂ ವಿಜಯ್‌ಕುಮಾರ್ ವೈಶಾಖ್ (44ಕ್ಕೆ 3) ಇವರುಗಳ ಮಾರಕ ದಾಳಿಯ ನೆರವಿನಿಂದ ಕರ್ನಾಟಕ ಸಿ ಗುಂಪಿನ ಪಂದ್ಯದಲ್ಲಿ ಬಿಹಾರ ತಂಡವನ್ನು ಮಣಿಸಿದೆ.
ಮಂಗಳವಾರದ ಆಟದ ಆರಂಭದಲ್ಲೇ ಕರ್ನಾಟಕ 7 ವಿಕೆಟ್ ನಷ್ಟಕ್ಕೆ 287 ರನ್ ಸೇರಿಸಿದಾಗ ಡಿಕ್ಲೇರ್ ಮಾಡಿಕೊಂಡಿತು. ಇನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಬಿಹರಾ 212 ರನ್‌ಗಳಿಗೆ ಆಲೌಟ್ ಆಯಿತು. ಅಲ್ಪ ಮೊತ್ತವನ್ನು ಹಿಂಬಾಲಿಸಿದ ಕರ್ನಾಟಕ 2 ವಿಕೆಟ್ ನಷ್ಟಕ್ಕೆ 70 ರನ್ ಸೇರಿಸಿದ್ದು, ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಕರ್ನಾಟಕ ಸಿ ಗುಂಪಿನ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡಿದಿದೆ. ಆಡಿದ ಮೂರು ಪಂದ್ಯಗಳಲ್ಲಿ ಕರ್ನಾಟಕ 1 ಜಯ, 2 ಡ್ರಾ ಸಾಧಿಸಿದ್ದು, 8 ಅಂಕಗಳನ್ನು ಕಲೆ ಹಾಕಿದೆ.

ಎರಡನೇ ಇನಿಂಗ್ಸ್ ಆರಂಭಿಸಿದ ಬಿಹಾರ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ವೈಭವ್ ಸೂರ್ಯವಂಶಿ ಹಾಗೂ ಶರ್ಮನ್ ನಿಗ್ರೋಧ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಮೂರನೇ ವಿಕೆಟ್‌ಗೆ ಬಾಬುಲ್ ಕುಮಾರ್ (44) ಹಾಗೂ ಶಕೀಬುಲ್ ಗನಿ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಕಟ್ಟಿಹಾಕುವಲ್ಲಿ ಕರ್ನಾಟಕದ ಬೌಲರ್‌ಗಳು ವಿಫಲರಾದರು. ಈ ಜೋಡಿ ಸುಮಾರು 38 ಓವರ್ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿ ಶತಕದ ಜೊತೆಯಟವನ್ನು ನೀಡಿತು.
ಬಿಹಾರ ತಂಡದ ಪರ ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಘ್ ಪ್ರದರ್ಶನ ನೀಡಿದ ಶಕೀಬುಲ್ ಗನಿ ಅಬ್ಬರಿಸಿದರು. ಒಂದು ಬದಿಯಲ್ಲಿ ವಿಕೆಟ್‌ಗಳು ಬೀಳುತ್ತಾ ಇದ್ದರೂ, ಒಂದು ಬದಿಯಲ್ಲಿ ಸ್ಥಿರವಾಗಿ ನಿಂತು ಬ್ಯಾಟ್ ಮಾಡಿದ ಶಕೀಬುಲ್ ಗನಿ ಶತಕ ಬಾರಿಸಿ ಸಂಭ್ರಮಿಸಿದರು. ಇವರು 194 ಎಸೆತಗಳಲ್ಲಿ 130 ರನ್ ಸಿಡಿಸಿದರು. ಇದರಲ್ಲಿ 15 ಬೌಂಡರಿ, 4 ಸಿಕ್ಸರ್ ಸೇರಿವೆ.
ಉಳಿದಂತೆ ಬೇರೆ ಯಾವ ಬ್ಯಾಟರ್ ಸಹ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಕರ್ನಾಟಕದ ಪರ ಶ್ರೇಯಸ್ ಗೋಪಾಲ್ 70 ರನ್ ನೀಡಿ 4 ವಿಕೆಟ್ ಕಬಳಿಸದರು. ವೇಗಿ ವಿಜಯ್ ಕುಮಾರ್ ವೈಶಾಖ್ 44 ರನ್ ನೀಡಿ ಮೂರು ವಿಕೆಟ್ ಪಡೆದರು.
ಅಲ್ಪ ಗುರಿಯನ್ನು ಹಿಂಬಾಲಿಸಿದ ಕರ್ನಾಟಕ ತಂಡದ ಆರಂಭಿಕ ಮಯಾಂಕ್ ಅಗರ್‌ವಾಲ್ ಹಾಗೂ ಆರ್.ಸ್ಮರಣ್ ಜವಾಬ್ದಾರಿ ಮರೆತರು. ನಿಕಿನ್ ಜೋಸ್ ಹಾಗೂ ಅಭಿನವ್ ಮನೋಹರ್ ತಂಡವನ್ನು ಗೆಲುವಿನ ದಡ ದಾಟಿಸುವಲ್ಲಿ ಶ್ರಮಿಸಿದರು.
ಕರ್ನಾಟಕ ತಂಡ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿತು. ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಅಬ್ಬರಿಸಿದ ಶ್ರೇಯಸ್ ಅಬ್ಬರಿಸಿದರು. ರಾಜ್ಯದ ಪರ ನಾಯಕ ಮಯಾಂಕ್ ಅಗರ್‌ವಾಲ್ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ತಂಡಕ್ಕೆ ಆಧಾರವಾಗಿದ್ದರು. ಉಳಿದಂತೆ ರಾಜ್ಯದ ಆಟಗಾರರು ಸಂಘಟಿತ ಆಟದ ಪ್ರದರ್ಶನ ನೀಡಿದರು.