ಟೀಂ ಇಂಡಿಯಾ ಗೆಲುವಿಗೂ ಸಿದ್ದರಾಮಯ್ಯ ಟ್ವೀಟ್ ಗೂ ಲಿಂಕ್!
ಬೆಂಗಳೂರು, ಮಾರ್ಚ್ 07: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರೀಡಾಪ್ರೇಮಿ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತಿರುವ ವಿಷಯ.
ಬೆಂಗಳೂರಿನಲ್ಲಿ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯವನ್ನು ಬಗ್ಗೆ ಸಿದ್ದರಾಮಯ್ಯ ಅವರು ಕೂಡಾ ಕುತೂಹಲದಿಂದ ನೋಡಿದ್ದಾರೆ. ನಿರಂತರವಾಗಿ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಹಾಸ್ಯಮಯ ಟ್ವೀಟೊಂದು ಇಲ್ಲಿದೆ ನೋಡಿ...[ಟೀಂ ಇಂಡಿಯಾ ಗೆಲ್ಲಲು ಪುಟ್ಟಗೌರಿ ಕಾರಣವೇ?]
ಇದನ್ನು ಗಮನಿಸಿದ ಟ್ವಿಟ್ಟರ್ ಬಳಕೆದಾರರೊಬ್ಬರು, ಸಿದ್ದರಾಮಯ್ಯ ಟ್ವೀಟ್ ನಿಂದಾಗಿ ಟೀಂ ಇಂಡಿಯಾ ಗೆಲುವು ಸಾಧಿಸಿತು ಎಂದು ಹಾಸ್ಯ ಚಟಾಕಿ ಟ್ವೀಟ್ ಮಾಡಿದ್ದಾರೆ.
ಟೀಂ ಇಂಡಿಯಾ ಗೆಲ್ಲಲು ಬೆಂಗಳೂರಿನ ಹವಾಮಾನ, ಪುಟ್ಟಗೌರಿ ಸೀರಿಯಲ್, ಮಂತ್ರಿಸಿದ ನಿಂಬೆಹಣ್ಣು ಹೀಗೆ ಥರಾವರಿ ಉತ್ತರಗಳ ನಡುವೆ ಸಿಎಂ ಆಫ್ ಕರ್ನಾಟಕ ಟ್ವಿಟ್ಟರ್ ಐಡಿಯಿಂದ ಬರುತ್ತಿರುವ ಕ್ರಿಕೆಟ್ ಪಂದ್ಯದ ಬಗ್ಗೆ ಇರುವ ಟ್ವೀಟ್ ಕೂಡಾ ಹಾಸ್ಯಕ್ಕೀಡಾಗಿದೆ.
ಸಿದ್ದರಾಮಯ್ಯ ಅವರು ಶಾಲಾ ದಿನಗಳಲ್ಲಿ ಕ್ರೀಡಾಪಟುವಾಗಿದ್ದವರು, ಕಬಡ್ಡಿ ಆಡುತ್ತಿದ್ದರು. ಕಾಲೇಜು ದಿನಗಳಲ್ಲಿ ನಂತರ ಬೆಂಗಳೂರು ಸೇರಿದ ಮೇಲೆ ಕ್ರಿಕೆಟ್ ಮ್ಯಾಚ್ ನೋಡುವ ಹುಚ್ಚು ಬೆಳೆಸಿಕೊಂಡರು. ಈಗ ಕರ್ನಾಟಕ ಮುಖ್ಯಮಂತ್ರಿಗಳ ಅಧಿಕೃತ ಖಾತೆಯಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಬಗ್ಗೆ ಟ್ವೀಟ್ ಗಳು ಬಂದಿವೆ...

ಕಬಡ್ಡಿ, ಕ್ರಿಕೆಟ್ ಇಷ್ಟ
ಶಾಸಕರ ದಿನಾಚರಣೆ ಸಂದರ್ಭದಲ್ಲಿ ಕಬಡ್ಡಿ ಆಡಲು ಹೋಗಿ ಸ್ನಾಯುಸೆಳೆತಕ್ಕೀಡಾಗಿ ತೊಂದರೆ ಅನುಭವಿಸಿದೆ. ಆದರೆ, ಕ್ರೀಡೆ ಬಗ್ಗೆ ನನ್ನ ಉತ್ಸಾಹ ಬತ್ತಿಲ್ಲ. ಬಿಡುವಾದಾಗ ಕ್ರಿಕೆಟ್ ಪಂದ್ಯ ನೋಡುವುದನ್ನು ತಪ್ಪಿಸುವುದಿಲ್ಲ ಎಂದು ಈ ಹಿಂದೆ ಸಿದ್ದರಾಮಯ್ಯ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಮುಖ್ಯಮಂತ್ರಿಗಳಿಂದ ಅಭಿನಂದನೆ
ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲು ಸಂಘಟಿತ ಹೋರಾಟವೇ ಕಾರಣ ಎಂದು ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
ಸಿದ್ದರಾಮಯ್ಯ ಟ್ವೀಟ್
ಸಿಎಂ ಸಿದ್ದರಾಮಯ್ಯ ಟ್ವೀಟ್ ನಿಂದ ಟೀಂ ಇಂಡಿಯಾಕ್ಕೆ ಗೆಲುವಂತೆ.
ಪಂದ್ಯದ ಬಗ್ಗೆ ಸಿದ್ದರಾಮಯ್ಯ
ಟೆಸ್ಟ್ ಪಂದ್ಯದ ಬಗ್ಗೆ ಪ್ರತಿದಿನ ಒಂದಾದರೂ ಅಪ್ಡೇಟ್ ಸಿದ್ದರಾಮಯ್ಯ ಅವರ ಐಡಿಯಿಂಡ ಬರುತ್ತಿತ್ತು. ಇದನ್ನು ಬಳಸಿಕೊಂಡು ಟ್ರಾಲ್ ಗಳು ಸೃಷ್ಟಿಯಾಗುತ್ತಿತ್ತು.
ರಾಹುಲ್ ಹೊಗಳಲಿಲ್ಲ ಏಕೆ?
6 ವಿಕೆಟ್ ಪಡೆದ ರವೀಂದ್ರ ಜಡೇಜರನ್ನು ಹೊಗಳಿದ ಸಿದ್ದರಾಮಯ್ಯ ಅವರು ಕನ್ನಡಿಗ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಬಗ್ಗೆ ಟ್ವೀಟ್ ಮಾಡಿಲ್ಲ ಏಕೆ?
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications