ವಿಜಯ್ ಹಜಾರೆ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ: ಮನೀಶ್ ಪಾಂಡೆ ನಾಯಕ

ಬೆಂಗಳೂರು, ಸೆಪ್ಟೆಂಬರ್ 21: ವಿಜಯ್ ಹಜಾರೆ ಟ್ರೋಫಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಮನೀಶ್ ಪಾಂಡೆಗೆ ನಾಯಕತ್ವ ವಹಿಸಲಾಗಿದೆ.
ವಿಜಯ್ ಹಜಾರೆ ಏಕದಿನ ಪಂದ್ಯಾವಳಿಗಳು ಸೆಪ್ಟೆಂಬರ್ 24 ರಿಂದ ಆರಂಭವಾಗಿ ಅಕ್ಟೋಬರ್ 13ರ ವರೆಗೆ ನಡೆಯಲಿದ್ದು, ಇದಕ್ಕೆ ರಾಜ್ಯ ತಂಡವನ್ನು ಇಂದು ಪ್ರಕಟಿಸಲಾಗಿದೆ.
ವಿನಯ್ ಕುಮಾರ್, ರಾಬಿನ್ ಉತ್ತಪ್ಪ, ಸ್ಟುವರ್ಟ್ ಬಿನ್ನಿ ಸೇರಿ ಹಲವು ಹಿರಿಯರು ಬೇರೆ ರಾಜ್ಯಗಳ ಪರವಾಗಿ ಆಡುತ್ತಿರುವ ಕಾರಣ ಈ ಬಾರಿಯ ರಾಜ್ಯ ತಂಡದ ಬಗ್ಗೆ ಭಾರಿ ಕುತೂಹಲ ಇತ್ತು.
ಮನೀಶ್ ಪಾಂಡೆಗೆ ನಾಯಕತ್ವ ಜವಾಬ್ದಾರಿ ನೀಡಲಾಗಿದ್ದು, ಕೆ.ಎಲ್.ರಾಹುಲ್ ಅವರನ್ನು ಉಪನಾಯಕನನ್ನಾಗಿ ಮಾಡಲಾಗಿದೆ. ಮುಖ್ಯ ಕೋಚ್ ಆಗಿ ಯೆರೆ ಕೆ ಗೌಡ ಕಾರ್ಯನಿರ್ವಹಿಸಿದ್ದಾರೆ. ಬೌಲಿಂಗ್ ತರಬೇತುದಾರ ಅರವಿಂದ್ ಎಸ್, ಕ್ಷೇತ್ರ ರಕ್ಷಣೆ ಕೋಚ್ ಆಗಿ ಶಬರೀಶ್ ಎಸ್ ಅವರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ರಾಜ್ಯದ ಪೂರ್ಣ ತಂಡ ಇಂತಿದೆ.
ಮನೀಶ್ ಪಾಂಡೆ (ನಾಯಕ)
ಕೆ.ಎಲ್.ರಾಹುಲ್ (ಉಪನಾಯಕ)
ದೇವದತ್ತ ಪಡಿಕಲ್
ಸಿದ್ಧಾರ್ಥ ಕೆವಿ
ಪ್ರವೀಣ್ ದುಬೆ
ಪವನ್ ದೇಶಪಾಂಡೆ
ಅಭಿಶೇಕ್ ರೆಡ್ಡಿ
ಗೌತಮ್ ಕೆ
ಸುಚಿತ್ ಜೆ
ಮಿಥುನ್ ಎ
ಪ್ರಸಿದ್ಧ ಕೃಷ್ಣ
ರೊನಿತ್ ಮೋರೆ
ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್)
ಶ್ರೇಯಸ್ ಗೋಪಾಲ್
ಕೌಶಿಕ್ ವಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications