For Quick Alerts
ALLOW NOTIFICATIONS  
For Daily Alerts
 

ಪಂದ್ಯದ ನಂತರ ಹಠಾತ್ ಸಾವಿಗೀಡಾದ ಕರ್ನಾಟಕ ಕ್ರಿಕೆಟಿಗ ಹೊಯ್ಸಳ

ಕರ್ನಾಟಕದ ಮಾಜಿ ಜೂನಿಯರ್ ಕ್ರಿಕೆಟಿಗ ಕೆ ಹೊಯ್ಸಳ ಅವರು ಗುರುವಾರ, ಫೆಬ್ರವರಿ 22ರಂದು ಹಠಾತ್ ಹೃದಯ ಸ್ತಂಭನಕ್ಕೆ ಒಳಗಾಗಿ ಮೈದಾನದಲ್ಲೇ ಕೊನೆಯುಸಿರೆಳೆದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಏಜಿಸ್ ಸೌತ್ ಝೋನ್ ಪಂದ್ಯಾವಳಿಯ ವೇಳೆ ಕ್ರಿಕೆಟ್ ಮೈದಾನದಲ್ಲಿ ಈ ದುರಂತ ಘಟನೆ ನಡೆದಿದ್ದು, ಕ್ರೀಡಾ ಸಮುದಾಯವನ್ನು ಬೆಚ್ಚಿ ಬೀಳಿಸಿದೆ.

Karnataka Cricketer K Hoysala Died Suddenly Due to Cardiac Arrest After the Match

34 ವರ್ಷದ ಕರ್ನಾಟಕ ಕ್ರಿಕೆಟಿಗ ಕೆ ಹೊಯ್ಸಳ ಅವರು ಬೆಂಗಳೂರಿನ ಆರ್‌ಎಸ್‌ಐ ಮೈದಾನದಲ್ಲಿ ನಡೆದ ದಕ್ಷಿಣ ವಲಯ ಐಎ ಮತ್ತು ಎಡಿ ಪಂದ್ಯಾವಳಿಯಲ್ಲಿ ತಮಿಳುನಾಡು ವಿರುದ್ಧದ ಪಂದ್ಯದ ನಂತರ ಹೃದಯಾಘಾತದಿಂದ ಶುಕ್ರವಾರ ನಿಧನರಾದರು.

ಹೊಯ್ಸಳ ತನ್ನ ತಂಡವನ್ನು ಊಟಕ್ಕೆ ಸೇರಲು ತಯಾರಿ ನಡೆಸುತ್ತಿದ್ದಾಗ ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ಅನಿರೀಕ್ಷಿತ ಸಾವಿನ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕರ್ನಾಟಕ ಏಜಿಸ್​​ ತಂಡದ ಪರ ಆಡುತ್ತಿದ್ದ ಕೆ ಹೊಯ್ಸಳ ಮೈದಾನದಲ್ಲೇ ಕುಸಿದು ಬಿದ್ದ ನಂತರ, ಆನ್-ಫೀಲ್ಡ್ ವೈದ್ಯಕೀಯ ಸಿಬ್ಬಂದಿಯಿಂದ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿದರು.

ಪಿಸಿಯೋಗಳ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಹೊಯ್ಸಳ ಅವರು ಚಿಕಿತ್ಸೆಗೆ ಸ್ಪಂದಿಸಲು ವಿಫಲರಾದರು. ಅವರನ್ನು ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ತ್ವರಿತವಾಗಿ ಸಾಗಿಸಲಾಯಿತು.

ಕ್ರಿಕೆಟಿಗನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಂತೆಯೇ ಕುಟುಂಬ ಸದಸ್ಯರಿಗೆ ತಕ್ಷಣ ಈ ವಿಷಯ ತಿಳಿಸಲಾಯಿತು. ದುರಂತವೆಂದರೆ ಹೊಯ್ಸಳ ಆಸ್ಪತ್ರೆ ತಲುಪುವಷ್ಟರಲ್ಲಿ ತಡವಾಗಿತ್ತು. ಕೂಲಂಕುಷ ಪರೀಕ್ಷೆ ನಡೆಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ವಯೋಮಿತಿಯ ಪಂದ್ಯಾವಳಿಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಕೆ ಹೊಯ್ಸಳ, ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್) ಬದಲಾದ ಕೆಎಸ್‌ಸಿಎ ಮಹಾರಾಜ ಟಿ20 ಟ್ರೋಫಿಯಲ್ಲಿ ಶಿವಮೊಗ್ಗ ಲಯನ್ಸ್ ತಂಡದ ಪರ ಕೆ ಹೊಯ್ಸಳ ಆಡಿದ್ದರು.

ಕೆ ಹೊಯ್ಸಳ ಅವರು ತಮ್ಮ ಕ್ರಿಕೆಟ್ ಪರಾಕ್ರಮಕ್ಕೆ ಹೆಸರುವಾಸಿಯಾಗಿದ್ದರು ಮತ್ತು ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಶಿವಮೊಗ್ಗ ಲಯನ್ಸ್ ತಂಡದ ಪ್ರಮುಖ ಬೌಲರ್ ಆಗಿದ್ದರು. ಯುವ ಆಟಗಾರ ಈ ಹಿಂದೆ 25 ವರ್ಷದೊಳಗಿನವರ ವಿಭಾಗದಲ್ಲಿ ಕರ್ನಾಟಕ ತಂಡಕ್ಕೆ ಅಮೂಲ್ಯ ಆಸ್ತಿಯಾಗಿದ್ದರು. ನಂತರ ಕೆ ಹೊಯ್ಸಳ ಅವರ ಕೊಡುಗೆ ಕರ್ನಾಟಕ ಪ್ರೀಮಿಯರ್ ಲೀಗ್‌ಗೂ ವಿಸ್ತರಿಸಲ್ಪಟ್ಟವು.

ಕ್ರಿಕೆಟ್ ಅಭಿಮಾನಿಯೊಬ್ಬರು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಕರ್ನಾಟಕದ ಯುವ ಕ್ರಿಕೆಟಿಗ ಕೆ ಹೊಯ್ಸಳ ಅವರ ದುರಂತ ಸಾವಿನ ಬಗ್ಗೆ ವರದಿ ಮಾಡಿದ್ದಾರೆ. ಅವರು ಬೆಂಗಳೂರಿನಲ್ಲಿ ಪಂದ್ಯದ ನಂತರದ ಹಡಲ್‌ನಲ್ಲಿ ಹೃದಯ ಸ್ತಂಭನದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

Story first published: Saturday, February 24, 2024, 10:39 [IST]
Other articles published on Feb 24, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+