ಬಾಗಲಕೋಟೆಯ ಪ್ರತಿಭೆಗೆ ರಿಷಭ್ ಪಂತ್ ಸಹಾಯ: ಬಡ ವಿದ್ಯಾರ್ಥಿನಿ ಭವಿಷ್ಯಕ್ಕೆ "ಜ್ಯೋತಿ"
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಷಭ್ ಪಂತ್ ಪ್ರವಾಸದಲ್ಲಿ ಇಂಗ್ಲೆಂಡ್ ಭರ್ಜರಿ ಪ್ರದರ್ಶನ ನೀಡಿ ಸುದ್ದಿ ಮಾಡಿದ್ದಾರೆ. ಲೀಡ್ಸ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಶತಕ ಸಾಧನೆ ಮಾಡಿದ್ದ ಪಂತ್, ಅಬ್ಬರಿಸಿದ್ದರು. ಈ ಅಮೋಘ ಬ್ಯಾಟಿಂಗ್‌ನಿಂದ ಅಭಿಮಾನಿಗಳ ಮನ ಗೆದ್ದಿದ್ದ ಪಂತ್ ಈಗ ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆದು ಸುದ್ದಿಯಲ್ಲಿದ್ದಾರೆ.
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ರಿಷಭ್ ಪಂತ್, ಈ ಹಂತ ತಲುಪುವಲ್ಲಿ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಇವರು ಈಗ ದೊಡ್ಡ ಹಂತವನ್ನು ತಲುಪಿದ ಮೇಲೆ ಬಡವನ್ನು ಕಂಡು ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಈಗ ಸೂಪರ್ ಸ್ಟಾರ್ ವಿಕೆಟ್ ಕೀಪರ್. ಈಗ ಪಂತ್ ತಮ್ಮ ಬಳಿ ಇರುವ ಹಣದ ಸಹಾಯದಿಂದ ಸಮಾಜದಲ್ಲಿರುವ ಬಡ ವಿದ್ಯಾರ್ಥಿಗಳಿಎ ನೆರವಗುವ ಕಾರ್ಯವನ್ನು ಮಾಡಲು ಮುಂದಾಗಿದ್ದಾರೆ.

ಬಾಗಲೋಕಟೆ ಜಿಲ್ಲೆಯ ಬೀಳಗಿ ತಾಲುಕಿನ ರಬಕವಿಯ ಕ್ಯೋತಿ ಕಣಬೂರ್ ಅವರ ನೋವಿಗೆ ರಿಷಭ್ ಪಂತ್ ಸ್ಪಂದಿಸಿದ್ದಾರೆ. ಜ್ಯೋತಿ ದ್ವಿತಿಯ ಪಿಯೂಸಿ ಪರೀಕ್ಷೆಯಲ್ಲಿ 83 ಪರ್ಸೆಂಟೇಜ್ ಮಾಡಿರುವ ಜ್ಯೋತು ಬಿಸಿಎ ಮಾಡುವ ಆಸೆಯನ್ನು ಹೊಂದಿದ್ದರು. ಆದರೆ ಕಾಲಿಜಿನ ಶುಲ್ಕ ಭರಿಸಲು ಸಾಧ್ಯವಾಗದೆ ಒದ್ದಾಟ ನಡೆಸುತ್ತಿದ್ದರು. ಹೀಗಾಗಿ ತಾವು ಇಷ್ಟು ಪಟ್ಟು ಕಲಿಯಬೇಕು ಎಂಬ ವಿಷಯ ಕಲಿಯುವುದು ಆಸೆ ಆಗಿಯೇ ಉಳಿದಿತ್ತು. ಆದರೆ ಪಂತ್ ಇವರ ಆಸೆಗೆ ನೀರು ಹಾಕಿ ಪೋಷಿಸುವ ಕಾರ್ಯವನ್ನು ಮಾಡಿದ್ದಾರೆ.
ಜ್ಯೋತಿ ಜಮಖಂಡಿ ತಾಲುಕಿನ ಬಿಎಲ್‌ಡಿಇ ಕಾಲೇಜಿನಲ್ಲಿ ಬಿಸಿಎ ಪ್ರವೇಶ ಪಡೆಯಲು ಅವರಿಗೆ ಬೇಕಿದ್ದ 40 ಸಾವಿರ ರೂಪಾಯಿಗಳ ಸಹಾಯವನ್ನು ರಿಷಭ್ ಪಂತ್ ಮಾಡಿದ್ದಾರೆ.

ಪಂತ್‌ಗೆ ವಿಷಯ ಮುಟ್ಟಿದ್ದು ಹೇಗೆ?
ಜ್ಯೋತಿ ಅವರ ನೋವನ್ನು ಕಂಡು ಅದೇ ಗ್ರಾಮದ ಗುತ್ತಿಗೆದಾರ್ ಅನಿಲ್ ಹುಣಶಿಕಟ್ಟಿ, ವಿಕೆಟ್ ಕೀಪರ್ ಪಂತ್ ಅವರ ಆಪ್ತ ಸ್ನೇಹಿತ ಅಕ್ಷಯ್ ನಾಯರಕ್ ಎಂಬುವರನ್ನು ಸಂಪರ್ಕಿಸಿದ್ದಾರೆ. ಈ ಸುದ್ದಿಯನ್ನು ಅಕ್ಷಯ್ ಅವರು ಪಂತ್ ಅವರಿಗೆ ಮುಟ್ಟಿಸುವ ಕೆಲಸವನ್ನು ಮಾಡಿದ್ದಾರೆ. ಪಂತ್ ಕೂಡಲೇ ಬಾಲಕಿಗೆ ಸಹಾಯ ಮಾಡಿ ಹೃದಯವೈಶಾಲ್ಯತೆ ಮೆರೆದಿದ್ದಾರೆ.
ರಿಷಭ್ ಪಂತ್ ಮಾಡಿದ ಸಹಾಯದ ಬಗ್ಗೆ ಮಾತನಾಡಿರುವ ಜ್ಯೋತಿ, "ನಾನು ಚೆನ್ನಾಗಿ ಓದಿ ರಿಷಭ್ ಪಂತ್ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವೆ. ಅವರು ಮಾಡಿದ ಸಹಾಯದ ದೊಡ್ಡದು. ನಾನು ಈ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ಜ್ಯೋತಿ ತಿಳಿಸಿದ್ದಾರೆ.
ಕ್ರಿಕೆಟ್ ಆಟಗಾರರು ಹೀಗೆ ಬಡ ವಿದ್ಯಾರ್ಥಿಗೆ ಸಹಾಯ ಮಾಡುತ್ತಿರುವುದು ಇದು ಮೊದಲೇನಲ್ಲ. ಇದಕ್ಕೂ ಮೊದಲು ಕೆಎಲ್ ರಾಹುಲ್ ಸಹ ಬಡ ವಿದ್ಯಾರ್ಥಿಯ ವ್ಯಾಸಂಗಕ್ಕೆ ಸಹಾಯ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಇನ್ನು ಹಲವು ಆಟಗಾರರು ಇದೇ ಕಾರ್ಯವನ್ನು ತೆರೆಯ ಹಿಂದೆ ಮಾಡುತ್ತಲೇ ಇದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications