ವಿಜಯ್ ಹಜಾರೆ ಟ್ರೋಫಿಗೆ 22 ಮಂದಿಯ ತಂಡ ಪ್ರಕಟಿಸಿದ ಕರ್ನಾಟಕ

ಬೆಂಗಳೂರು: ಮುಂಬರಲಿರುವ ವಿಜಯ್ ಹಜಾರೆ ಟ್ರೋಫಿ ಟಿ20 ಟೂರ್ನಿಗಾಗಿ ಕರ್ನಾಟಕ 22 ಮಂದಿಯ ತಂಡ ಪ್ರಕಟಿಸಿದೆ. ಆರ್ ಸಮರ್ಥ್ ತಂಡದ ನಾಯಕನಾಗಿ ಹೆಸರಿಸಲ್ಪಟ್ಟಿದ್ದಾರೆ. ಶರತ್ ಬಿಆರ್ ಮತ್ತು ರಕ್ಷಿತ್ ಎಸ್ ವಿಕೆಟ್ ಕೀಪರ್‌ಗಳಾಗಿ ಹೆಸರಿಸಲ್ಪಟ್ಟಿದ್ದಾರೆ. ಫೆಬ್ರವರಿ 18ರಿಂದ ವಿಜಯ್ ಹಜಾರೆ ಆರಂಭಗೊಳ್ಳಲಿದೆ.
ಮುಂಬೈ, ಬರೋಡಾ, ಕೋಲ್ಕತ್ತಾ, ಇಂದೋರ್, ಬೆಂಗಳೂರು, ಕೇರಳ ತಾಣಗಳಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿದೆ. ಚೆನ್ನೈನಲ್ಲೂ ಪಂದ್ಯ ನಡೆಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಯೋಚಿಸಿತ್ತು. ಆದರೆ ಚೆನ್ನೈ ಈಗಾಗಲೇ ಭಾರತ-ಇಂಗ್ಲೆಂಡ್ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿರುವುದರಿಂದ ಬಿಸಿಸಿಐ ಬೇರೆಡೆ ಚಿತ್ತ ಹರಿಸಿದೆ.
ಚೆನ್ನೈ ತಾಣಕ್ಕೆ ಬದಲಾಗಿ ಬಿಸಿಸಿಐ ಕೊಚ್ಚಿಯತ್ತ ದೃಷ್ಟಿ ನೆಟ್ಟಿದೆ ಎನ್ನಲಾಗಿದೆ. ವಿಜಯ್ ಹಜಾರೆಯಲ್ಲಿ ಒಟ್ಟು 38 ತಂಡಗಳು ಪಾಲ್ಗೊಳ್ಳಲಿವೆ. ಒಟ್ಟು 34 ದಿನಗಳ ಕಾಲ ಟೂರ್ನಿ ನಡೆಯಲಿದೆ. ವಿಜಯ್ ಹಜಾರೆ ಬಳಿಕ ಏಪ್ರಿಲ್‌ನಲ್ಲಿ ಐಪಿಎಲ್ 2021 ಆರಂಭಗೊಳ್ಳಲಿದೆ.
ವಿಜಯ್ ಹಜಾರೆಗೆ ಕರ್ನಾಟಕ ತಂಡ
ಸಮರ್ಥ್ ಆರ್ (ನಾಯಕ), ದೇವದತ್ ಪಡಿಕ್ಕಲ್, ರೋಹನ್ ಕದಮ್, ನಿಶ್ಚಲ್ ಡಿ, ಕರುಣ್ ನಾಯರ್, ಶ್ರೀಜಿತ್ ಕೆಎಲ್, ಶರತ್ ಬಿಆರ್ (ವಿಕೆ), ರಕ್ಷಿತ್ ಎಸ್ (ವಿಕೆ), ಅನಿರುದ್ಧ್ ಜೋಶಿ, ಸಿದ್ಧಾರ್ಥ್ ಕೆವಿ, ನಿಕಿನ್ ಜೋಶ್, ಶ್ರೇಯಸ್ ಗೋಪಾಲ್, ಕೆ ಗೌತಮ್, ಸುಚಿತ್ ಜೆ, ಆದಿತ್ಯ ಸೋಮಣ್ಣ, ಶುಭಾಂಗ್ ಹೆಗ್ಡೆ, ಮಿಥುನ್ ಎ, ಪ್ರಸಿದ್ಧ್ ಎಂ ಕೃಷ್ಣ, ರೋನಿತ್ ಮೋರೆ, ವ್ಯಾಸಕ್ ವಿಜಯ್ ಕುಮಾರ್, ಮನೋಜ್ ಭಂಡಾಜೆ, ದರ್ಶನ್ ಎಂಬಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications