ಆಡುವಾಗಲೇ ಕರ್ನಾಟಕದ ವೇಗಿ ಅಕ್ಷಯ್‌ಗೆ ಹಾರ್ಟ್ ಅಟ್ಯಾಕ್
ಯುವಕರು ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಹೆಚ್ಚಾಗಿದೆ. ದೇಹವನ್ನು ದಂಡಿಸುತ್ತಾ, ಆರೋಗ್ಯವಾಗಿರುವ ಅದೆಷ್ಟೋ ಯುವಕರ ಹೃದಯ ಒಮ್ಮಿಂದೊಮ್ಮೆಲೆ ಬಡಿಯುವುದು ನಿಂತುಕೊಳ್ಳುತ್ತಿದೆ. ಈ ಸಾಲಿಗೆ ಈಗ ಕರ್ನಾಟಕದ ವೇಗದ ಬೌಲರ್ ಎಸ್‌ಎಲ್ ಅಕ್ಷಯ್ ಸೇರಿಕೊಂಡಿದ್ದಾರೆ.
ಶಿವಮೊಗ್ಗ ಮೂಲದ ವೇಗಿ ಬೆಂಗಳೂರಿನ ಎಸ್‌ಎಲ್‌ಎಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯದ ವೇಳೆ ಕುಸಿದು ಬಿದ್ದು ಕೊನೆಯುಸಿರು ಎಳೆದಿದ್ದಾರೆ. ಅಕ್ಷಯ್ ಕರ್ನಾಟಕ ರಣಜಿ ತಂಡದ ಪರ ಆಡಿ ಗಮನ ಸೆಳೆದ ಆಟಗಾರ. ಇವರು ಸ್ಥಳೀಯ ಟಿ20 ಲೀಗ್‌ಗಳಲ್ಲೂ ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸಿದ್ದರು. ಇವರು ಕರ್ನಾಟಕದ ಪರ 6 ಪ್ರಥಮ ದರ್ಜೆ ಪಂದ್ಯ, 3 ಲಿಸ್ಟ್ ಎ ಪಂದ್ಯ, 9 ಟಿ20 ಪಂದ್ಯಗಳಲ್ಲಿ ಆಡಿದ್ದರು.

ಅಕ್ಷಯ್ ಭಾನುವಾರ ಎಸ್‌ಎಲ್‌ಎಸ್ ಮೈದಾನದಲ್ಲಿ ಸಫೀಯರ್ ಕ್ರಿಕೆಟ್ ಕ್ಲಬ್ ಹಾಗೂ ಭಾರತ್ ಕ್ರಿಕೆಟ್ ಕ್ಲಬ್ ನಡುವಿನ ಥರ್ಡ್ ಡಿವಿಷನ್ ಪಂದ್ಯದಲ್ಲಿ ಇವರು ಕಣಕ್ಕೆ ಇಳಿದಿದ್ದರು. ಇವರು ಸ್ಲಿಪ್‌ನಲ್ಲಿ ಫೀಲ್ಡ್ ಮಾಡುವಾಗ ಸುಸ್ತು ಕಾಣಿಸಿಕೊಂಡಿದ್ದು, ಮೈದಾನದಿಂದ ಹೊರ ಬಂದು ವಿಶ್ರಾಂತಿ ಪಡೆದಿದ್ದಾರೆ. ವಿಶ್ರಾಂತಿ ಕೋಠಡಿಯಲ್ಲೇ ಅಕ್ಷಯ್ ಕುಸಿದು ಬಿದ್ದ ಪರಿಣಾಮ, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆ ಸೇರುವಷ್ಟರಲ್ಲಿ ಅಕ್ಷರ್ ಪ್ರಾಣ ಬಿಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದಾರೆ.
ಅಕ್ಷಯ್ ಅವರ ನಿಧನಕ್ಕೆ ಟೀಮ್ ಇಂಡಿಯಾ ತಂಡದ ಮಾಜಿ ವೇಗಿ ದೊಡ್ಡ ಗಣೇಶ್ ಕಂಬನಿ ಮಿಡಿದಿದ್ದಾರೆ. ಇವರ ಸಾವಿನ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರು ಪ್ರತಿಭಾನ್ವಿತ ಆಟಗಾರ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಹೃದಯಾಘಾತಗಳು ಹೆಚ್ಚಾಗುತ್ತಿರುವುದು ಏಕೆ?
ಸಾಮರ್ಥ್ಯಕ್ಕಿಂತ ಮೀರಿ ಅತಿಯಾದ ತರಬೇತಿ ಮಾಡುವುದರಿಂದ ಹೃದಯದ ಸ್ನಾಯುಗಳ ಮೇಲೆ ತೀವ್ರ ಒತ್ತಡ ಬೀಳುತ್ತದೆ. ಇದು ಸಹ ಹಠಾತ್ ಹೃದಯಾಘಾತಕ್ಕೆ ಕಾರಣವಾಗಬಹುದು.
ಮೊದಲಿನಿಂದ ಹೃದಯ ಸಂಬಂಧಿ ಕಾಯಿಲೆಗಳು ಇದ್ದು, ಅದನ್ನು ನಿರ್ಲಕ್ಷ ಮಾಡುವುದು. ಸಣ್ಣಪುಟ್ಟ ಬ್ಲಾಕ್‌ಗಳಿದ್ದು ಮುಂಚಿತವಾಗಿ ಪತ್ತೆಯಾಗಿರುವುದಿಲ್ಲ. ಇವರು ತೀವ್ರವಾದ ಕಸರತ್ತು ಮಾಡಿದಾಗ ಇದು ಜೀವಕ್ಕೆ ಅಪಾಯ ತರುತ್ತದೆ.
ಗೆಲ್ಲಲೇಬೇಕೆಂಬ ತೀವ್ರ ಮಾನಸಿಕ ಒತ್ತಡವಿರುತ್ತದೆ. ಇದರೊಂದಿಗೆ ದೇಹಕ್ಕೆ ಅಗತ್ಯವಿರುವಷ್ಟು ವಿಶ್ರಾಂತಿ, ಸರಿಯಾದ ನಿದ್ರೆ ಇಲ್ಲದಿದ್ದಾಗ ಹೃದಯದ ಮೇಲಿನ ಒತ್ತಡ ದುಪ್ಪಟ್ಟಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications