ಬೆಂಗಳೂರಿನಲ್ಲಿ 1650 ಕೋಟಿ ರೂ. ಬಜೆಟ್‌ನಲ್ಲಿ ಹೊಸ ಕ್ರೀಡಾಂಗಣ: RCB ತವರಿನ ವಿಶೇಷತೆಗಳು ಏನು?
ಚಿನ್ನಸ್ವಾಮಿ ಮೈದಾನ ಬೆಂಗಳೂರಿನ ಐಕಾನಿಕ್ ಪ್ಲೇಸ್‌ಗಳಲ್ಲಿ ಒಂದಾಗಿದೆ. ಈ ಮೈದಾನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತವರು ಸಹ ಹೌದು. ಹಲವು ಸ್ಮರಣೀಯ ಇನಿಂಗ್ಸ್‌ಗಳು ಈ ಮೈದಾನದಲ್ಲಿ ನಡೆದಿವೆ. ಈ ಮೈದಾನಕ್ಕೆ ಜೂನ್ 4ಕ್ಕೆ ಕಪ್ಪು ಚುಕ್ಕೆ ಒಂದು ಹತ್ತಿದೆ. ಈ ಕಪ್ಪು ಚುಕ್ಕೆಯ ಪರಿಣಾಮ ಆರ್‌ಸಿಬಿ ಸಂಭ್ರಮಾಚರಣೆ ಸುತಕದ ಗೂಡಾಗಿತು. ಸಂಭ್ರಮಾಚರಣೆಯನ್ನು ಆಚರಿಸಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ 11 ಜನ ಸಾವನ್ನಪ್ಪಿದ್ದರು. ಹಲವರು ಗಾಯಕ್ಕೆ ತುತ್ತಾಗಿದ್ದರು. ಈ ಘಟನೆ ಅಭಿಮಾನಿಗಳ ಮನಸ್ಸಿನಲ್ಲಿ ಹಾಗೆ ಉಳದಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಬಳಿಕ ಚಿನ್ನಸ್ವಾಮಿ ಮೈದಾನವನ್ನು ಶಿಫ್ಟ್ ಮಾಡಬೇಕು ಎಂಬ ಮಾತುಗಳು ಸಹ ವ್ಯಾಪಕವಾಗಿ ಕೇಳಿ ಬಂದವು. ಬೆಂಗಳೂರಿನಲ್ಲಿ ಮತ್ತೊಂದು ಮೈದಾನಕ್ಕೆ ಪ್ಲ್ಯಾನ್ ಸಹ ನಡೆದಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ಇದ್ದಕ್ಕೆ ಪೂರಕವಾಗಿರುವ ಸುದ್ದಿಯೊಂದು ಹೊರ ಬಂದಿದೆ. ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ.

ಬೆಂಗಳೂರಿನಲ್ಲಿ 1650 ಕೋಟಿ ರೂ. ಬಜೆಟ್‌ನಲ್ಲಿ ಹೊಸ ಕ್ರೀಡಾಂಗಣವನ್ನು ನಿರ್ಮಿಸಲು ಪ್ಲ್ಯಾನ್ ರೂಪಗೊಳ್ಳುತ್ತಿವೆ. ಈ ಮೂಲಕ ಆರ್‌ಸಿಬಿ ತನ್ನ ಹೊಸ ಮನೆಯನ್ನು ಪಡೆಯುವ ಸಾಧ್ಯತೆಯಿದೆ.ಬೆಂಗಳೂರಿನಲ್ಲಿ ಹೊಸ ಕ್ರೀಡಾಂಗಣವನ್ನು ನಿರ್ಮಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ ಎಂಬ ಸುದ್ದಿ ಈಗ ಹೊರ ಬಂದಿದೆ. ಸರ್ಕಾರ ಈ ಜವಾಬ್ದಾರಿಯನ್ನು ಕರ್ನಾಟಕ ವಸತಿ ನಿಗಮಕ್ಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ನಡೆದ ದುರಂತವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರ ದಿಟ್ಟ ಹೆಜ್ಜೆಗೆ ಮುಂದಾಗಿದೆ.
1650 ಕೋಟಿ ರೂ.
ನೂತನ ಕ್ರೀಡಾಂಗಣವನ್ನು ಬೆಂಗಳೂರಿನ ಬೊಮ್ಮಸಂದ್ರದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಈ ಮೈದಾನ ಸುಮಾರು 80 ಸಾವಿರ ಪ್ರೇಕ್ಷಕರಿಗೆ ಪಂದ್ಯ ನೋಡುವ ಅವಕಾಶ ನೀಡುವ ಸಾಧ್ಯತೆ ಇದೆ. ಈ ದೊಡ್ಡ ಕಾರ್ಯಕ್ಕಾಗಿ ಸರ್ಕಾರ 1650 ಕೋಟಿ ರೂ. ಬಜೆಟ್ ನಿಗದಿ ಪಡಿಸಿದೆ. ಈ ಯೋಜನೆ ಪುರ್ಣಗೊಂಡ ಬಳಿಕ ಇದು ದೇಶದ ಅತಿ ದೊಡ್ಡ ಎರಡನೇ ಮೈದಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ಅಭಿಮಾನಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಲ್ಲಿ 100 ಎಕರೆಗಳಷ್ಟು ದೊಡ್ಡ ಕ್ರೀಡಾ ಕೇಂದ್ರವನ್ನು ನಿರ್ಮಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಆರ್‌ಸಿಬಿ ತವರು
ಎಂ ಚಿನ್ನಸ್ವಾಮಿ ಸ್ಟೇಡಿಯಂ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ತವರು ಅಂಗಳ. ಸರ್ಕಾರ ಬೆಂಗಳೂರಿನಲ್ಲಿ 80 ಸಾವಿರ ಜನರು ಸಾಮರ್ಥ್ಯ ಇರುವ ಮೈದಾನವನ್ನು ನಿರ್ಮಿಸಿದರೆ, ಇದೇ ಆಂಗಳವನ್ನು ಆರ್‌ಸಿಬಿ ತನ್ನ ಹೊಸ ಮನೆಯನ್ನಾಗಿ ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ ಈ ಮೈದಾನ ಪುರ್ಣಗೊಂಡಲ್ಲಿ ಅತಿ ಹೆಚ್ಚು ಅಭಿಮಾನಿಗಳು ಆರ್‌ಸಿಬಿ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ ಹೆಚ್ಚಿನ ಸಂಖ್ಯೆಯ ಟಿಕೆಟ್‌ಗಳನ್ನು ಸಹ ಮಾರಾಟ ಮಾಡಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications