For Quick Alerts
ALLOW NOTIFICATIONS  
For Daily Alerts
 

ನಿಧಾನಗತಿಯಲ್ಲಿ ಅರ್ಧಶತಕ ಬಾರಿಸಿದ ಟಾಪ್ 10 ಬ್ಯಾಟರ್ಸ್‌: ಈ ಪಟ್ಟಿಯಲ್ಲಿ ಕನ್ನಡಿಗನಿಗೂ ಸ್ಥಾನ

ಐಪಿಎಲ್‌ನಲ್ಲಿ ಬ್ಯಾಟರ್‌ಗಳಿಗೆ ಸ್ಟಾರ್ ಗಿರಿ. ವಿಶ್ವದ ಸ್ಟಾರ್ ಬ್ಯಾಟರ್‌ಗಳು ಸಹ ಈ ಲೀಗ್‌ನಲ್ಲಿ ಆಡಲು ಕಾತುರರಾಗಿರುತ್ತಾರೆ. ಈ ಲೀಗ್‌ನಲ್ಲಿ ಒಮ್ಮೆ ಅಬ್ಬರಿಸಿದರೆ, ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಫಿಕ್ಸ್‌. ಐಪಿಎಲ್‌ ಇತಿಹಾಸವನ್ನು ಒಮ್ಮೆ ತಿರುವಿ ನೋಡಿದಾಗ ಅದೆಷ್ಟೋ ಬ್ಯಾಟರ್‌ಗಳು ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದಲೇ ಹೆಸರು ಮಾಡಿದ್ದಾರೆ. ಇನ್ನು ಕೆಲವು ಆಟಗಾರರು ಒಳ್ಳೆಯ ಇನಿಂಗ್ಸ್‌ ಕಟ್ಟಿದರೂ ಸಹ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ದಾಖಲಾದ ನಿಧಾನಗತಿಯ ಅರ್ಧಶತಕಗಳ ಬಗ್ಗೆ ವರದಿ ಇಲ್ಲಿದೆ.

ಐಪಿಎಲ್‌ ಎಂದರೆ ಹೊಡಿ ಬಡಿ ಆಟ. ಈ ಆಟದಲ್ಲಿ ಸ್ಟ್ರೈಕ್ ರೇಟ್ ತುಂಬಾನೆ ಇಂಪಾರ್ಟೆಂಟ್‌. ಆದರೆ ಈ ವರದಿಯಲ್ಲಿರುವ ಆಟಗಾರರು ತಮ್ಮ ಆಟವನ್ನು ಬದಲಿಸಿಕೊಂಡು ನಿಧಾನವಾಗಿ ಬ್ಯಾಟ್ ಮಾಡಿ ಬೇಡವಾದ ದಾಖಲೆಗೆ ತಮ್ಮ ಹೆಸರು ನಮೂದಿಸಿದ್ದಾರೆ. ಈ ಪಟ್ಟಿಯಲ್ಲಿ ಕರ್ನಾಟಕದ ಸ್ಟಾರ್ ಆಟಗಾರ ರಾಬಿನ್ ಉತ್ತಪ್ಪ ಅವರಿಗೂ ಸ್ಥಾನ ಇದೆ.

karnataka

ಜೆಪಿ ಡುಮಿನಿಗೆ ಅಗ್ರಸ್ಥಾನ

ನಿಧಾನಗತಿಯಲ್ಲಿ ಅರ್ಧಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಜೆಪಿ ಡುಮಿನಿ ಅವರಿಗೆ ಅಗ್ರಸ್ಥಾನ. ಇವರು 2009ರಂದು ಮುಂಬೈ ಇಂಡಿಯನ್ಸ್‌ ಪರ ಆಡುವಾಗ ಈ ಸಾಧನೆ ಮಾಡಿದ್ದರು. ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 119 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ ತಂಡ 45 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ನೆಲಕಚ್ಚಿ ಬ್ಯಾಟ್ ಮಾಡಿದ ಡುಮಿನಿ 55 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ಐಪಿಎಲ್‌ ಇತಿಹಾಸದ ನಿಧಾನಗತಿಯ ಅರ್ಧಶತಕ. ಜೆಪಿ ಅವರು ನಿಧಾನಗತಿಯಲ್ಲಿ ಬ್ಯಾಟ್ ಮಾಡಿದರೂ ಸಹ ಮುಂಬೈ ತಂಡ ಜಯ ಸಾಧಿಸಿತ್ತು.

ಐಪಿಎಲ್‌ ಆರಂಭಕ್ಕೂ ಮುನ್ನವೇ CSK ತಂಡಕ್ಕೆ ಪೆಟ್ಟು: ಸ್ಟಾರ್ ವೇಗಿ ಟೂರ್ನಿಯಿಂದ ಔಟ್‌ಐಪಿಎಲ್‌ ಆರಂಭಕ್ಕೂ ಮುನ್ನವೇ CSK ತಂಡಕ್ಕೆ ಪೆಟ್ಟು: ಸ್ಟಾರ್ ವೇಗಿ ಟೂರ್ನಿಯಿಂದ ಔಟ್‌

ಪಾರ್ಥಿವ್ ಪಟೇಲ್‌

ಆಮೆ ಗತಿಯಲ್ಲಿ ಅರ್ಧಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಪಾರ್ಥಿವ್ ಪಟೇಲ್‌ಗೂ ಸ್ಥಾನ. ಇವರು ಮಾರ್ಚ್ 21, 2010 ರಂದು ನಡೆದಿದ್ದ ಪಂದ್ಯದಲ್ಲಿ ನಿಧಾನವಾಗಿ ಬ್ಯಾಟಿಂಗ್ ಮಾಡಿದ್ದರು. ಈ ಪಂದ್ಯದಲ್ಲಿ ಚೆನ್ನೈ ಪರ ಬ್ಯಾಟ್ ಮಾಡಿದ್ದ ಪಾರ್ಥಿವ್ 53 ಎಸೆತಗಳಲ್ಲಿ 50 ರನ್ ಬಾರಿಸಿದ್ದರು. ಈ ಪಂದ್ಯವನ್ನು ಪಂಜಾಬ್ ಸೂಪರ್ ಓವರ್‌ನಲ್ಲಿ ಗೆದ್ದುಕೊಂಡಿತ್ತು.

ಬ್ರೆಂಡನ್ ಮೆಕಲಮ್

ನ್ಯೂಜಿಲೆಂಡ್ ತಂಡದ ಬ್ರೆಂಡನ್ ಮೆಕಲಮ್ ತಮ್ಮ ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿ. ಆದರೆ ಇವರು 19 ಏಪ್ರಿಲ್ 2010 ರಂದು 52 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಮುಂಬೈ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 133 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕೆಕೆಆರ್ 17.3 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 135 ರನ್‌ ಸೇರಿಸಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೆಕಲಂ 8 ಬೌಂಡರಿ ಬಾರಿಸಿದ್ದರು.

ಅಭಿಮಾನಿಗಳಿ ವಿರಾಟ್‌ ಕೊಹ್ಲಿ ಸಂದೇಶ: ಅದೇ ಅಧ್ಯಾಯ ಹೊಸ ಕಥೆಅಭಿಮಾನಿಗಳಿ ವಿರಾಟ್‌ ಕೊಹ್ಲಿ ಸಂದೇಶ: ಅದೇ ಅಧ್ಯಾಯ ಹೊಸ ಕಥೆ

karnataka

ರಾಬಿನ್ ಉತ್ತಪ್ಪ

ಕರ್ನಾಟಕದ ಸ್ಟಾರ್ ಆಟಗಾರ ರಾಬಿನ್ ಉತ್ತಪ್ಪ ವೇಗವಾಗಿ ರನ್‌ ಕಲೆ ಹಾಕಿ ಸದ್ದು ಮಾಡಿದ ಆಟಗಾರ. ಇವರ ಬ್ಯಾಟ್‌ನಿಂದಲೂ ಸಹ ನಿಧಾನಗತಿಯ ಅರ್ಧಶತಕ ಒಂದು ದಾಖಲಾಗಿದೆ. ಪುಣೆ ವಾರಿಯರ್ಸ್‌ ಹಾಗೂ ಡೆಲ್ಲಿಡೇರ್‌ಡೆವಿಲ್ಸ್‌ ನಡುವೆ ಏಪ್ರಿಲ್ 24, 2012 ಕಾದಾಟ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪುಣೆ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 146 ರನ್ ಸೇರಿಸಿತು. ಈ ಪಂದ್ಯದಲ್ಲಿ ರಾಬಿನ್ ಉತ್ತಪ್ಪ 52 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.

ನಿಧಾನವಾಗಿ ಅರ್ಧಶತಕ ಬಾರಿಸಿದ ಟಾಪ್ 10 ಬ್ಯಾಟ್ಸ್‌ಮನ್‌ಗಳ ಪಟ್ಟಿ

ಆಟಗಾರನ ಹೆಸರು ತಂಡ ವಿರುದ್ಧ ಎಸೆತಗಳು ಸ್ಥಳ
ಜೆಪಿ ಡುಮಿನಿ ಮುಂಬೈ ಇಂಡಿಯನ್ಸ್ ಪಂಜಾಬ್ 55 ಡರ್ಬನ್
ಪಾರ್ಥಿವ್ ಪಟೇಲ್ ಚೆನ್ನೈ ಸೂಪರ್ ಕಿಂಗ್ಸ ಪಂಜಾಬ್ 53 ಚೆನ್ನೈ
ಬ್ರೆಂಡನ್ ಮೆಕಲಮ್ ಕೋಲ್ಕತ್ತಾ ನೈಟ್ ರೈಡರ್ಸ್ ಮುಂಬೈ 52 ಈಡನ್ ಗಾರ್ಡನ್ಸ್
ರಾಬಿನ್ ಉತ್ತಪ್ಪ ಪುಣೆ ವಾರಿಯರ್ಸ್ ಡೆಲ್ಲಿ 52 ಪುಣೆ
ಮ್ಯಾಥ್ಯೂ ಹೇಡನ್ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ 51 ಗೆಬೆರ್ಹಾ
ಜಾಕ್ವೆಸ್ ಕಾಲಿಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೆಲ್ಲಿ 51 ಜೋಹಾನ್ಸ್‌ಬರ್ಗ್
ಗೌತಮ್ ಗಂಭೀರ್ ಡೆಲ್ಲಿ ಡೇರ್‌ಡೆವಿಲ್ಸ್ ಚೆನ್ನೈ 51 ಚೆನ್ನೈ
ವಿಜಯ್ ಶಂಕರ್ ಸನ್‌ರೈಸರ್ಸ್ ಹೈದರಾಬಾದ್ ರಾಜಸ್ಥಾನ್ 51 ದುಬೈ
ಮುರಳಿ ವಿಜಯ್ ಚೆನ್ನೈ ಸೂಪರ್ ಕಿಂಗ್ಸ್ ಪಂಜಾಬ್ 50 ಮೊಹಾಲಿ
ಡೇವಿಡ್ ವಾರ್ನರ್ ಸನ್‌ರೈಸರ್ಸ್ ಹೈದರಾಬಾದ್ ಚೆನ್ನೈ 50 ನವದೆಹಲಿ

Story first published: Friday, March 20, 2026, 8:00 [IST]
Other articles published on Mar 20, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+