Ravichandran Smaran: SRH ಸ್ಪಿನ್ ಬೌಲರ್ ಜಂಪಾ ಐಪಿಎಲ್‌ನಿಂದ ಔಟ್: ಕನ್ನಡಿಗನಿಗೆ ಖುಲಾಯಿಸಿದ ಅದೃಷ್ಟ
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಮತ್ತೆ ಪೆಟ್ಟು ಬಿದ್ದಿದೆ. ತಂಡದ ಸ್ಟಾರ್ ಲೆಗ್ ಸ್ಪಿನ್ ಬೌಲರ್ ಆಡಂ ಜಂಪಾ ಗಾಯದ ಕಾರಣದಿಂದ ಟೂರ್ನಿಯಿಂದ ಹೊರ ನಡೆದಿದ್ದಾರೆ. ಇವರ ಬದಲಿಗೆ ಕರ್ನಾಟಕದ ಸ್ಫೋಟಕ ಆಟಗಾರ ಸ್ಮರಣ್ ರವಿಚಂದ್ರನ್ ಅವರಿಗೆ ಅವಕಾಶ ನೀಡಲಾಗಿದೆ. ಇವರು ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದರು. ಈಗ ಅವರಿಗೆ ಅವಕಾಶ ಸಿಕ್ಕಿದೆ.
ದೇಶೀಯ ಟೂರ್ನಿಯಲ್ಲಿ ತಮ್ಮ ಧಮಾಕೆದಾರ್ ಪ್ರದರ್ಶನದಿಂದಲೇ ಹೆಸರು ಮಾಡಿರುವ ಸ್ಮರಣ್ ರವಿಚಂದ್ರನ್ ಎಡಗೈ ಬ್ಯಾಟರ್ ಹಾಗೂ ಬೌಲಿಂಗ್ ಮಾಡುವ ಆಟಗಾರ. ಇವರ ಆಟಕ್ಕೆ ಮನಸೋತರ ಎಸ್‌ಆರ್‌ಎಚ್ ಇವರಿಗೆ ಮಣೆ ಹಾಕಿದೆ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಮಿಂಚಲು ಮತ್ತೊಬ್ಬ ಕನ್ನಡಿಗ ಸನ್ನದ್ಧನಾಗಿದ್ದಾನೆ. ಆದರೆ ಇವರ ಪ್ರತಿಭೆಗೆ ತಕ್ಕ ಪ್ರತಿಫಲ ಅಂತೂ ಸಿಕ್ಕಿದೆ. ಇವರನ್ನು ಎಸ್‌ಆರ್‌ಎಚ್ ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಈಗ 300 ರನ್ ಸ್ಕೋರ್ ಮಾಡಬಹುದು ಎನ್ನುತ್ತಿದ್ದಾರೆ.

ಟಾಪ್ ಆರ್ಡರ್‌ನಲ್ಲಿ ಆಡುವ ಸ್ಮರಣ್ ರವಿಚಂದ್ರನ್ ಅರೆಕಾಲಿಕ ಬೌಲರ್ ಸಹ ಹೌದು. ಇವರು ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡುವಲ್ಲಿ ಹೆಸರುವಾಸಿ. ಈಗಾಗಲೇ ಸ್ಮರಣ್ 7 ಪ್ರಥಮ ದರ್ಜೆ ಪಂದ್ಯಗಳು, 10 ಲಿಸ್ಟ್ ಎ ಪಂದ್ಯಗಳು ಮತ್ತು 6 ಟಿ20 ಪಂದ್ಯಗಳನ್ನು ಆಡಿದ್ದು, 1100 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಕರ್ನಾಟಕದ ಪರ ಆಡುವ ಇವರು ಎಸ್‌ಆರ್‌ಎಚ್ ಕ್ಯಾಂಪ್ ಸೇರಿಕೊಂಡಿದ್ದಾರೆ.
ಆರ್‌ಸಿಬಿ ನೆಟ್ಸ್‌ನಲ್ಲಿ ಭಾಗಿ
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನೆಟ್ಸ್‌ಗಳಲ್ಲಿ ಸ್ಮರಣ್ ರವಿಚಂದ್ರನ್ ಭಾಗವಹಿಸಿದ್ದರು. ಅಲ್ಲದೆ ಆರ್‌ಸಿಬಿ ತರಬೇತುದಾರರು ಇವರ ಬ್ಯಾಟಿಂಗ್‌ಗೆ ಮನಸೋತಿದ್ದರು. ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಸ್ಮರಣ್ ಈಗ ಸನ್ ಕ್ಯಾಂಪ್ ಸೇರಿದ್ದಾರೆ. ಸದ್ಯದ ಸನ್ ತಂಡದ ಬ್ಯಾಟಿಂಗ್ ಲೈನ್ ಅಪ್ ನೋಡಿದರೆ ಸ್ಮರಣ್ ಅವರಿಗೆ ಅವಕಾಶ ಸಿಗುವುದು ಕಷ್ಟ. ಒಂದು ವೇಳೆ ಅವಕಾಶ ಸಿಕ್ಕರೆ ಅಬ್ಬರಿಸಲು ತಯಾರಿ ನಡೆಸಿದ್ದಾರೆ.
ಸ್ಮರಣ್ ಸಾಧನೆ
ಈಗಾಗಲೇ ಮಹರಾಜಾ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಛಾಪು ಮೂಡಿಸಿದರು ಸ್ಮರಣ್ ರವಿಚಂದ್ರನ್ ಅಬ್ಬರಿಸಿದ್ದಾರೆ. ಇವರು ಕಳೆದ ಆವೃತ್ತಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ಪರ ಆಡಿದ 10 ಪಂದ್ಯಗಳಲ್ಲಿ 43.14ರ ಸರಾಸರಿಯಲ್ಲಿ 302 ರನ್ ಕಲೆ ಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 2 ಅರ್ಧಶತಕ ಸಹ ಸೇರಿವೆ.
ಪ್ರಸಕ್ತ ಸಾಲಿನ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ಮರಣ್ ರವಿಂಚದ್ರನ್ ಅಬ್ಬರಿಸಿದ್ದರು. ಕರ್ನಾಟಕ ಈ ಟ್ರೋಫಿಗೆ ಮುತ್ತಿಡುವಲ್ಲಿ ಇವರ ಕಾಣಿಕೆ ಅಪಾರ. ವಿದರ್ಭ ವಿರುದ್ಧ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಸ್ಮರಣ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ಕರ್ನಾಟಕ ಮೊದಲು ಬ್ಯಾಟಿಂಗ್ ಮಾಡಿ 348 ರನ್‌ಗಳಿಸಿತ್ತು. ಆಗ ಸ್ಮರಣ್ ಶತಕ ಸಿಡಿಸಿ ಅಬ್ಬರಿಸಿದ್ದರು. ಎದುರಿಸಿದ 92 ಎಸೆತಗಳಲ್ಲಿ ರವಿಚಂದ್ರನ್ ಸ್ಮರಣ್ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 101 ರನ್ ಸಿಡಿಸಿದ್ದರು. ಈ ಪಂದ್ಯದಲ್ಲಿ ಕರ್ನಾಟಕ ಗೆಲುವು ದಾಖಲಿಸಿತ್ತು. ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಂದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications