ಐಪಿಎಲ್ ಮೆಗಾ ಹರಾಜಿನಲ್ಲಿ ಕರ್ನಾಟಕದ ಸ್ಟಾರ್ ಆಟಗಾರರು ಇದ್ದು, ಇವರು ಸಹ ಐಪಿಎಲ್ ಫ್ರಾಂಚೈಸಿಗಳ ಮನ ಗೆಲ್ಲುವಲ್ಲಿ ಸಫಲರಾಗಿದ್ಧಾರೆ. ತಮ್ಮ ಧಮಾಕೆದಾರ್ ಪ್ರದರ್ಶನದ ಮೂಲಕವೇ ಸಂಚಲನ ಮೂಡಿಸಿದ ಆಟಗಾರರು, ಬೇರೆ ಬೇರೆ ಫ್ರಾಂಚೈಸಿಗಳ ಪರ ಆಡಲಿದ್ದಾರೆ. 20ಕ್ಕೂ ಹೆಚ್ಚು ಕರ್ನಾಟಕದ ಆಟಗಾರರು ಐಪಿಎಲ್ ಮೆಗಾ ಹರಾಜಿನಲ್ಲಿ ತಮ್ಮ ಹೆಸರನ್ನು ನಮೂದಿಸಿಕೊಂಡಿದ್ದರು. ಮೊದಲ ದಿನ ಐಪಿಎಲ್ ಹರಾಜಿನಲ್ಲಿ ಮಾಲೀಕರ ಚಿತ್ತ ಕದ್ದ ಕನ್ನಡಿಗರ ವಿವರ ಇಲ್ಲಿದೆ.
ಈಗಾಗಲೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿ ಸೈ ಎನಿಸಿಕೊಂಡಿದ್ದ ಆಟಗಾರರು ಕೋಟಿ ಕೋಟಿ ರೂಪಾಯಿ ಕೊಳ್ಳೆ ಹೊಡೆಯುವಲ್ಲಿ ಸಫಲರಾಗಿದ್ದಾರೆ. ಈ ಆಟಗಾರರು ಐಪಿಎಲ್ ಮೆಗಾ ಹರಾಜಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪ್ಲೇಯರ್ಸ್. ಈ ಬಾರಿಯಾದರೂ ಕನ್ನಡಿಗ ಕೆಎಲ್ ರಾಹುಲ್ ಬೆಂಗಳೂರು ತಂಡದ ಪರ ಆಡಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈ ಆಸೆ ಮಣ್ಣು ಪಾಲಾಗಿದೆ. ಇವರಿಗೆ 14 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿ ಮಾಡಿದೆ.

ಮಹರಾಜಾ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಕರುಣ್ ನಾಯರ್ ಅವರಿಗೆ ಡೆಲ್ಲಿ ಮಣೆ ಹಾಕಿದೆ. ಇವರಿಗೆ 50 ಲಕ್ಷ ನೀಡಿ ತಂಡಕ್ಕೆ ಬರಮಾಡಿಕೊಂಡಿದೆ.
ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಮಿಂಚಿರುವ ಅಭಿನವ್ ಮನೋಹರ್ ಅವರನ್ನು ಕೊಳ್ಳಲು ಆರ್‌ಸಿಬಿ ಆರಂಭದಲ್ಲಿ ಮನಸ್ಸು ಮಾಡಿತ್ತು. ಆದರೆ ಕೊನೆಯ ವರೆಗೂ ಇವರಿಗೆ ಹಣವನ್ನು ಹೂಡಲಿಲ್ಲ. ಇವರ ಕ್ಷಮತೆಯನ್ನು ಗುರುತಿಸಿರುವ ಅಭಿನವ್ ಮನೋಹರ್ 3.20 ಕೋಟಿಗೆ ಸನ್ ತಂಡದ ಪಾಲಾದರು.
ತಮ್ಮ ಬಿಗುವಿನ ದಾಳಿಯಿಂದಲೇ ಸದ್ದು ಮಾಡಿರುವ ಪ್ರಸಿದ್ಧ ಕೃಷ್ಣ ಸಹ ಭಾರೀ ಮೊತ್ತವನ್ನು ತಮ್ಮ ಜೇಬಿಗೆ ಇಳಿಸಿಕೊಂಡರು. ಇವರು 2 ಕೋಟಿಯ ಮೂಲ ಬೆಲೆಯಿಂದ ಹರಾಜು ಅಂಗಳ ಪ್ರವೇಶಿಸಿದರು. ಇವರಿಗೆ 9.50 ಕೋಟಿ ನೀಡಿ ಗುಜರಾತ್ ಟೈಟನ್ಸ್ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.