For Quick Alerts
ALLOW NOTIFICATIONS  
For Daily Alerts
 

ಸುನಿಲ್‌ ರಮೇಶ್‌ ಅಬ್ಬರದ ಶತಕ: ಕರ್ನಾಟಕ ಸೆಮಿಫೈನಲ್‌ಗೆ

ಏಳನೇ ಆವೃತ್ತಿಯ ಇಂಡಸಂಟ್ ಬ್ಯಾಂಕ್, ನಾಗೇಶ್ ಟ್ರೋಫಿ ರಾಷ್ಟ್ರೀಯ ಟಿ20 ಕ್ರಿಕೆಟ್ ಅಂದರ ಟೂರ್ನಿಯಲ್ಲಿ ಕರ್ನಾಟಕ ರಾಜ್ಯ ತಂಡ ಜಾರ್ಖಂಡ್ ತಂಡವನ್ನು ಮನಸಿ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಕರ್ನಾಟಕ ಅಂಧರ ತಂಡದ ಪರ ಜವರೇಗೌಡ ಹಾಗೂ ಸುನಿಲ್‌ ರಮೇಶ್‌ ಅಮೋಘ ಪ್ರದರ್ಶನ ನೀಡಿ ಗೆಲುವಿನಲ್ಲಿ ಮಿಂಚಿದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಾರ್ಖಂಡ್ ತಂಡ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್‌ಗೆ 163 ರನ್ ಗಳು ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕರ್ನಾಟಕ 12.3 ಓವರ್‌ಗಳಲ್ಲಿ 3 ವಿಕೆಟ್‌ಗೆ 165 ರನ್‌ ಸೇರಿಸಿತು.

ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಕರ್ನಾಟಕ ತಂಡದ ಆರಂಭ ಕಳಪೆಯಾಗಿತ್ತು. ತಂಡದ ಮೊತ್ತ 39 ರನ್ ಆಗುವಷ್ಟರಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ತಂಡಕ್ಕೆ ಆಧಾರವಾದರ ಆರಂಭಿಕ ಸುನಿಲ್ ರಮೇಶ್‌ ಹಾಗೂ ರವಿ ಬಂಡಿವಡ್ಡರ್ ತಂಡವನ್ನು ಅಪಾಯದಿಂದ ಪಾರು ಮಾಡುವ ಕೆಲಸವನ್ನು ಮಾಡಿದರು. ಈ ಜೋಡಿ ಎದುರಾಳಿ ಬೌಲರ್‌ಗಳ ರಣ ತಂತ್ರವನ್ನು ಅರಿತು ಬ್ಯಾಟ್ ಮಾಡಿತು.

Karnataka Storms Into Semis of Nagesh Trophy as Sunil Ramesh Smashes Unbeaten 105

ಸುನಿಲ್‌ ರಮೇಶ್‌ ಅಬ್ಬರ

ಸುಮಾರು ಏಳು ಓವರ್‌ ಬ್ಯಾಟ್ ಮಾಡಿದ ಜೋಡಿ 92 ರನ್‌ಗಳ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ರವಿ 2 ಬೌಂಡರಿ ಸೇರಿದಂತೆ 18 ರನ್‌ ಬಾರಿಸಿ ಔಟ್‌ ಆದರು. ಇನ್ನೊಂದು ತುದಿಯಲ್ಲಿ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದ ಸುನಿಲ್ ರಮೇಶ್‌ ಅಬ್ಬರಿಸಿದರು.

ಇವರು ಕೇವಲ 43 ಎಸೆತಗಳಲ್ಲಿ 20 ಬೌಂಡರಿ, 1 ಸಿಕ್ಸರ್ ಸಹಾಯದಿದ ಅಜೇಯ 105 ರನ್‌ ಬಾರಿಸಿ ಜಯದಲ್ಲಿ ಮಿಂಚಿದರು. ಕರ್ನಾಟಕ 7ನೇ ಆವೃತ್ತಿಯ ಇಂಡಸಂಟ್ ಬ್ಯಾಂಕ್ ನಾಗೇಶ್ ಟ್ರೋಫಿ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದ್ದು, ಲೀಗ್‌ ಹಂತದ ಕೊನೆಯ ಪಂದ್ಯವನ್ನು ಬುಧವಾರ ಆಡಲಿದೆ.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್ ತಂಡದ ಆರಂಭ ಉತ್ತಮವಾಗಿತ್ತು. ರೋಹಿತ್ ಓ ಹಾಗೂ ಸಂಜೀವ್ ಕೆ ತಂಡಕ್ಕೆ 43 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ದಿಪಾಂಶು ಯಾದವ್ 8 ರನ್‌ ಬಾರಿಸಿ, ಸಂಜೀವ್‌ಗೆ ಉತ್ತಮ ಸಾಥ್‌ ನೀಡಿದರು. ಆರಂಭಿಕ ಆಟಗಾರ ಸಂಜೀವ್ 61 ಎಸೆತಗಳಲ್ಲಿ 7 ಬೌಂಡರಿ ಸೇರಿದಂತೆ 78 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಕರ್ನಾಟಕ ಪರ ಜವರೇ ಗೌಡ ಬಿ ಎರಡು ವಿಕೆಟ್‌ ಪಡೆದು ಅಬ್ಬರಿಸಿದ್ದಾರೆ.

Story first published: Tuesday, February 4, 2025, 12:56 [IST]
Other articles published on Feb 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+