For Quick Alerts
ALLOW NOTIFICATIONS  
For Daily Alerts
 

Ranji: ಇನ್ನಿಂಗ್ಸ್‌ ಹಿನ್ನಡೆಯ ಭೀತಿಯಲ್ಲಿ ಕರ್ನಾಟಕ

ಕರ್ನಾಟಕ ಹಾಗೂ ಬಂಗಾಳ ತಂಡಗಳ ನಡುವಣ ರಣಜಿ ಸಿ ಗುಂಪಿನ ಪಂದ್ಯದಲ್ಲಿ ಮಯಾಂಕ್‌ ಅಗರ್‌ವಾಲ್‌ ಇನಿಂಗ್ಸ್‌ ಹಿನ್ನಡೆಯ ಭೀತಿ ಅನುಭವಿಸುತ್ತಿದೆ. ಗುರುವಾರ ಎರಡನೇ ದಿನದಾಟವನ್ನು ಬಂಗಾಳ 5 ವಿಕೆಟ್‌ಗೆ 249 ರನ್‌ಗಳಿಂದ ಮುಂದುವರಿಸಿ 301 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ಎರಡನೇ ದಿನದಾಟದಂತ್ಯಕ್ಕೆ ಐದು ವಿಕೆಟ್‌ ಕಳೆದುಕೊಂಡು 155 ರನ್‌ ಸಿಡಿಸಿದ್ದು, 146 ರನ್‌ಗಳ ಇನಿಂಗ್ಸ್‌ ಹಿನ್ನಡೆಯನ್ನು ರಾಜ್ಯ ತಂಡ ಅನುಭವಿಸುತ್ತಿದೆ.

ಶುಕ್ರವಾರ ಕರ್ನಾಟಕದ ಪರ ಮೊದಲ ಇನಿಂಗ್ಸ್‌ನ್ನು ಅಭಿನವ್ ಮನೋಹರ್ ಹಾಗೂ ಶ್ರೇಯಸ್ ಗೋಪಾಲ್ ಎಚ್ಚರಿಕೆಯ ಆಟವನ್ನು ಆಡಬೇಕಿದೆ. ಈ ಉಭಯ ಆಟಗಾರರು ಈಗಾಗಲೇ ಐದನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವನ್ನು ನೀಡಿದೆ. ಮೂರನೇ ದಿನದಾಟದಲ್ಲಿ ಈ ಉಭಯ ಆಟಗಾರರು ಬಿಗ್‌ ಇನಿಂಗ್ಸ್ ಕಟ್ಟಿದರೆ ಇನಿಂಗ್ಸ್‌ ಮುನ್ನಡೆಯ ಕನಸು ನನಸಾಗುತ್ತದೆ.

Karnataka Struggles as Mayank Falls Early Manohar amp amp Gopal Lead Fightback

ಕೌಶಿಕ್‌ಗೆ 5 ವಿಕೆಟ್‌

ಗುರುವಾರ ಮೊದಲ ಇನಿಂಗ್ಸ್‌ ಮುಂದುವರೆಸಿದ ಬಂಗಾಳ ತಂಡದ ಪರ ಯಾವೊಬ್ಬ ಆಟಗಾರ ಸಮಯೋಚಿತ ಆಟವನ್ನು ಆಡಲಿಲ್ಲ. ಮಿಡ್ಲ್ ಆರ್ಡರ್‌ ಬ್ಯಾಟರ್‌ ಶಹಬಾಜ್‌ ಅಹ್ಮದ್‌ 59, ಅವಿಲಿನ್ ಘೋಷ್ 22, ಆಮಿರ್ ಗಣಿ 18, ಸುರಜ್ ಸಿಂಧು 16 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಉಳಿದ ಬ್ಯಾಟರ್‌ಗಳು ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು.

ಕರ್ನಾಟಕದ ಪರ ವಾಸುಕಿ ಕೌಶಿಕ್‌ 38 ರನ್‌ ನೀಡಿ 5 ವಿಕೆಟ್‌ ಕಬಳಿಸಿದರು. ಅಭಿಲಾಷ್ ಶೆಟ್ಟಿ 2, ಸ್ಪಿನ್ ಬೌಲರ್‌ ಶ್ರೇಯಸ್ ಗೋಪಾಲ್‌ 3 ವಿಕೆಟ್‌ ಪಡೆದರು.

ಕಳಪೆ ಆರಂಭ

ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕದ ಆರಂಭ ಕಳಪೆಯಾಗಿತ್ತು. ನಾಯಕ ಮಯಾಂಕ್‌ ಅಗರ್‌ವಾಲ್‌ 17 ರನ್‌ಗಳಿಗೆ ಆಟ ಮುಗಿಸಿದರು. ಇನ್ನೊಬ್ಬ ಆರಂಭಿಕ ಆಟಗಾರ ಕೀಶನ್‌ ಬಿ 23, ಸುಜಯ್ ಸುತಾರಿ 10, ಆರ್ ಸ್ಮರಣ್ 26 ರನ್‌ ಬಾರಿಸಿದರು. ಅಲ್ಲದೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಮನೀಶ್ ಪಾಂಡೆ ಸೊನ್ನೆ ಸುತ್ತಿದರು.

ಮಧ್ಯಮ ಕ್ರಮಾಂಕದ ಅಭಿನವ್ ಮನೋಹರ್ 73 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 50 ರನ್‌ ಸಿಡಿಸಿದ್ದಾರೆ. ಶ್ರೇಯಸ್ ಗೋಪಾಲ್‌ ಅಜೇಯ 23 ರನ್‌ ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಬಂಗಾಳ ಪರ ಸೂರಜ್ ಸಿಂಧು ಜೈಸ್ವಾಲ್ ಹಾಗೂ ರಿಶವ್ ವಿವೇಕ್ ತಲಾ ಎರಡು ವಿಕೆಟ್‌ ಕಬಳಿಸಿದರು.

ಶುಕ್ರವಾರದ ಆಟದಲ್ಲಿ ಕರ್ನಾಟದ ಆಟಗಾರರು ಮೊದಲಾವಧಿಯಲ್ಲಿ ಎಚ್ಚರಿಕೆಯ ಆಟವನ್ನು ಆಡಬೇಕಿದೆ. ಅಲ್ಲದೆ ಇನಿಂಗ್ಸ್‌ ಮುನ್ನಡೆಗೆ ಅಡಿಪಾಯ ಹಾಕಬೇಕಿದೆ. ಕರ್ನಾಟಕ ತಂಡದ ವಾಸುಕಿ ಕೌಶಿಕ್, ವಿದ್ಯಾಧರ ಪಾಟೀಲ, ಅಭಿಲಾಷ್ ಶೆಟ್ಟಿ, ಹಾರ್ದಿಕ್ ರಾಜ್, ತಂಡ ತಮ್ಮ ಮೇಲೆ ಇಟ್ಟ ಭರವಸೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ.

Story first published: Thursday, November 7, 2024, 19:55 [IST]
Other articles published on Nov 7, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+