ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಗೆ ಕರ್ನಾಟಕ ತಂಡ ಪ್ರಕಟ

ಬೆಂಗಳೂರು: ಜನವರಿಯಲ್ಲಿ ಆರಂಭಗೊಳ್ಳಲಿರುವ ದೇಸಿ ಕ್ರಿಕೆಟ್ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡ ಪ್ರಕಟಗೊಂಡಿದೆ. 20 ಜನರಿರುವ ಕರ್ನಾಟಕ ತಂಡಕ್ಕೆ ಕರುಣ್ ನಾಯಕರ್ ನಾಯಕರಾಗಿದ್ದಾರೆ. ಪವನ್ ದೇಶಪಾಂಡೆ ಉಪನಾಯಕ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ 2019ರ ಸೀಸನ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಕರ್ನಾಟಕ ತಂಡದ ನಾಯಕರಾಗಿದ್ದ ಮನೀಶ್ ಪಾಂಡೆ ಮೊಣಕೈ ಗಾಯದಿಂದಾಗಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಕಳೆದ ಸೀಸನ್‌ನಲ್ಲಿ ಪಾಂಡೆ ಅತ್ಯಧಿಕ ರನ್ ಬಾರಿಸಿ ಗಮನ ಸೆಳೆದಿದ್ದರು. ಕಳೆದ ಟೂರ್ನಿಯಲ್ಲಿ ಮನೀಶ್ 314 ರನ್ ಬಾರಿಸಿದ್ದರು. ಇದರಲ್ಲಿ ಅಜೇಯ 129 ರನ್ ಅಲ್ಲದೆ ಎರಡು ಅರ್ಧ ಶತಕಗಳೂ ಸೇರಿತ್ತು.
ಈ ಬಾರಿ ಕರ್ನಾಟಕ ತಂಡದಲ್ಲಿ ಇನ್ನಿಬ್ಬರು ಪ್ರಮುಖ ಆಟಗಾರರಾದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಕೂಡ ಆಡುತ್ತಿಲ್ಲ. ಇಬ್ಬರೂ ರಾಷ್ಟ್ರೀಯ ತಂಡದಲ್ಲಿದ್ದು, ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಜನವರಿ 10ರಂದು ಆರಂಭಗೊಳ್ಳುವ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ ಜನವರಿ 31ರಂದು ಮುಕ್ತಾಯಗೊಳ್ಳಲಿದೆ.
ಕರ್ನಾಟಕ ತಂಡ
ಕರುಣ್ ನಾಯರ್ (ನಾಯಕ), ದೇವದತ್ ಪಡಿಕ್ಕಲ್, ರೋಹನ್ ಕದಮ್, ಪವನ್ ದೇಶಪಾಂಡೆ (ಉಪನಾಯಕ), ಸಿದ್ಧಾರ್ಥ್ ಕೆವಿ, ಶ್ರೀಜಿತ್ ಕೆಎಲ್ (ವಿಕೆ), ಶರತ್ ಬಿಆರ್ (ವಿಕೆ), ಅನಿರುದ್ಧ್ ಜೋಶಿ, ಶ್ರೇಯಸ್ ಗೋಪಾಲ್, ಗೌತಮ್ ಕೆ, ಸುಚಿತ್ ಜೆ, ಪ್ರವೀಣ್ ದೂಬೆ, ಮಿಥುನ್ ಎ, ಪ್ರಸಿದ್ಧ್ ಎಂ ಕೃಷ್ಣ, ಪ್ರತೀಕ್ ಜೈನ್, ಕೌಶಿಕ್ ವಿ, ರೋನಿತ್ ಮೋರೆ, ದರ್ಶನ್ ಎಂಬಿ, ಮನೋಜ್ ಭಂಡಾಜೆ, ಶುಭಾಂಗ್ ಹೆಗ್ಡೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications