Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Vijay Hazare Trophy 2024: ಕ್ವಾಟಫೈನಲ್‌ಗೆ ಕರ್ನಾಟಕ ತಂಡ

ಸಯ್ಯದ್ ಮುಸ್ತಾಕ್ ಆಲಿ ಮತ್ತು ರಣಜಿ ಟ್ರೋಫಿ ಟೂರ್ನಿಗಳಲ್ಲಿ ಮಂಕಾಗಿದ್ದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ವಿಜಯ್ ಹಜಾರೆ ಟ್ರೋಫಿಯ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ನಾಗಲ್ಯಾಂಡ್ ವಿರುದ್ಧ ಗೆಲುವು ಸಾಧಿಸಿರುವ ಕರ್ನಾಟಕ ಕ್ವಾಟಫೈನಲ್‌ಗೆ ಪ್ರವೇಶ ಪಡೆದಿದೆ. ನಾಯಕ ಮಾಯಾಂಕ್ ಅರ್ಗವಾಲ್ ಶತಕದ ಬಲದಿಂದ ಕರ್ನಾಟಕ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ.

ನಾಗಲ್ಯಾಂಡ್ ನೀಡಿದ 206 ರನ್‌ಗಳ ಗುರಿಯನ್ನು ಕರ್ನಾಟಕ ಕೇವಲ ಒಂದು ವಿಕೆಟ್‌ ಕಳೆದುಕೊಂಡು 37.5 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿದೆ. ಕರ್ನಾಟಕ ಪರ ಸ್ಟಾರ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ಮಾಯಾಂಕ್ ಅರ್ಗವಾಲ್ (116) ಮತ್ತು ಅನೀಶ್ ಕೆವಿ (82) 206 ರನ್‌ಗಳ ದಾಖಲೆಯ ಜೊತೆಯಾಟ ಆಡಿದ್ದಾರೆ.

Karnataka team enters Vijay Hazare Trophy quarterfinals

ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಕರ್ನಾಟಕ ತಂಡ ನೇರವಾಗಿ ಕ್ವಾಟರ್‌ಫೈನಲ್‌ಗೆ ಲಗ್ಗೆ ಇಟ್ಟಿದೆ. ಕರ್ನಾಟಕ ಸಿ ಗುಂಪಿನಲ್ಲಿ ಆಡಿದ 7 ಪಂದ್ಯಗಳಲ್ಲಿ 6 ರಲ್ಲಿ ಗೆಲುವು ಕಂಡರೆ, 1ರಲ್ಲಿ ಸೋಲು ಕಂಡಿದೆ. ಮಾಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ಈ ಬಾರಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಅಭಿಮಾನಿಗಳಿಗೆ ಸಂತಸ ತಂದಿದೆ.

ಸಿ ಗುಂಪಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮೊದಲ ಕರ್ನಾಟಕ ವಿರುದ್ಧ ನಾಗಾಲ್ಯಾಂಡ್ ಅಬ್ಬರಿಸಲು ಸಾಧ್ಯವಾಗಲಿಲ್ಲ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನಾಗಾಲ್ಯಾಂಡ್ ತಂಡ ಕರ್ನಾಟಕ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿತು. ಕರ್ನಾಟಕ ಪರ ಸ್ಪಿನ್ ಬೌಲಿಂಗ್ ಮ್ಯಾಜಿಕ್ ಮಾಡಿದ ಶ್ರೇಯಸ್ ಗೋಪಾಲ್ ಅವರು ನಾಗಾಲ್ಯಾಂಡ್ ತಂಡವನ್ನು ಕಟ್ಟಿ ಹಾಕಿದರು. ಉಳಿದಂತೆ ಎಲ್ಲಾ ಬೌಲರ್‌ಗಳು ಕೂಡ ಸಾಥ್ ನೀಡಿದರು.

ನಾಗಾಲ್ಯಾಂಡ್ ತಂಡಕ್ಕೆ ವಲಸೆ ಹೋಗಿರುವ ಕನ್ನಡಿಗ ರಾಂಗ್ಸೆನ್ ಜೊನಾಥನ್ (51) ತವರಿನ ತಂಡದ ಎದುರು ಅರ್ಧಶತಕ ಬಾರಿಸಿ ಸಂಭ್ರಮಿಸಿದರು. ಚೇತನ್ ಬಿಸ್ಟ್ ಕೂಡ 77 ರನ್ ಗಳಿಸುವ ಮೂಲಕ ನಾಗಾಲ್ಯಾಂಡ್ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಈ ಇಬ್ಬರು ಬ್ಯಾಟರ್‌ಗಳ ಅರ್ಧಶತಕ್ ನೆರವಿನಿಂದ ನಾಗಾಲ್ಯಾಂಡ್ 206 ರನ್‌ಗಳಿಗೆ ಆಲೌಟಾಯಿತು. ಕನಾರ್ಟಕ ಪರ ಶ್ರೇಯಸ್ ಗೋಪಾಲ್ 4 ವಿಕೆಟ್ ಉರುಳಿಸಿದರೆ, ಅಭಿಲಾಷ್ ಶೆಟ್ಟಿ 2, ವಿ ಕೌಶಿಕ್, ಹಾರ್ದಿಕ್ ರಾಜ್, ವಿದ್ಯಾಧರ್ ಪಾಟೀಲ್, ನಿಕಿನ್ ಜೋಸ್ ತಲಾ ಒಂದೊಂದು ವಿಕೆಟ್ ಪಡೆದರು.

ನಾಗಾಲ್ಯಾಂಡ್ ತಂಡ ನೀಡಿದ 207 ರನ್‌ಗಳ ಗುರಿ ಬೆನ್ನಟ್ಟಿದ ಕರ್ನಾಟಕ ಆರಂಭದಲ್ಲೇ ನಿಕಿನ್ ಜೋಸ್ ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ನಂತರ ಒಂದಾದ ಮಾಯಾಂಕ್ ಅರ್ಗವಾಲ್ ಮತ್ತು ಅನೀಶ್ ಕೆವಿ ಅದ್ಭುತ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಗೆಲುವು ತಂದು ಕೊಟ್ಟರು. ಮಾಯಾಂಕ್ ಅರ್ಗವಾಲ್ ಈ ಟೂರ್ನಿಯಲ್ಲಿ ಸತತ ನಾಲ್ಕನೇ ಶತಕ ಬಾರಿಸಿ ಮಿಂಚಿದರು. ಅವರು 119 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 116 ರನ್ ಕಲೆ ಹಾಕಿದರು. ಮತ್ತೊಂದೆಡೆ ಅನೀಶ್ ಕೆವಿ 95 ಎಸೆತಗಳಲ್ಲಿ 10 ಬೌಂಡರಿ ಮೂಲಕ 82 ರನ್ ಗಳಿಸಿದರು.

Story first published: Sunday, January 5, 2025, 17:10 [IST]
Other articles published on Jan 5, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+