Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌: ಕರ್ನಾಟಕ, ಮುಂಬೈ ತಂಡ ಪ್ರಕಟ

ಮುಂಬೈ: ರಣಜಿ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಗಿದಿವೆ. ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದ ಎರಡು ತಂಡಗಳು ಕ್ವಾರ್ಟರ್ ಫೈನಲ್‌ ಪ್ರವೇಶಿಸಿವೆ. ಎಲೈಟ್ ಗ್ರೂಪ್ ಡಿ ಯಿಂದ ಮುಂಬೈ ಮತ್ತು ಜಮ್ಮು ಮತ್ತು ಕಾಶ್ಮೀರ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿದೆ. ಎಲೈಟ್‌ ಬಿ ಗುಂಪಿನಿಂದ ಮಧ್ಯಪ್ರದೇಶ ಅಗ್ರ ಸ್ಥಾನದೊಂದಿಗೆ ಮುಂದಿನ ಹಂತ ಪ್ರವೇಶಿಸಿದರೆ, ಕರ್ನಾಟಕ ಎರಡನೇ ಸ್ಥಾನವನ್ನು ಪಡೆದು ಎಂಟರ ಘಟ್ಟಕ್ಕೆ ಅರ್ಹತೆ ಪಡೆದಿದೆ.

ಫೆಬ್ರವರಿ 6 ರಿಂದ ಆರಂಭವಾಗಲಿರುವ ರಣಜಿ ಟ್ರೋಫಿಯ ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಘೋಷಿಸಲಾಗಿದೆ. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಮುನ್ನಡೆಸಿದ್ದ ದೇವದತ್ ಪಡಿಕ್ಕಲ್‌ ಎಂಟರ ಘಟ್ಟದಲ್ಲೂ ಪಂದ್ಯವನ್ನು ಮುನ್ನಡೆಸಲಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿ ಸೈ ಎನಿಸಿಕೊಂಡಿರುವ ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.

Karnataka

ಮೋಹಾಲಿಯಲ್ಲಿ ನಡೆದಿದ್ದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ದೇವದತ್ ಪಡಿಕ್ಕಲ್‌ ಮಿಂಚಿದರು. ಇವರು ನಾಯಕನ ಆಟವಾಡಿ ಮಿಂಚಿದ್ದರು. ಇವರಿಗೆ ಆಯ್ಕೆ ಸಮಿತಿ ವಿಶ್ವಾಸವಿಟ್ಟಿದ್ದು ಮುಂಬೈ ವಿರುದ್ಧದ ಪಂದ್ಯಕ್ಕೂ ಇವರಿಗೆ ಪಟ್ಟ ಕಟ್ಟಲಾಗಿದೆ. ಉಳಿದಂತೆ ಕರ್ನಾಟಕ ತಂಡದಲ್ಲಿ ಮಹತ್ವದ ಬದಲಾವಣೆ ಏನು ಇಲ್ಲ. ರಣಜಿ ಕ್ವಾರ್ಟರ್‌ ಫೈನಲ್‌ಗೆ ಪ್ರಕಟಿಸಲಾದ ತಂಡದಲ್ಲಿ ಅನುಭವಿ ಹಾಗೂ ಯುವ ಆಟಗಾರರು ಇದ್ದಾರೆ.

ಕ್ವಾರ್ಟರ್ ಫೈನಲ್‌ ಪಂದ್ಯಕ್ಕಾಗಿ ಕರ್ನಾಟಕ ತಂಡ: ಮಯಾಂಕ್‌ ಅಗರ್‌ವಾಲ್‌, ಕೆಎಲ್ ರಾಹುಲ್, ಅನೀಶ್‌ ಕೆವಿ, ದೇವದತ್ ಪಡಿಕ್ಕಲ್‌ (ನಾಯಕ), ಕರುಣ್‌ ನಾಯರ್, ಆರ್‌ ಸ್ಮರಣ್‌, ಶ್ರೇಯಸ್ ಗೋಪಾಲ್‌, ಕೃತಿಕ್ ಕೃಷ್ಣ, ವೆಂಕಟೇಶ್‌ ಎಂ, ವಿದ್ಯಾಧರ್‌ ಪಾಟೀಲ್‌, ಪ್ರಸಿದ್ಧ್ ಕೃಷ್ಣ, ಮೊಹ್ಸಿನ್‌ ಖಾನ್‌, ಶಿಖರ್‌ ಶೆಟ್ಟಿ, ಶ್ರೀಜೇತ್ ಕೆಎಲ್, ವಿದ್ವತ್‌ ಕಾವೇರಪ್ಪಾ,

ಶಾರ್ದೂಲ್‌ ವಾಪಸ್‌

ಮುಂಬೈ ತಂಡದಲ್ಲೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಲೀಗ್‌ ಹಂತದ ಕೆಲವು ಪಂದ್ಯಗಳಿಂದ ತಂಡದಿಂದ ದೂರವುಳಿದಿದ್ದ ನಾಯಕ ಶಾರ್ದೂಲ್ ಠಾಕೂರ್ ಮತ್ತೆ ತಂಡಕ್ಕೆ ಮರಳಿದ್ದಾರೆ. ಇನ್ನು ಭರವಸೆಯ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಗಾಯದಿಂದ ಗುಣಮುಖರಾಗಿದ್ದು ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಇವರ ಚೇತರಿಕೆಯ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ.

ಕ್ವಾರ್ಟರ್ ಫೈನಲ್‌ ಪಂದ್ಯಕ್ಕಾಗಿ ಮುಂಬೈ ತಂಡ: ಶಾರ್ದೂಲ್ ಠಾಕೂರ್ (ನಾಯಕ), ಯಶಸ್ವಿ ಜೈಸ್ವಾಲ್, ಮುಶೀರ್ ಖಾನ್, ಅಖಿಲ್ ಹೆರ್ವಾಡ್ಕರ್, ಸಿದ್ದೇಶ್ ಲಾಡ್, ಸರ್ಫರಾಜ್ ಖಾನ್, ಆಕಾಶ್ ಆನಂದ್ (ವಿಕೆಟ್ ಕೀಪರ್), ಹಾರ್ದಿಕ್ ತಾಮೋರೆ (ವಿಕೆಟ್ ಕೀಪರ್), ಸಾಯಿರಾಜ್ ಪಾಟೀಲ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ, ಓಂಕಾರ್ ತರ್ಮಲೆ, ದಿವ್ಯೇಶ್ ಸಕ್ಸೇನಾ ಮತ್ತು ಸೂರ್ಯಾಂಶ್ ಶೇಡ್ಗೆ.

Story first published: Monday, February 2, 2026, 19:20 [IST]
Other articles published on Feb 2, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+