For Quick Alerts
ALLOW NOTIFICATIONS  
For Daily Alerts
 

ನಮೀಬಿಯಾ ವಿರುದ್ಧ ಏಕದಿನ ಸರಣಿ ಆಡಲಿದೆ ಕರ್ನಾಟಕ ತಂಡ: ಸರಣಿಯ ಸಂಪೂರ್ಣ ಮಾಹಿತಿ

ಕರ್ನಾಟಕ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ತಂಡವೊಂದರ ವಿರುದ್ಧ ಏಕದಿನ ಮಾದರಿಯ ಸರಣಿಯನ್ನಾಡಲು ಸಜ್ಜಾಗಿದೆ. ಹೌದು, ನಮೀಬಿಯಾ ತಂಡದ ವಿರುದ್ಧ ಅದರದ್ದೇ ನೆಲದಲ್ಲಿ ಆಡುವ ಹಿನ್ನೆಲೆಯಲ್ಲಿ ಕರ್ನಾಟಕ ನಮೀಬಿಯಾಗೆ ಪ್ರವಾಸ ಕೈಗೊಂಡಿದ್ದು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ. ಜೂನ್ 2ರಿಂದ ಆರಂಭವಾಗಲಿರುವ ಈ ಸರಣಿ ಜೂನ್ 11ರಂದು ಅಂತ್ಯವಾಗಲಿದೆ.

ದೇಶೀಯ ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಕರ್ನಾಟಕ ತಂಡ ಏಕದಿನ ಮಾದರಿಯಲ್ಲಿ ಆಡುವ ವಿಜಯ್ ಹಜಾರೆ ಟೂರ್ನಿಯ 10 ಆವೃತ್ತಿಗಳಲ್ಲಿ 4 ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಸಾಧನೆ ಮಾಡಿದೆ. ಇದೀಗ ಅಂತಾರಾಷ್ಟ್ರೀಯ ತಂಡದ ವಿರುದ್ಧ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದು ಕರ್ನಾಟಕದ ಪ್ರತಿಭಾನ್ವಿತ ಆಟಗಾರರಿಗೆಓಈ ಮೂಲಕ ವಿಶೇಷ ಅವಕಾಶವೊಂದಿ ದೊರೆತಿದೆ.

Karnataka vs Namibia

ಇತ್ತೀಚೆಗೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಬೌಲಿಂಗ್‌ನಲ್ಲಿ ಮಿಂಚಿರುವ ವಿಜಯ್‌ಕುಮಾರ್ ವೈಶಾಕ್ ಸೇರಿದಂತೆ 13 ಆಟಗಾರರ ಕರ್ನಾಟಕ ತಂಡ ಈಗಾಗಲೇ ನಮೀಬಿಯಾಗೆ ಪ್ರಯಾಣ ಬೆಳೆಸಿದೆ. ಆರ್ ಸಮರ್ಥ್, ಕೆವಿ ಸಿದ್ಧಾರ್ಥ್, ವಿದ್ವತ್ ಕಾವೇರಪ್ಪ ಮೊದಲಾದ ಆಟಗಾರರು ಕರ್ನಾಟಕ ತಂಡದಲ್ಲಿದ್ದು ಪಿವಿ ಶಶಿಕಾಂತ್ ಕೋಚ್ ಆಗಿ ಹಾಗೂ ಅಶುತೀಶ್ ಪೊಲ್ ಮ್ಯಾನೇಜರ್ ಆಗಿ ತಂಡದೊಂದಿಗಿದ್ದಾರೆ.

ಇನ್ನು ನಮೀನಿಯಾ ಇತ್ತೀಚೆಗಷ್ಟೇ ಐಸಿಸಿ ವಿಶ್ವಕಪ್ 2023ರ ಕ್ವಾಲಿಫಯರ್ ಪ್ಲೇಆಫ್ ಸುತ್ತಿನ ಆತಿಥ್ಯವಹಿಸಿತ್ತು. ಈ ಟೂರ್ನಿಯಲ್ಲಿ ಯುಎಇ ಹಾಗೂ ಯುಎಸ್‌ಎ ತಂಡಗಳು ಮಾತ್ರವೇ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿದ್ದು ಮೂರನೇ ಸ್ಥಾನ ಪಡೆದ ನಮೀಬಿಯಾ ಅರ್ಹತೆ ಗಳಿಸುವಲ್ಲಿ ವಿಫಲವಾಗಿದೆ.

ಇನ್ನು ಕರ್ನಾಟಕ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ನಮೀಬಿಯಾದ ಪ್ರಮುಖ ಆಟಗಾರರಾದ ಡೇವಿಡ್ ವೈಸ್ ಹಾಗೂ ರುಬೆನ್ ಟ್ರಂಪೆಲ್ಮನ್ ಆಡುತ್ತಿಲ್ಲ. ಆದರೆ ನಾಯಕ ಗೆರ್ಹಾರ್ಡಸ್ ಎರಾಸ್ಮಸ್, ಸ್ಟೀಫನ್ ಬಾರ್ಡ್, ಜಾನ್ ಫ್ರಿಲಿಂಕ್, ಜೇನ್ ಗ್ರೀನ್, ಬರ್ನಾರ್ಡ್ ಸ್ಕೋಲ್ಟ್ಜ್, ಮೈಕೆಲ್ ವ್ಯಾನ್ ಲಿಂಗೆನ್, ಮತ್ತು ಪಿಕ್ಕಿ ಯಾ ಫ್ರಾನ್ಸ್ ಅವರಂತಾ ಆಟಗಾರರ ಬಳಗದೊಂದಿಗೆ ಕಣಕ್ಕಿಳಿಯುತ್ತಿದೆ.

ವೇಳಾಪಟ್ಟಿ ಹೀಗಿದೆ
ಈ ಸರಣಿಯ ಎಲ್ಲಾ ಐದು ಪಂದ್ಯಗಳು 50 ಓವರ್‌ಗಳ ಮಾದರಿಯಲ್ಲಿ ನಡೆಯಲಿದ್ದು ಸ್ಥಳೀಯ ಕಾಲಮಾನ ಬೆಳಿಗ್ಗೆ 9:30ಕ್ಕೆ ಆರಂಬವಾಗಲಿದೆ. ಅಂದರೆ ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಯಿಂದ ಪಂದ್ಯಗಳು ಪ್ರಾರಂಭವಾಗುತ್ತವೆ. ನಮೀನಿಯಾದ ವಿಂಡ್‌ಹೀಕ್ ನಗರದ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ಈ ಎಲ್ಲಾ ಪಂದ್ಯಗಳು ಆಯೋಜನೆಯಾಗಲಿದೆ.
1ನೇ ಪಂದ್ಯ: ಜೂನ್ 2, ಶುಕ್ರವಾರ
2ನೇ ಪಂದ್ಯ: ಜೂನ್ 4, ಭಾನುವಾರ
3ನೇ ಪಂದ್ಯ: ಜೂನ್ 7, ಬುಧವಾರ
4ನೇ ಪಂದ್ಯ: ಜೂನ್ 9, ಶುಕ್ರವಾರ
5ನೇ ಪಂದ್ಯ: ಜೂನ್ 11, ಭಾನುವಾರ

ನಮೀಬಿಯಾ ತಂಡ: ಗೆರ್ಹಾರ್ಡಸ್ ಎರಾಸ್ಮಸ್ (ನಾಯಕ), ಸ್ಟೀಫನ್ ಬಾರ್ಡ್, ಜಾನ್ ಫ್ರೈಲಿಂಕ್, ಜೇನ್ ಗ್ರೀನ್, ಬರ್ನಾರ್ಡ್ ಸ್ಕೋಲ್ಟ್ಜ್, ಮೈಕೆಲ್ ವ್ಯಾನ್ ಲಿಂಗೆನ್, ಪಿಕ್ಕಿ ಯಾ ಫ್ರಾನ್ಸ್, ಮಿಚೌ ಡು ಪ್ರೀಜ್, ಗೆರ್ಹಾರ್ಡ್ ಜಾನ್ಸೆ ವ್ಯಾನ್ ರೆನ್ಸ್‌ಬರ್ಗ್, ತಂಗಿ ನುಯೋಮಾ, ಬೆನ್ ಶಿಕೊಂಗೊ, ಕಾರ್ಲ್ ಬಿರ್ಕೆನ್‌ಸ್ಟಾಕ್, ಕಾರ್ಲ್ ಬಿ ಹ್ಯಾಂಡ್ರೆ ಕ್ಲಾಜಿಂಗಾ, ನಿಕೋ ಡೇವಿಡ್

ಕರ್ನಾಟಕ ತಂಡ ಹೀಗಿದೆ: ಸಮರ್ಥ್ ಆರ್, ವಿಜಯಕುಮಾರ್ ವೈಶಕ್, ಕೆವಿ ಸಿದ್ಧಾರ್ಥ್, ನಿಕಿನ್ ಜೋಸ್, ಕಿಶನ್ ಬಿದರೆ, ಕೃತಿಕ್ ಕೃಷ್ಣ, ಶುಭಾಂಗ್ ಹೆಗ್ಡೆ, ವಿದ್ವತ್ ಕಾವೇರಪ್ಪ, ರಿಷಿ ಬೋಪಣ್ಣ, ಚೇತನ್ ಎಲ್ ಆರ್, ಅನೀಶ್ವರ್ ಗೌತಮ್, ಲೋಚನ್ ಅಪ್ಪಣ್ಣ, ಆದಿತ್ಯ ಗೋಪಾಲ್

Story first published: Thursday, June 1, 2023, 10:25 [IST]
Other articles published on Jun 1, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+