Karnataka v/s Haryana: ವಿಜಯ್ ಹಜಾರೆ ಟ್ರೋಫಿ ಫೈನಲ್ ಪ್ರವೇಶಿಸುವ ವಿಶ್ವಾಸದಲ್ಲಿ ಕರ್ನಾಟಕ
ದೇಶೀಯ ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಕರ್ನಾಟಕ ಬುಧವಾರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹರಿಯಾಣ ತಂಡದ ವಿರುದ್ಧ ಕಾದಾಟ ನಡೆಸಲಿದೆ. ಐದನೇ ಬಾರಿಗೆ ಟ್ರೋಫಿಯ ಮೇಲೆ ಕಣ್ಣು ನೆಟ್ಟಿರುವ ಮಯಾಂಕ್ ಪಡೆ ಅಮೋಘ ಆಟದ ಪ್ರದರ್ಶನ ನೀಡುತ್ತಿದೆ. ಸ್ಟಾರ್ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದು ತಂಡದ ಮನೋಬಲವನ್ನು ಹೆಚ್ಚಿಸಿದೆ. ಈ ಪಂದ್ಯವನ್ನು ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸುವ ಕನಸು ಕರ್ನಾಟಕ ತಂಡದ್ದಾಗಿದೆ.
ವಡೋಧಾರದಲ್ಲಿ ನಡೆದಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ 5 ರನ್‌ಗಳಿಂದ ಬರೋಡಾ ತಂಡವನ್ನು ಮಣಿಸಿ, ಎಂಟರ ಘಟ್ಟಕ್ಕೆ ಪ್ರವೇಶ ಪಡೆದಿತ್ತು. ಇನ್ನು ಹರಿಯಾಣ ತನ್ನ ಎಂಟರ ಘಟ್ಟದ ಕಾದಾಟದಲ್ಲಿ 2 ವಿಕೆಟ್‌ಗಳಿಂದ ಗುಜರಾತ್ ತಂಡವನ್ನು ಮಣಿಸಿತ್ತು.

ಭರ್ಜರಿ ಫಾರ್ಮ್‌ನಲ್ಲಿರುವ ಸ್ಟಾರ್ಸ್
ಬಾರ್ಡರ್ ಗವಾಸ್ಕರ್ ಸರಣಿಯ ಬಳಿಕ ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಂಡವನ್ನು ಸೇರಿದ ದೇವದತ್ ಪಡಿಕ್ಕಲ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಶತಕ ಬಾರಿಸಿ ತಂಡಕ್ಕೆ ಆಧಾರವಾದರು. ಇನ್ನು ಪ್ರಸಿದ್ಧ ಕೃಷ್ಣ ಕೊಂಚ ಲಯದಿಂದ ಪರದಾಡುತ್ತಿದ್ದರು. ಆದರೆ ಕೊನೆಯಲ್ಲಿ ಅವರು ಸ್ಥಿರ ಬೌಲಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾದರು. ಪ್ರಸಿದ್ಧ ಸೆಮಿಫೈನಲ್ ಪಂದ್ಯದಲ್ಲಿ ಆರಂಭದಿಂದಲೇ ಸ್ಥಿರ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ಇನ್ನು ಶ್ರೇಯಸ್ ಗೋಪಾಲ್ ಎದುರಾಳಿಗೆ ಕಾಡಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ.
ಟೀಮ್ ಇಂಡಿಯಾಕ್ಕೆ ಎಂಟ್ರಿ ನೀಡುವ ಕನಸು ಕಾಣುತ್ತಿರುವ ಮಯಾಂಕ್ ಅಗರ್ವಾಲ್ ವಿಜಯ್ ಹಜಾರೆ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಮಯಾಂಕ್ ಆಡಿದ 8 ಪಂದ್ಯಗಳಲ್ಲಿ 4 ಶತಕ ಬಾರಿಸಿ ಆರ್ಭಟಿಸಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದ ಆಟಗಾರರು ಜವಾಬ್ದಾರಿಯನ್ನು ಅರಿತು ಆಡಿದಲ್ಲಿ ಬೃಹತ್ ಮೊತ್ತವನ್ನು ಕಲೆ ಹಾಕಬಹುದು. ಈಗಾಗಲೇ ಕರ್ನಾಟಕ ತಂಡ ಟೂರ್ನಿಯಲ್ಲಿ 3 ಬಾರಿ 300ಕ್ಕೂ ಹೆಚ್ಚು ರನ್ ಸಿಡಿಸಿದೆ. ಇದೇ ಆಟವನ್ನು ಸೆಮಿಫೈನಲ್‌ನಲ್ಲಿ ಆಡುವ ಅವಶ್ಯಕತೆ ಇದೆ.
ಕರ್ನಾಟಕದ ಪರ ಟಾಪ್ ರನ್ ಸ್ಕೋರರ್ಸ್ 93
ಮಯಾಂಕ್ ಅಗರ್ವಾಲ್, 8 ಪಂದ್ಯ, 619 ರನ್
ಕೆವಿ ಅವಿನಾಶ್, 8 ಪಂದ್ಯ, 342 ರನ್
ಆರ್.ಸ್ಮರಣ್, 8 ಪಂದ್ಯ, 256 ರನ್

ಹೆಚ್ಚು ವಿಕೆಟ್ ಪಡೆದ ಕರ್ನಾಟಕದ ಬೌಲರ್ಸ್
ಶ್ರೇಯಸ್ ಗೋಪಾಲ್, 8 ಪಂದ್ಯ, 16 ವಿಕೆಟ್
ವಾಸುಕಿ ಕೌಶಿಕ್, 8 ಪಂದ್ಯ, 15 ವಿಕೆಟ್
ಅಭಿಲಾಶ್ ಶೆಟ್ಟಿ, 5 ಪಂದ್ಯ, 10 ವಿಕೆಟ್
ಹರಿಯಾಣ ಸಹ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸಿದೆ. ಈ ವೇಳೆ ತಂಡಕ್ಕೆ ಅಲ್‌ರೌಂಡರ್ ನಿಶಾಂತ್ ಸಿಂಧು ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆಧಾರವಾಗಿದ್ದಾರೆ. ಇನ್ನು ಸ್ಟಾರ್ ಆಟಗಾರ ಅಂಕಿತ್ ಕುಮಾರ್ ಸಹ ಸ್ಥಿರ ಪ್ರದರ್ಶನ ನೀಡುತ್ತಿದ್ದು ಭರವಸೆ ಮೂಡಿಸಿದ್ದಾರೆ. ಟೂರ್ನಿಯಲ್ಲಿ ಅಂಕಿತ್ ಕುಮಾರ್, ಹಿಮಾಂಶು ರಾಣಾ ತಲಾ ಒಂದು ಶತಕ ಬಾರಿಸಿದ್ದಾರೆ.
ಹರಿಯಾಣ ಪರ ಗರಿಷ್ಠ ರನ್ ಸಾಧಕರು
ಅಂಕಿತ್ ಕುಮಾರ್, 9 ಪಂದ್ಯ, 419 ರನ್
ಹಿಮಾಂಶು ರಾಣಾ, 9 ಪಂದ್ಯ, 318 ರನ್
ನಿಶಾಂತ್ ಸಿಂಧು, 9 ಪಂದ್ಯ, 313 ರನ್
ಹರಿಯಾಣ ಪರ ಹೆಚ್ಚು ವಿಕೆಟ್ ಪಡೆದ ಬೌಲರ್ಸ್
ಅಂಶುಲ್ ಕಾಂಬೋಜ್, 9 ಪಂದ್ಯ, 16 ವಿಕೆಟ್
ಅಮಿತ್ ರಾಣಾ, 9 ಪಂದ್ಯ, 12 ವಿಕೆಟ್
ನಿಶಾಂತ್ ಸಿಂಧು, 9 ಪಂದ್ಯ, 12 ವಿಕೆಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications