For Quick Alerts
ALLOW NOTIFICATIONS  
For Daily Alerts
 

Karun vs Mayank: ವಿಜಯ್ ಹಜಾರೆ ಪ್ರಶಸ್ತಿ ಸುತ್ತಿನ ಕರ್ನಾಟಕದ ಸವಾಲು ಎದುರಿಸಲಿದೆ ವಿದರ್ಭ

ದೇಶೀಯ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಕರ್ನಾಟಕ ಹಾಗೂ ವಿದರ್ಭ ತಂಡಗಳು ವಿಜಯ್ ಹಜಾರೆ ಟೂರ್ನಿಯ ಫೈನಲ್‌ನಲ್ಲಿ ಕಾದಾಟ ನಡೆಸಲಿವೆ. ವಡೋಧರಾದಲ್ಲಿ ಶನಿವಾರ ನಡೆಯುವ ಪಂದ್ಯ ಎಲ್ಲರ ಚಿತ್ತ ಕದ್ದಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಐದನೇ ಬಾರಿಗೆ ಟ್ರೋಫಿಗೆ ಮುತ್ತಿಡುವ ಕನಸು ಕರ್ನಾಟಕ ತಂಡದ್ದಾಗಿದೆ. ಇನ್ನು ಇದೇ ಚೊಚ್ಚಲ ಬಾರಿಗೆ ಪ್ರಶಸ್ತಿ ಸುತ್ತು ಪ್ರವೇಶಿಸಿರುವ ವಿದರ್ಭ ಟ್ರೋಫಿ ಎತ್ತುವ ಕನಸಿನಲ್ಲಿದೆ.

ದಶಕಗಳ ಕಾಲ ಒಂದೇ ತಂಡದ ಪರ ಆಡಿದ ಇಬ್ಬರು ಸ್ನೇಹಿತರ ನಡುವಿನ ಕಾಳಗ ನೋಡಲು ಅಭಿಮಾನಿಗಳು ರೆಡಿ ಆಗಿದ್ದಾರೆ. ಕ್ರಿಕೆಟ್‌ ವ್ಯಾಕರಣವನ್ನು ಕಲಿತ ರಾಜ್ಯದ ವಿರುದ್ಧ ಕರುಣ್‌ ನಾಯರ್ ಕಣಕ್ಕೆ ಇಳಿಯಲಿದ್ದಾರೆ. ಫಾರ್ಮ್‌ ಇಲ್ಲದೆ ಇದ್ದಾಗ ಕರುಣ್ ನಾಯರ್ ಅವರನ್ನು ಕರ್ನಾಟಕ ತಂಡ ಕೈ ಬಿಟ್ಟಿತ್ತು. ಆಗ ಕರುಣ್‌ ವಿದರ್ಭ ತಂಡಕ್ಕೆ ವಲಸೆ ಹೋದರು. ಈಗ ತವರಿನ ತಂಡದ ವಿರುದ್ಧ ಪ್ರಶಸ್ತಿಗಾಗಿ ವಿದರ್ಭ ತಂಡವನ್ನು ಮುನ್ನಡೆಸುತ್ತಿದ್ದಾರೆ.

Karnataka vs Vidarbha A Clash of Titans in Vijay Hazare Trophy Final

ಸಂಘಟಿತ ಬ್ಯಾಟಿಂಗ್ ಬಲ

ಆಸ್ಟ್ರೇಲಿಯಾ ಪ್ರವಾಸದಲಿದ್ದ ದೇವದತ್ ಪಡಿಕ್ಕಲ್‌ ತವರಿಗೆ ಮರಳುತ್ತಿದ್ದಂತೆ ಕರ್ನಾಟಕ ತಂಡದ ಪರ ವಿಜಯ್ ಹಜಾರೆ ಟೂರ್ನಿ ಆಡಲು ಮುಂದಾದರು. ಈ ವೇಳೆ ಸಿಕ್ಕ ಎರಡು ಅವಕಾಶದಲ್ಲೂ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದರು. ಇವರ ಆಗಮನ ನಿಶ್ಚಿತವಾಗಿ ಕರ್ನಾಟಕ ತಂಡ ಬ್ಯಾಟಿಂಗ್ ವಿಭಾಗಕ್ಕೆ ಆನೆ ಬಲ ತುಂಬಿದಂತೆ ಆಗಿದೆ. ಇನ್ನು ಟೂರ್ನಿಯಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಮಯಾಂಕ್ ಅಗರ್‌ವಾಲ್‌, ಕೆವಿ ಅನೀಶ್‌, ಆರ್‌.ಸ್ಮರಣ್, ಕೆಎಲ್‌ ಶ್ರೀಜೇಶ್ ತಂಡಕ್ಕೆ ನೆರವಾಗಬಲ್ಲರು ಮಧ್ಯಮ ಕ್ರಮಮಾಂಕದಲ್ಲಿ ಶ್ರೇಯಸ್ ಗೋಪಾಲ್ ಹಾಗೂ ಅಭಿನವ್ ಮನೋಹರ್ ತಂಡದ ಪರ ರನ್‌ ಹಿಗ್ಗಿಸಬಲ್ಲರು.

ಕರ್ನಾಟಕದ ಪರ ಹೆಚ್ಚು ರನ್ ಬಾರಿಸಿದ ಬ್ಯಾಟರ್ಸ್‌

ಮಯಾಂಕ್‌ ಅಗರ್‌ವಾಲ್‌, 9 ಪಂದ್ಯ, 619 ರನ್‌,
ಕೆವಿ ಅನೀಶ್, 9 ಪಂದ್ಯ, 364 ರನ್,
ಕೆ.ಸ್ಮರಣ್, 9 ಪಂದ್ಯ, 332 ಪಂದ್ಯ,

ಕರ್ನಾಟಕದ ಬೌಲಿಂಗ್ ಸ್ಥಿರವಾಗಿದೆ. ವಿಕೆಟ್‌ ಬೇಟೆ ನಡೆಸಿ, ರನ್‌ಗಳಿಗೆ ಕಡಿವಾಣ ಹಾಕಬಲ್ಲ ಬೌಲರ್ಸ್‌ ರಾಜ್ಯ ತಂಡದಲ್ಲಿದ್ದಾರೆ. ಶ್ರೇಯಸ್ ಗೋಪಾಲ್, ಹಾರ್ದಿಕ್ ರಾಜ್ ಮಿಡ್ಲ್‌ ಓವರ್ ಎದುರಾಳಿಗಳನ್ನು ಕಾಡಬಲ್ಲರು. ಇನ್ನು ವೇಗಿಗಳಾದ ಅಭಿಲಾಶ್ ಶೆಟ್ಟಿ, ವಾಸುಕಿ ಕೌಶಿಕ್, ಪ್ರಸಿದ್ಧ ಕೃಷ್ಣ ಸಹ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲರು.

ಕರ್ನಾಟದಕ ಪರ ಗರಿಷ್ಠ ವಿಕೆಟ್‌ ಸಾಧಕರು

ಶ್ರೇಯಸ್ ಗೋಪಾಲ್‌, 9 ಪಂದ್ಯ, 18 ವಿಕೆಟ್‌
ವಾಸುಕಿ ಕೌಶೀಕ್‌, 9 ಪಂದ್ಯ, 15 ವಿಕೆಟ್‌
ಅಭಿಲಾಶ್ ಶೆಟ್ಟಿ, 6 ಪಂದ್ಯ, 14 ವಿಕೆಟ್‌

Karnataka vs Vidarbha A Clash of Titans in Vijay Hazare Trophy Final

ಕರುಣ್‌ ಬಲ

ವಿದರ್ಭ ತಂಡದ ಪರ ಕರುಣ್ ನಾಯರ್ ನಾಯಕನಾಗಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ತಂಡವನ್ನು ಕರುಣ್ ನಾಯರ್ ಫೈನಲ್‌ಗೆ ಕರೆದುಕೊಂಡು ಹೋದ ಶ್ರೇಯವನ್ನು ಹೊಂದಿದ್ದಾರೆ. ಇನ್ನು ಆರಂಭಿಕರಾದ ಧ್ರುವ್ ಶೋರೆ, ಯಶ್ ರಾಥೋಡ್ ಮಾತ್ರ ತಂಡಕ್ಕೆ ಆಧಾರವಾಬಲ್ಲರು. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಇನ್ನು ಬೌಲರ್‌ಗಳು ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಚೊಚ್ಚಲ ಪ್ರಶಸ್ತಿ ತೋಡಿಸಲು ಶ್ರಮಿಸಬೇಕಿದೆ.

ವಿದರ್ಭ ಪರ ಗರಿಷ್ಠ ರನ್‌ ಸ್ಕೋರರ್‌

ಕರುಣ್ ನಾಯರ್, 8 ಪಂದ್ಯ, 752 ರನ್‌
ಧ್ರುವ್ ಶೋರೆ, 8 ಪಂದ್ಯ, 384 ರನ್‌
ಯಶ್ ರಾಥೋಡ್, 8 ಪಂದ್ಯ, 384 ರನ್‌

ವಿದರ್ಭ ಪರ ಹೆಚ್ಚು ವಿಕೆಟ್‌ ಪಡೆದ ಬೌಲರ್ಸ್‌

ನಚಿಕೇತ್ ಭೂತೇ, 8 ಪಂದ್ಯ, 15 ವಿಕೆಟ್‌
ಹರ್ಷ ದುಬೆ, 8 ಪಂದ್ಯ, 14 ವಿಕೆಟ್‌
ದರ್ಶನ್ ನಲ್ಕಂಡೆ, 8 ಪಂದ್ಯ, 13 ವಿಕೆಟ್‌

Story first published: Friday, January 17, 2025, 8:10 [IST]
Other articles published on Jan 17, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+