For Quick Alerts
ALLOW NOTIFICATIONS  
For Daily Alerts
 

SMAT: ಮೊದಲ ಕ್ವಾ.ಫೈನಲ್‌ನಲ್ಲಿ ಕರ್ನಾಟಕ್ಕೆ ಪಂಜಾಬ್ ಎದುರಾಳಿ

Karnataka will be facing Punjab in the first quarter finals of Syed Mushtaq Ali Trophy

ಬೆಂಗಳೂರು: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿರುವ ಕರ್ನಾಟಕ ತಂಡ ಮೊದಲ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಪಂಜಾಬ್ ತಂಡದ ಸವಾಲು ಸ್ವೀಕರಿಸಲಿದೆ. ಈ ಪಂದ್ಯ ಜನವರಿ 26ರ ಮಂಗಳವಾರ ಸರ್ದಾರ್ ಪಟೇಲ್ ಸ್ಟೇಡಿಯಂ ಅಹ್ಮದಾಬಾದ್‌ನಲ್ಲಿ ನಡೆಯಲಿದೆ.

ಎಲೈಟ್ ಗ್ರೂ 'ಎ'ಯಲ್ಲಿರುವ ಕರ್ನಾಟಕ ತಂಡ ಲೀಗ್ ಹಂತದ ಕೊನೇ ಪಂದ್ಯವಾಡಿದ್ದು ಉತ್ತರಪ್ರದೇಶದ ವಿರುದ್ಧ. ಇದರಲ್ಲಿ 5 ವಿಕೆಟ್ ಜಯದೊಂದಿಗೆ ಕರ್ನಾಟಕ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದೊಂದಿಗೆ ಲೀಗ್ ಹಂತದ ಸ್ಪರ್ಧೆ ಮುಗಿಸಿತ್ತು.

ಗ್ರೂಪ್‌ 'ಎ'ಯಲ್ಲಿ ಪಂಜಾಬ್‌ ತಂಡ ಮೊದಲ ಸ್ಥಾನದಲ್ಲಿದೆ. ಪಂಜಾಬ್‌ ತಂಡ ಆಡಿರುವ 5 ಪಂದ್ಯಗಳಲ್ಲಿ ಐದರಲ್ಲೂ ಗೆಲುವು ಕಂಡು ಬಲಿಷ್ಠ ತಂಡವಾಗಿ ಹೊರಹೊಮ್ಮಿದ್ದರೆ, ಕರ್ನಾಟಕ ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಕಂಡಿತ್ತು. ಕರುಣ್ ನಾಯರ್ ಕರ್ನಾಟಕ ತಂಡಕ್ಕೆ ನಾಯಕರಾಗಿದ್ದಾರೆ.

ಜನವರಿ 26ರಂದು ಪ್ರಥಮ ಮತ್ತು ದ್ವಿತೀಯ ಕ್ವಾರ್ಟರ್ ಫೈನಲ್‌‌ ಪಂದ್ಯಗಳು ಅಹ್ಮದಾಬಾದ್‌ನಲ್ಲಿ ನಡೆಯಲಿವೆ. ಮೊದಲ ಪಂದ್ಯ 12 pmಗೆ ಆರಂಭಗೊಂಡರೆ, ದ್ವಿತೀಯ ಪಂದ್ಯ 7 pmಗೆ ಆರಂಭವಾಗಲಿದೆ. ಜನವರಿ 27ರಂದು ತೃತೀಯ ಮತ್ತು ಚತುರ್ಥ ಕ್ವಾರ್ಟರ್ ಫೈನಲ್‌ ಪಂದ್ಯಗಳು ನಡೆಯಲಿವೆ. ಜನವರಿ 29ರಂದು ಸೆಮಿಫೈನಲ್‌ ಪಂದ್ಯಗಳು ಮತ್ತು ಜನವರಿ 31ರಂದು ಫೈನಲ್ ಪಂದ್ಯ ನಡೆಯಲಿದೆ.

Story first published: Friday, January 22, 2021, 9:44 [IST]
Other articles published on Jan 22, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+