ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಕಲಬುರಗಿಯ ಮಮತಾ ಮಡಿವಾಳ
4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ಗೆ ಗುರುವಾರ ನವದೆಹಲಿಯಲ್ಲಿ ಹರಾಜು ನಡೆಯಿತು. ಈ ವೇಳೆ ಹಲವು ಸ್ಟಾರ್ ಆಟಗಾರ್ತಿಯರು ಫ್ರಾಂಚೈಸಿಗಳು ಭಾರೀ ಹಣವನ್ನು ನೀಡಿ ತಂಡಕ್ಕೆ ಬರಮಾಡಿಕೊಂಡವು. ಇದೇ ವೇಳೆ ಯುವ ಆಟಗಾರ್ತಿಯರಿಗೂ ಸಹ ಫ್ರಾಂಚೈಸಿಗಳು ಮಣೆ ಹಾಕಿದ್ದಾರೆ. ಇದೇ ವೇಳೆ ಭಾರತ "ಎ" ತಂಡದ ಪರ ಆಡಿರುವ ಭರವಸೆಯ ವಿಕೆಟ್ ಕೀಪರ್ ಕನ್ನಡತಿ ಮಮತಾ ಮಡಿವಾಳ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ಮಣೆ ಹಾಕಿದೆ.
ಮಮತಾ ಮಡಿವಾಳ ಎಸಿಸಿ ಉದಯೋನ್ಮುಖ ಮಹಿಳೆಯರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡದ ಪರ ಆಡಿದ ಅನುಭವ ಹೊಂದಿದ್ದಾರೆ. ಇವರು ಈ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರೂಪದಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ. ಕಳೆದ ಬಾರಿಯ ಡಬ್ಲ್ಯೂಪಿಎಲ್ ಲೀಸ್ಟ್‌ನಲ್ಲಿ ಇವರ ಹೆಸರು ಸೇರ್ಪಡೆ ಆಗಿತ್ತು. ಆದರೆ ಯಾವೊಬ್ಬ ಫ್ರಾಂಚೈಸಿ ಇವರನ್ನು ಕೊಂಡಿರಲಿಲ್ಲ. ಆದರೆ ಈ ಬಾರಿ ಇವರು ಡಬ್ಲ್ಯೂಪಿಎಲ್ ಅಖಾಡ ಪ್ರವೇಶಿಸಲಿದ್ದಾರೆ. ಈ ಮೂಲಕ ಸಿಕ್ಕ ಅವಕಾಶವನ್ನು ಬಳಸಿಕೊಂಡು ದೊಡ್ಡ ಸಾಧನೆ ಮಾಡುವ ಕನಸು ಕನ್ನಡತಿಯದ್ದಾಗಿದೆ.

ಮಮತಾ ಮಡಿವಾಳ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕೋಲುಕುಂದ ಗ್ರಾಮದವರು. ಇವರು ಹೈದರಾಬಾದ್‌ನಲ್ಲಿರುವ ಮಹಿಳಾ ವಂದನಾ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದಾರೆ. ಮಮತಾ ಅವರ ಕ್ರಿಕೆಟ್ ಪ್ರೀತಿ ಅವರನ್ನು ಕಲಬುರಗಿಯಿಂದ ಹೈದರಾಬಾದ್‌ಗೆ ಹೋಗುವಂತೆ ಮಾಡಿತು. ಇವರು 13ನೇ ವಯಸ್ಸಿನಲ್ಲಿ ಹೈದರಾಬಾದ್‌ನಲ್ಲಿ ಕ್ರಿಕೆಟ್ ವ್ಯಾಕರಣ ಕಲಿಯಲು ಆರಂಭಿಸಿದ್ದಾರೆ.
ಮಮತಾ ಸಾಧನೆ
ಮಮತಾ ಮಡಿವಾಳ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡಿದ್ದು, ಭರವಸೆ ಮೂಡಿಸಿದ್ದಾರೆ. ಇವರು ಹೈದರಾಬಾದ್ ತಂಡದ ಪರ ಏಕೈಕ ರಣಜಿ ಪಂದ್ಯ ಆಡಿದ್ದು, ಈ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಇವರು ಬಿಸಿಸಿಐ ಮಹಿಳಾ ಅಂಡರ್ 19, ಸೌತ್ ಝೋನ್ ಮಹಿಳಾ ಅಂಡರ್ 16, ಬಿಸಿಸಿಐ ಚಾಲೆಂಜರ್ಸ್ ಟ್ರೋಫಿ, ಭಾರತ "ಬಿ" ತಂಡ ಆಡಿದ್ದು, ಈಗ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸದ್ದು ಮಾಡಲು ಸಿದ್ಧರಾಗಿದ್ದಾರೆ. ಇವರಿಗೆ ಡೆಲ್ಲಿ ಕ್ಯಾಪಿಟಲ್ಸ್ ಇವರ ಮೂಲ ಬೆಲೆಯನ್ನು ನೀಡಿ ಖರೀದಿಸಿದೆ.
ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದಿ ಆಟಗಾರ್ತಿಯರ ಪಟ್ಟಿ
ಚಿನೆಲ್ಲೆ ಹೆನ್ರಿ, ₹1.3 ಕೋಟಿ
ಶ್ರೀ ಚರಣ, ₹1.3 ಕೋಟಿ
ಲಾರಾ ವೊಲ್ವಾರ್ಡ್ಟ್, ₹1.1 ಕೋಟಿ
ಸ್ನೇಹಾ ರಾಣ, ₹50 ಲಕ್ಷ
ಮಿನು ಮಣಿ, ₹40 ಲಕ್ಷ
ಲಿಝೆಲ್ ಲೀ, ₹30 ಲಕ್ಷ
ತಾನಿಯಾ ಭಾಟಿಯಾ, ₹30 ಲಕ್ಷ
ನಂದಿನಿ ಶರ್ಮಾ, ₹20 ಲಕ್ಷ
ದೀಯಾ ಯಾದವ್, ₹10 ಲಕ್ಷ
ಮಮತಾ ಮಡಿವಾಳ, ₹10 ಲಕ್ಷ
ಲೂಸಿ ಹ್ಯಾಮಿಲ್ಟನ್, ₹10 ಲಕ್ಷ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications