Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Purple Cap: ಕರ್ನಾಟದ ವೇಗಿ ಪ್ರಸಿದ್ಧ್ ಕೃಷ್ಣಾ ಮುಡಿಗೆ ಪರ್ಪಲ್‌ ಕ್ಯಾಪ್‌ ಗರಿ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಆಟಗಾರರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ವೇಳೆ ಆರೆಂಜ್‌ ಕ್ಯಾಪ್‌ನ್ನು ಗುಜರಾತ್ ಟೈಟಾನ್ಸ್ ತಂಡದ ಸಾಯಿ ಸುದರ್ಶನ್‌ ಪಾಲಾದರೆ, ಮಹತ್ವದ ಪರ್ಪಲ್‌ ಕ್ಯಾಪ್‌ ಪ್ರಶಸ್ತಿ ಕರ್ನಾಟಕದ ಸ್ಟಾರ್ ಬೌಲರ್‌ ಪ್ರಸಿದ್ಧ್ ಕೃಷ್ಣಾ ಪಾಲಾಗಿದೆ. ಇವರು 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದು ಸಾಧನೆ ಮಾಡಿದ್ದಾರೆ.

ಕರ್ನಾಟಕದ ಸ್ಟಾರ್ ಆಟಗಾರ ಈ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದರು. ಇವರ ಆರಂಭದಿಂದಲೂ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬೌಲ್ ಮಾಡಿದರು. ಆರಂಭದಲ್ಲಿ ಮಿಡ್ಲ್‌ ಓವರ್‌ಗಳಲ್ಲಿ ಬೌಲಿಂಗ್‌ ಮಾಡುತ್ತಿದ್ದ ಪ್ರಸಿದ್ಧ್ ಕೃಷ್ಣಾ, ಕೊನೆಗೆ ಪವರ್ ಪ್ಲೇನಲ್ಲೂ ಬೌಲಿಂಗ್ ಮಾಡುತ್ತಿದ್ದರು. ಅಲ್ಲದೆ ಡೆತ್‌ ಓವರ್‌ಗಳಲ್ಲಿ ರನ್‌ಗಳಿಗೆ ಕಡಿವಾಣ ಹಾಕಿ, ವಿಕೆಟ್‌ ಬೇಟೆ ನಡೆಸಿದ್ದಾರೆ. ಇವರ ಈ ಅಮೋಘ ಪ್ರದರ್ಶನಕ್ಕೆ ಪರ್ಪಲ್‌ ಕ್ಯಾಪ್‌ ಲಭಿಸಿದೆ.

Karnataka s Prasidh Krishna Bags IPL Purple Cap for Most Wickets

ಕರ್ನಾಟಕದ ಸ್ಟಾರ್ ವೇಗದ ಬೌಲರ್‌ ಪ್ರಸಿದ್ಧ್ ಕೃಷ್ಣಾ ಆಡಿದ 15 ಪಂದ್ಯಗಳಲ್ಲಿ 25 ವಿಕೆಟ್‌ ಪಡೆದು, ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗೆ ನೀಡುವ ಪರ್ಪಲ್‌ ಕ್ಯಾಪ್‌ ತಮ್ಮದಾಗಿಸಿಕೊಂಡರು.

ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್ಸ್‌

ಪ್ರಸಿದ್ಧ್‌ ಕೃಷ್ಣ, ಗುಜರಾತ್ ಟೈಟಾನ್ಸ್, 15 ಪಂದ್ಯ, 25 ವಿಕೆಟ್‌
ನೂರ್ ಅಹ್ಮದ್‌, ಸಿಎಸ್‌ಕೆ, 14 ಪಂದ್ಯ, 24 ವಿಕೆಟ್‌
ಜೋಶ್‌ ಹ್ಯಾಜಲ್‌ವುಡ್‌, ಆರ್‌ಸಿಬಿ, 12 ಪಂದ್ಯ, 22 ವಿಕೆಟ್‌
ಟ್ರೆಂಟ್ ಬೌಲ್ಟ್‌, ಮುಂಬೈ ಇಂಡಿಯನ್ಸ್‌, 16 ಪಂದ್ಯ, 22 ವಿಕೆಟ್‌
ಅರ್ಷದೀಪ್‌ ಸಿಂಗ್‌, ಪಂಜಾಬ್‌ ಕಿಂಗ್ಸ್‌, 17 ಪಂದ್ಯ, 21 ವಿಕೆಟ್‌

ವರ್ಷ ಅಟಗಾರ ತಂಡ ವಿಕೆಟ್‌
2008 ಸೋಹಿಲ್‌ ತನ್ವೀರ್‌ ಆರ್‌ಆರ್‌ 22
2009 ಆರ್‌ಪಿ ಸಿಂಗ್‌ ಡಿಸಿಎಚ್‌ 23
2010 ಪ್ರಜ್ಞಾನ್ ಓಝಾ ಡಿಸಿಎಸ್‌ 21
2011 ಲಸಿತ್ ಮಲಿಂಗ್ ಎಂಐ 28
2012 ಮಾರ್ನೆ ಮಾರ್ಕಲ್‌ ಡಿಡಿ 25
2013 ಡ್ವೇನ್ ಬ್ರಾವೋ ಸಿಎಸ್‌ಕೆ 32
2014 ಮೋಹಿತ್‌ ಶರ್ಮಾ ಸಿಎಸ್‌ಕೆ 23
2015 ಡ್ವೇನ್ ಬ್ರಾವೊ ಸಿಎಸ್‌ಕೆ 26
2016 ಭುವನೇಶ್ವರ್ ಕುಮಾರ್‌ ಎಸ್‌ಆರ್‌ಎಚ್‌ 23
2017 ಭುವನೇಶ್ವರ್ ಕುಮಾರ್‌ ಎಸ್‌ಆರ್‌ಎಚ್‌ 26
2018 ಆಂಡ್ರಿ ಟೈ ಪಂಜಾಬ್‌ 24
2019 ಇಮ್ರಾನ್‌ ತಾಹೀರ್‌ ಸಿಎಸ್‌ಕೆ 26
2020 ಕಗಿಸ ರೊಬೊಡಾ ಡಿಸಿ 30
2021 ಹರ್ಷಲ್ ಪಟೇಲ್‌ ಆರ್‌ಸಿಬಿ 32
2022 ಯುಜುವೇಂದ್ರ ಚಹಾಲ್‌ ಆರ್‌ಆರ್‌ 27
2023 ಮೊಹಮ್ಮದ್ ಶಮಿ ಜಿಟಿ 28
2024 ಹರ್ಷಲ್‌ ಪಟೇಲ್ ಪಂಜಾಬ್‌ 24
2025 ಪ್ರಸಿದ್ಧ್ ಕೃಷ್ಣ ಜಿಟಿ 25

Story first published: Wednesday, June 4, 2025, 0:25 [IST]
Other articles published on Jun 4, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+