ಯಶಸ್ವಿ ಬ್ಯಾಟಿಂಗ್ ಗುಟ್ಟನ್ನು ಬಿಚ್ಚಿಟ್ಟ ಕರ್ನಾಟಕದ ಸ್ಟಾರ್ ಪ್ಲೇಯರ್ ಕೆಎಲ್ ರಾಹುಲ್
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಕೆಎಲ್ ರಾಹುಲ್ ಅವರ 86 ರನ್‌ಗಳ ನೆರವಿನಿಂದ ಭಾರತ ಅತ್ಯಂತ ಬಲಿಷ್ಠ ಸ್ಥಿತಿಗೆ ತಲುಪಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ಮೊದಲ ಇನಿಂಗ್ಸ್‌ನಲ್ಲಿ 175 ರನ್‌ಗಳ ಮುನ್ನಡೆ ಸಾಧಿಸಿದೆ. ಎರಡನೇ ದಿನದಾಟದ ಅಂತ್ಯದ ಬಳಿಕ ಕೆಎಲ್ ರಾಹುಲ್ ತಮ್ಮ ಬ್ಯಾಟಿಂಗ್ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಬಾರಿಸಿದ ಬಳಿಕ ಆತ್ಮವಿಶ್ವಾಸ ಮರಳಿ ಬಂತು ಎಂದು ರಾಹುಲ್ ಹೇಳಿದ್ದಾರೆ.
ರಾಹುಲ್ ತಮ್ಮ 86 ರನ್ ಗಳ ಇನ್ನಿಂಗ್ಸ್ ಬಗ್ಗೆ ಪಂದ್ಯದ ಬಳಿಕ ಮನಬಿಚ್ಚಿ ಮಾತನಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಶತಕದ ನಂತರ ನನ್ನ ಆತ್ಮವಿಶ್ವಾಸ ಮತ್ತೆ ದ್ವಿಗುಣವಾಗಿದೆ.. ಗಾಯದ ನಂತರ, ನಾನು ಆಡಲು ಆರಂಭಿಸಿ 6 ರಿಂದ 7 ತಿಂಗಳಾಗಿವೆ. ಸಕಾರಾತ್ಮಕವಾಗಿ ಆಡುವುದು ನನ್ನ ಉದ್ದೇಶವಾಗಿತ್ತು. ಅಲ್ಲದೆ ಮೈದಾನದಲ್ಲಿ ಹೆಚ್ಚು ಕಾಲ ಟೈಮ್ ಸ್ಪೆಂಡ್ ಮಾಡುವುದೇ ಉದ್ದೇಶವಾಗಿತ್ತು. ಇನ್ನು ಹೈದರಾಬಾದ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಾಗಿರಲಿಲ್ಲ. ಚೆಂಡು ತಿರುಗುತ್ತಿತ್ತು. ಸಮಯ ಕಳೆದಂತೆ, ಪಿಚ್ ತುಂಬಾ ನಿಧಾನವಾಯಿತು. ಇಲ್ಲಿ ಬ್ಯಾಟಿಂಗ್ ಮಾಡಲು ತುಂಬಾ ಕಷ್ಟವಾಗುತ್ತಿತ್ತು ಎಂದಿದ್ದಾರೆ.

ನಾನು ಸುದೀರ್ಘ ಕಾಲದಿಂದ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ಆನಂದಿಸಿದ್ದೇನೆ. ಆದರೆ ಈಗ ತಂಡ ನನಗೆ ಹೊಸ ಜವಾಬ್ದಾರಿ ನೀಡಿದೆ. ನೀವು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಬೇಕಾದರೆ, ಯಾವುದೇ ಸ್ಥಾನದಲ್ಲಿ ಬ್ಯಾಟ್ ಮಾಡುವುದು ಅವಶ್ಯಕ. ಇವನ್ನೆಲ್ಲಾ ಮನಗೊಂಡು ನಾವು ಬ್ಯಾಟಿಂಗ್ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಬೌಲರ್‌ಗಳು ಏನು ಯೋಜಿಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಂಡು ಅವರು ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ದರು. ಇಂದು ಕೇವಲ ಎರಡನೇ ದಿನ. ಸಾಧ್ಯವಾದಷ್ಟು ರನ್ ಗಳಿಸುವುದು ನಮ್ಮ ಪ್ರಯತ್ನ. ತಂಡದಿಂದಲೂ ಅದೇ ಸಂದೇಶ ಬಂದಿದೆ. ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿ ಆಡುತ್ತಿದ್ದೇವೆ ಎಂದಿದ್ದಾರೆ.
ಕೆಎಲ್ ರಾಹುಲ್ 123 ಎಸೆತಗಳಲ್ಲಿ 86 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದರು. ರಾಹುಲ್ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಹಾಗೂ 8 ಸಿಕ್ಸರ್‌ಗಳು ಸೇರಿದ್ದವು. ರಾಹುಲ್ ಹೊರತಾಗಿ ಯಶಸ್ವಿ ಜೈಸ್ವಾಲ್ 80 ರನ್‌ಗಳ ಇನಿಂಗ್ಸ್ ಆಡಿದರು. ದಿನದಾಟದ ಅಂತ್ಯಕ್ಕೆ ರವೀಂದ್ರ ಜಡೇಜಾ 81 ರನ್ ಗಳಿಸಿ ಅಜೇಯರಾಗಿ ಪೆವಿಲಿಯನ್ ಗೆ ಮರಳಿದರು.
ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 7 ವಿಕೆಟ್ ನಷ್ಟಕ್ಕೆ 421 ರನ್ ಗಳಿಸಿದೆ. ಭಾರತ ಮೊದಲ ಇನಿಂಗ್ಸ್‌ನಲ್ಲಿ 175 ರನ್‌ಗಳ ಮುನ್ನಡೆ ಸಾಧಿಸಿದೆ. ಇದಕ್ಕೂ ಮುನ್ನ ಭಾರತದ ಬೌಲರ್‌ಗಳು ಇಂಗ್ಲೆಂಡ್‌ನ ಇನ್ನಿಂಗ್ಸ್ ಅನ್ನು 246 ರನ್‌ಗಳಿಗೆ ಆಲೌಟ್ ಆಗಿತ್ತು.

ರವೀಂದ್ರ ಜಡೇಜಾ ಅವರು ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ್ದಾರೆ. ಇವರು ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿದರು. ಇವರು 155 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 81 ರನ್ ಸಿಡಿಸಿದ್ದು ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರು 19 ರನ್ ಬಾರಿಸಿ ಶತಕ ಬಾರಿಸುವ ಕನಸಿನಲ್ಲಿದ್ದಾರೆ. ಇವರಿಗೆ ಇನ್ನೊಬ್ಬ ಆಲ್‌ರೌಂಡರ್ ಅಕ್ಷರ್ ಪಟೇಲ್ ಸಾಥ್ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications