Vijaykumar Vyshak: ಬಿಸಿಸಿಐ ಆಯ್ಕೆ ಸಮಿತಿಯ ಕದ ತಟ್ಟುತ್ತಿರುವ ಕನ್ನಡಿಗ ವೇಗಿ
ಭಾರತ ತಂಡಕ್ಕೆ ಅದೆಷ್ಟೋ ಸ್ಟಾರ್ ಆಟಗಾರರನ್ನು ಕರ್ನಾಟಕ ನೀಡಿದೆ. ಈಗಲೂ ಸಹ ಟೀಮ್ ಇಂಡಿಯಾ ಸೇರಿಕೊಳ್ಳುವ ಆಡಗಾರರ ತಂಡ ಕರ್ನಾಟಕ ಟೀಮ್‌ನಲ್ಲಿದೆ. ಈ ಪಟ್ಟಿಯಲ್ಲಿ ಎದ್ದು ಕಾಣುವ ಹೆಸರು ವಿಜಯ್‌ಕುಮಾರ್ ವೈಶಾಖ.
ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸುತ್ತಿರುವ ಸ್ಟಾರ್ ಆಟಗಾರ. ಬರೀ ಬೌಲಿಂಗ್‌ನಿಂದ ಅಷ್ಟೇ ಅಲ್ಲ, ತಮ್ಮ ಬ್ಯಾಟಿಂಗ್‌ನಿಂದಲೂ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್. ಗುರುವಾರದಿಂದ ಆರಂಭವಾದ ದುಲೀಪ್ ಟ್ರೋಫಿಯಲ್ಲಿ ಇವರು ಮನಮೋಹಕ ಪ್ರದರ್ಶನ ನೀಡಿದ್ದಾರೆ.

ಭಾರತ 'ಡಿ' ವಿರುದ್ಧ ಅಬ್ಬರ
ಗುರುವಾರದಿಂದ ಆರಂಭವಾದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕನ್ನಡಿಗ ವಿಜಯ್‌ಕುಮಾರ್ ವೈಶಾಖ್ ಅಮೋಘ ಪ್ರದರ್ಶನ ನೀಡಿದ್ದಾರೆ. ಅನಂತಪುರದಲ್ಲಿ ನಡೆಯುತ್ತಿರುವ ಭಾರತ ಡಿ ಹಾಗೂ ಭಾರತ ಸಿ ನಡುವಿನ ಪಂದ್ಯದಲ್ಲಿ ಇವರು ಬೌಲಿಂಗ್ ನಡೆಸಿದರು. ಇವರ ಎಸೆತಗಳನ್ನು ಎದುರಿಸುವಲ್ಲಿ ಟೀಮ್ ಇಂಡಿಯಾ ಆಟಗಾರರು ಕಂಗಾಲಾಗಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಭಾರತ ಡಿ ಕಳಪೆ ಪ್ರದರ್ಶನ ನೀಡಿತು. ಪಂದ್ಯದ ಆರನೇ ಓವರ್‌ನ ಎರಡನೇ ಎಸೆತದಲ್ಲಿ ಶ್ರೇಯಸ್ ಅಯ್ಯರ್‌ಗೆ ಆಫ್ ಸ್ಟಂಪ್ ಆಚೆ ಚೆಂಡನ್ನು ಹಾಕಿ, ವೈಶಾಖ್ ಖೆಡ್ಡಾ ತೋಡಿದರು. ನಂತರ ಇದೇ ಓವರ್‌ನ ಕೊನೆಯ ಎಸೆತದಲ್ಲಿ ದೇವದತ್ ಪಡಿಕ್ಕಲ್ ಇಲ್ಲದ ಹೊಡೆತಕ್ಕೆ ಮುಂದಾಗಿ ರುತುರಾಜ್ ಗಾಯಕ್ವಾಡ್‌ಗೆ ಕ್ಯಾಚ್ ನೀಡಿದರು.

ತಂಡಕ್ಕೆ ಅವಶ್ಯಕತೆ ಇದ್ದಾಗಲೆಲ್ಲಾ ಚೆಂಡು ಪಡೆದು ಸ್ಥಿರ ಬೌಲಿಂಗ್ ದಾಳಿಯನ್ನು ನಡೆಸಬಲ್ಲ ಕಲೆಯನ್ನು ಕರ್ನಾಟಕದ ವೇಗಿ ವೈಶಾಖ್ ಕರಗತ ಮಾಡಿಕೊಂಡಿದ್ದಾರೆ. ಭಾರತ ಡಿ ಪರ 9ನೇ ವಿಕೆಟ್‌ಗೆ ಅರ್ಷದೀಪ್ ಸಿಂಗ್ ಹಾಗೂ ಅಕ್ಷರ್ ಪಟೇಲ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಆಗ ಈ ಜೋಡಿಯನ್ನು ಬೇರ್ಪಡಿಸಿದ್ದು ವಿಜಯ್‌ಕುಮಾರ್.. ಅರ್ಷದೀಪ್‌ಗೆ ಶಾಟ್ ಬೌಲ್ ಎಸೆದು ಖೆಡ್ಡಾ ತೋಡಿದರು.
ಇತ್ತೀಚಿಗೆ ನಡೆದ ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲೂ ಇವರ ಸ್ಥಿರ ಪ್ರದರ್ಶನ ನೀಡಿದ್ದಾರೆ.
ಗುಲ್ಬರ್ಗ ಪರ ಅಮೋಘ ಪ್ರದರ್ಶನ
ಗುಲ್ಬರ್ಗ ಮಿಸ್ಟೆಕ್ಸ್ ಪರ ಬೌಲ್ ಮಾಡಿದ್ದ ವಿಜಯ್ ಕುಮಾರ್ ಆಡಿದ 9 ಪಂದ್ಯಗಳಲ್ಲಿ 9.72 ಏಕನಾಮಿಯಲ್ಲಿ 11 ವಿಕೆಟ್ ಪಡೆದಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲಿ ಇವರು 94 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಸೇರಿದೆ.

ಆರ್‌ಸಿಬಿ ಪರ ಮಿಂಚು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬೌಲಿಂಗ್ ಮಾಡಿರುವ ಅನುಭವ ಹೊಂದಿರುವ ವಿಜಯ್‌ಕುಮಾರ್ ವೈಶಾಖ್ ಅಬ್ಬರಿಸಿದ್ದಾರೆ. ಇವರು ಆಡಿದ 11 ಪಂದ್ಯಗಳಲ್ಲಿ 13 ವಿಕೆಟ್ ಪಡೆದು ಬೀಗಿದ್ದಾರೆ. ಇವರು ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ.
ಭಾರತ ತಂಡ ಸೇರುವ ಕನಸು
ವಿಜಯ್‌ಕುಮಾರ್ ವೈಶಾಖ್ ಭಾರತ ತಂಡವನ್ನು ಸೇರುವ ಕನಸು ಹೊಂದಿದ್ದಾರೆ. ಇದೇ ತಿಂಗಳು 19 ರಿಂದ ಬಾಂಗ್ಲಾದೇಶದ ವಿರುದ್ಧ ಆರಂಭವಾಗಲಿರುವ ಟೆಸ್ಟ್ ತಂಡದಲ್ಲಿ ಸ್ಥಾನ ನೀಡುವಂತೆ ಇವರು, ಬಿಸಿಸಿಐ ಆಯ್ಕೆ ಸಮಿತಿಯ ಕದ ತಟ್ಟಿದ್ದಾರೆ. ಈಗಾಗಲೇ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಿರುವ ವಿಜಯ್‌ಕುಮಾರ್ ಭಾರತ ತಂಡದಲ್ಲಿ ಮಿಂಚ ಬೇಕು ಎಂಬುದು ಅಭಿಮಾನಿಗಳ ಆಶಯ. ಇವರ ಕನಸು ಈಡೇರುತ್ತಾ ಎಂಬ ಪ್ರಶ್ನೆಗೆ ಬಾಂಗ್ಲಾ ವಿರುದ್ಧದ ಟೆಸ್ಟ್ ತಂಡ ಪ್ರಕಟಗೊಂಡ ಬಳಿಕವೇ ಉತ್ತರ ಲಭಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications