For Quick Alerts
ALLOW NOTIFICATIONS  
For Daily Alerts
 

Karun Nair: ಮೈದಾನದಲ್ಲಿ ಕರುಣ್‌, ಬುಮ್ರಾ ನಡುವೆ ವಾಗ್ವಾದ, ಪಂದ್ಯದ ಬಳಿಕ ತಬ್ಬಿಕೊಂಡ ಸ್ಟಾರ್ಸ್‌: ವಿಡಿಯೋ ವೈರಲ್

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾರೀ ಸುದ್ದಿಯಲ್ಲಿರುವ ಕೆಲವೇ ಕೆಲವು ಹೆಸರುಗಳಲ್ಲಿ ಕರ್ನಾಟಕದ ಕರುಣ್‌ ನಾಯರ್ ಕೂಡ ಒಬ್ಬರು. ಇವರು ತಮ್ಮ ಭರ್ಜರಿ ಕಂ ಬ್ಯಾಕ್‌ನಿಂದ ಇಡೀ ಜಗತ್ತಿನ ಗಮನ ಸೆಳೆದಿದ್ದಾರೆ. ಮೈದಾನದಲ್ಲಿ ಇವರು ಆಡಿದ ಧಾಟಿಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಇಷ್ಟು ದಿನಗಳ ಕಾಲ ಇವರನ್ನು ಬೆಂಚ್ ಮೇಲೆ ಕೂರಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಹ ಈಗ ಬೇಸರ ಪಟ್ಟುಕೊಳ್ಳುತ್ತಿದೆ. ಇಂತಹ ಅಮೋಘ ಇನಿಂಗ್ಸ್‌ ಆಡಿದ್ದ ಕರುಣ್‌ ನಾಯರ್‌, ವಿಶ್ವದ ಕ್ಲಾಸ್‌ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಜಸ್ಪ್ರಿತ್ ಬುಮ್ರಾ ಅವರಿಗೆ ಮುಂಬೈ ವಿರುದ್ಧದ ಪಂದ್ಯದಲ್ಲಿ ದಂಡಿಸಿದರು.

ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯ ದೆಹಲಿಯ ಅರುಣ್‌ ಜೇಟ್ಲಿ ಅಂಗಳದಲ್ಲಿ ನಡೆಯಿತು. ಈ ವೇಳೆ ಮುಂಬೈ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ, ಇಂಪ್ಯಾಕ್ಟ್ ಪ್ಲೇಯರ್‌ ರೂಪದಲ್ಲಿ ಕರುಣ್‌ ನಾಯರ್‌ ಅವರಿಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಅವಕಾಶವನ್ನು ನೀಡಿತು. ಈ ವೇಳೆ ಕರುಣ್‌ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಕರುಣ್‌ ಅಬ್ಬರಿಸಿದರು. ಇದೇ ಪಂದ್ಯದಲ್ಲಿ ಜಸ್ಪ್ರಿತ್‌ ಬುಮ್ರಾ ಅವರ ಒಂದೇ ಓವರ್‌ನಲ್ಲಿ ಕರುಣ್‌ 18 ರನ್‌ ಬಾರಿಸಿ ಮಿಂಚಿದರು. ಈ ವೇಳೆ ಇಬ್ಬರೂ ಆಟಗಾರರ ನಡುವೆ ಮಾತಿನ ಚಕಮಕಿ ಸಹ ನಡೆದಿತ್ತು.

Karun Nair and Bumrah Reconcile with a Hug After On-Field Clash in DC vs MI Thriller video viral

ವೈರಲ್‌ ವಿಡಿಯೋ

ಇದೇ ಓವರ್‌ನಲ್ಲಿ ಬುಮ್ರಾ, ಕರುಣ್‌ ನಾಯರ್ ಜೊತೆಗೆ ವಾಗ್ವಾದ ನಡೆಸಿದರು. ಬುಮ್ರಾ ಓವರ್‌ನ ಕೊನೆಯ ಎಸೆತದಲ್ಲಿ ಎರಡು ರನ್‌ ಓಡುವಾಗ ನಾನ್-ಸ್ಟ್ರೈಕರ್‌ ತುದಿಯಲ್ಲಿದ್ದ ಬುಮ್ರಾ, ಕರುಣ್‌ಗೆ ಡಿಕ್ಕಿ ಹೊಡೆದರು. ಇದಾದ ಬಳಿಕ ಕರುಣ್‌ ನಾಯರ್ ಜಸ್ಪ್ರಿತ್‌ರಲ್ಲಿ ಕ್ಷಮೆಯನ್ನು ಸಹ ಕೇಳಿದ್ರು. ಆದರೆ ಪಂದ್ಯ ಮುಗಿದ ಬಳಿಕ ಇಬ್ಬರನ್ನೂ ಸೇರಿಸುವ ಕೆಲಸವನ್ನು ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಮಾಡಿದರು. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಡೆಲ್ಲಿ ಕ್ಯಾಪಿಟಲ್ಸ್ ತನ್ನ ಸಾಮಾಜಿಕ ತಾಣದಲ್ಲಿ ಈ ವೈರಲ್‌ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಜಸ್ಪ್ರಿತ್ ಬುಮ್ರಾ ಹಾಗೂ ಕರುಣ್‌ ನಯರ್‌ ತಬ್ಬಿಕೊಂಡು ಪರಸ್ಪರ ಮಾತನಾಡುತ್ತಿರುವುದು ಕಂಡುಬಂದಿದೆ. ಆರಂಭದಲ್ಲಿ ಕೈಕುಲಕಿದ ಇಬ್ಬರೂ ಸ್ಟಾರ್ಸ್ ನಂತರ ಅಪ್ಪಿಕೊಂಡು, ಕೆಲ ಹೊತ್ತು ಸಂಭಾಷಣೆಯನ್ನು ನಡೆಸಿದರು. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿದ ಬಳಿಕ ಅಭಿಮಾನಿಗಳು ಈಗ ಇವರಿಬ್ಬರ ನಡುವಿನ ಸಿಟ್ಟು ಮಂಜಿನಂತೆ ಕರಗಿದನ್ನು ಕಂಡು ಫುಲ್ ಖುಷ್ ಆಗಿದ್ದಾರೆ.

ಮುಂಬೈ ನೀಡಿದ್ದ 205 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕರುಣ್ ನಾಯರ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 40 ಎಸೆತಗಳಲ್ಲಿ 89 ರನ್‌ ಸಿಡಿಸಿ ಮಿಂಚಿದರು. ಇವರ ಅಮೋಘ ಆಟದಲ್ಲಿ 12 ಬೌಂಡರಿ, 5 ಸಿಕ್ಸರ್‌ಗಳು ಸೇರಿವೆ. ಆದರೆ ಇವರ ಆಟ ತಂಡದ ಗೆಲುವಿನಲ್ಲಿ ಸಹಾಯ ಮಾಡಲಿಲ್ಲ ಎಂಬ ಬೇಸರ ಅವರಿಗಿದೆ. ಪಂದ್ಯದ ಬಳಿಕ ಎಷ್ಟೇ ಸ್ಕೋರ್ ಮಾಡಿದ್ರೂ ಪಂದ್ಯ ಗೆಲ್ಲದೇ ಇದ್ದರೇ ಏನು ಅರ್ಥವಿಲ್ಲ ಎಂದು ತಿಳಿಸಿದ್ದಾರೆ.

Story first published: Tuesday, April 15, 2025, 10:08 [IST]
Other articles published on Apr 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+