Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Karun Nair world record: ಕರುಣ್‌ ನಾಯರ್ ಲೀಸ್ಟ್‌ ಎ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ

ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಬಲ್ ಶತಕ ಬಾರಿಸಿ ಸದ್ದು ಮಾಡಿದ್ದ ಕರುಣ್‌ ನಾಯರ್ ಈಗ ಮತ್ತೆ ಭಾರೀ ಸುದ್ದಿಯಲ್ಲಿದ್ದಾರೆ. ಇವರು ಲೀಸ್ಟ್‌ ಎ ಕ್ರಿಕೆಟ್‌ನಲ್ಲಿ ವಿದರ್ಭ ಪರ ಬ್ಯಾಟ್ ಮಾಡುತ್ತಿದ್ದು, ಅಮೋಘ ಫಾರ್ಮ್‌ನಲ್ಲಿದ್ದಾರೆ. ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಲ್ಲಿ ಬಳಸಿಕೊಳ್ಳುತ್ತಿರುವ ಕರುಣ್‌, ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡುವ ಕನಸು ಕಾಣುತ್ತಿದೆ. ಶುಕ್ರವಾರ ವಿದರ್ಭ ಹಾಗೂ ಉತ್ತರ ಪ್ರದೇಶ ಪಂದ್ಯದ ವೇಳೆ ಮತ್ತೊಂದು ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಕರುಣ್ ಬರೆದ ವಿಶ್ವ ದಾಖಲೆಯ ವಿವರ ಇಲ್ಲಿದೆ.

ಇಂಗ್ಲೆಂಡ್ ವಿರುದ್ಧದ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ ಮೆಚ್ಚಿಸಲು ಆಟಗಾರರು ಇನ್ನಿಲದ ಕಸರತ್ತು ನಡೆಸಿದ್ದಾರೆ. ಇನ್ನು ಕೆಲವು ಆಟಗಾರರು ಐಪಿಎಲ್‌ನಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ದೇಶಿಯ ಕ್ರಿಕೆಟ್‌ನಲ್ಲಿ ಅಬ್ಬರ ನಡೆಸುತ್ತಿದ್ದಾರೆ. ಇದೇ ವೇಳೆ ಕಾರ್ನಟಕದ ಕರುಣ್‌ ನಾಯರ್ ಸಹ ಮತ್ತೆ ಭಾರತ ತಂಡ ಸೇರುವ ಕನಸು ಕಾಣುತ್ತಿದ್ದಾರೆ. ಶುಕ್ರವಾರ ನಡೆದ ವಿಜಯ್ ಹಜಾರೆ ಟ್ರೋಫಿ ಡಿ ಗುಂಪಿನ ಪಂದ್ಯದಲ್ಲಿ ಉತ್ತರ ಪ್ರದೇಶ ಮೊದಲು ಬ್ಯಾಟ್ ಮಾಡಿ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 307 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ವಿದರ್ಭ 47.2 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 313 ರನ್‌ ಸೇರಿಸಿ ಜಯ ಸಾಧಿಸಿತು.

Karun Nair Creates World Record in List A Cricket with 500 Runs Without Dismissal

ಉತ್ತರ ಪ್ರದೇಶ ವಿರುದ್ಧ ಶತಕ

ವಿದರ್ಭ ಜಯದಲ್ಲಿ ನಾಯಕ ಕರುಣ್ ನಾಯರ್ ಪಾತ್ರ ದೊಡ್ಡದು. ಇವರು 101 ಎಸೆತಗಳಲ್ಲಿ 112 ರನ್‌ ಸಿಡಿಸಿದರು. ಇದರಲ್ಲಿ 11 ಬೌಂಡರಿ, 2 ಸಿಕ್ಸರ್‌ಗಳು ಸೇರಿವೆ. ಇವರಲ್ಲದೆ ಮತ್ತೋರ್ವ ಆರಂಭಿಕ ಆಟಗಾರ ಯಶ್ ರಾಥೋಡ್ ಕೂಡ ಶತಕ ಸಿಡಿಸಿದರು. ಈ ಶತಕದೊಂದಿಗೆ, ಕರುಣ್ ನಾಯರ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ವಿಶ್ವ ದಾಖಲೆ ನಿರ್ಮಿಸಿದ ಕರುಣ್

ಕರುಣ್‌ ನಾಯರ್ ವಿಜಯ್ ಹಜಾರೆ ಟ್ರೋಫಿ ಮೊದಲ ಪಂದ್ಯದಲ್ಲಿ ಜಮ್ಮು ವಿರುದ್ಧ ಅಜೇಯ 112, ಚತ್ತೀಸಗಢ ವಿರುದ್ಧ ಅಜೇಯ 44, ಚಂಡೀಗಡ್ ವಿರುದ್ಧ ಅಜೇಯ 163, ತಮಿಳು ನಾಡು ವಿರುದ್ಧ ಅಜೇಯ 111 ರನ್‌ ಸಿಡಿಸಿದ್ದರು. ಶುಕ್ರವಾರ ಯುಪಿ ವಿರುದ್ಧ ನಾಯರ್ 70 ರನ್‌ ಬಾರಿಸುತ್ತಿದ್ದಂತೆ ಲೀಸ್ಟ್ ಎ ಕ್ರಿಕೆಟ್‌ನಲ್ಲಿ ಔಟ್ ಆಗದೆ 500ಕ್ಕೂ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡರು. ನ್ಯೂಜಿಲೆಂಡ್‌ನ ಜೇಮ್ಸ್ ಫ್ರಾಂಕ್ಲಿನ್ (527) ಅವರ ದಾಖಲೆಯನ್ನು ಕರುಣ್‌ ಅಳಿಸಿ ಹಾಕಿದರು. ಇದರೊಂದಿಗೆ ಕರುಣ್ ನಾಯರ್ ಲಿಸ್ಟ್ "ಎ" ನಲ್ಲಿ ಒಮ್ಮೆಯೂ ಔಟಾಗದೆ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ.

Story first published: Friday, January 3, 2025, 19:01 [IST]
Other articles published on Jan 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+