For Quick Alerts
ALLOW NOTIFICATIONS  
For Daily Alerts
 

Karun Nair: ಕರುಣ್‌ ನಾಯರ್‌ಗೆ ಸಿಗುತ್ತಾ ಶುಭ ಸುದ್ದಿ? ಇಂಗ್ಲೆಂಡ್‌ ಫ್ಲೈಟ್ ಹತ್ತುತ್ತಾರಾ?

ಭಾರತದಲ್ಲಿ ಸದ್ಯ ಟಿ20 ಕ್ರಿಕೆಟ್‌ ಹವಾ ಜೋರಾಗಿದೆ. ಈ ವೇಳೆ ಎಲ್ಲ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸಿದ್ದಾರೆ. ಈ ನಡುವೆ ಬಿಸಿಸಿಐ ಭವಿಷ್ಯದ ಬಗ್ಗೆ ತಲೆ ಕೆಡಿಸಿಕೊಂಡಿದೆ. ಭವಿಷ್ಯದಲ್ಲಿ ಟೀಮ್ ಇಂಡಿಯಾ ಎದುರಿಸಬಹುದಾದ ಸವಾಲುಗಳ ಬಗ್ಗೆ ತಲೆ ಕೆಡಿಸಿಕೊಂಡಿದೆ. ಐಪಿಎಲ್ ಮುಗಿದ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿಯನ್ನು ಆಡಲಿದೆ. ಈ ಬಗ್ಗೆ ಬಿಸಿಸಿಐ ಪ್ಲ್ಯಾನ್ ಮಾಡಿಕೊಳ್ಳಲಿದೆ.

ಈ ಸರಣಿಗೆ ಬಹುದಿನಗಳಿಂದ ಟೀಮ್ ಇಂಡಿಯಾದಿಂದ ದೂರ ಇರುವ ಕರುಣ್‌ ನಾಯರ್‌ ಇಂಗ್ಲೆಂಡ್ ಫ್ಲೈಟ್‌ ಹತ್ತುವ ಕನಸು ಮಾಡುತ್ತಿದ್ದಾರೆ. ಈ ವೇಳೆ ಅವರಿಗೆ ಒಳ್ಳೆಯ ಸುದ್ದಿ ಇನ್ನೇನು ಕೆಲವೇ ದಿನಗಳಲ್ಲಿ ಬರುವ ಸಾಧ್ಯತೆ ಇದೆ. ಇವರು ಇಂಗ್ಲೆಂಡ್‌ಗೆ ಹೋಗುವ ಅವಕಾಶವನ್ನು ಪಡೆಯುವ ಸಂಭವ ಹೆಚ್ಚಾಗಿದೆ.

Karun Nair Eyes India A Call-Up for England Tour After Stellar Domestic Performances

ಭಾರತ ಇಂಗ್ಲೇಂಡ್ ಪ್ರವಾಸದಲ್ಲಿ ಒಟ್ಟು 5 ಟೆಸ್ಟ್‌ ಸರಣಿಯನ್ನು ಜೂನ್‌ನಲ್ಲಿ ಆಡಲಿದೆ. ನಿಜಕ್ಕೂ ಇದೊಂದು ಸುಧೀರ್ಘ ಸರಣಿ ಆಗಿರಲಿದೆ. ಇದಕ್ಕಾಗಿ ಇನ್ನು ತಂಡವನ್ನು ಘೋಷಿಸಿಲ್ಲ. ಈ ಸರಣಿಗೂ ಮುನ್ನ ಭಾರತ "ಎ" ತಂಡ ಇಂಗ್ಲೆಂಡ್‌ ಫ್ಲೈಟ್‌ ಏರಲಿದೆ. ಈ ತಂಡದಲ್ಲಿ ಭಾರತ ತಂಡದಲ್ಲಿ ಕರುಣ್ ನಾಯರ್ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಕರುಣ್‌ ನಾಯರ್‌ ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ.

ದೇಶೀಯ ಟೂರ್ನಿಯಲ್ಲಿ ಅಬ್ಬರ

ಕಳೆದ ಆವೃತ್ತಿಯ ವಿಜಯ್ ಹಜಾರೆ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಕರುಣ್‌ ಸ್ಥಿರ ಪ್ರದರ್ಶನ ನೀಡಿದ್ದಾರೆ. ಈ ಸರಣಿಯಲ್ಲಿ ಇವರು ಆಡಿದ 9 ಪಂದ್ಯಗಳಲ್ಲಿ 4 ಶತಕ ಹಾಗೂ 9 ಅರ್ಧಶತಕದ ಸಹಾಯದಿಂದ 863 ರನ್‌ ಸಿಡಿಸಿದ್ದಾರೆ. ಈ ಮೂಲಕ ಈ ಪಂದ್ಯವಾಳಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಕೀರ್ತಿ ಇವರದ್ದಾಗಿದೆ. ಇನ್ನು ಐಪಿಎಲ್‌ ಕೊನೆಯ ಹಂತದ ವೇಳೆಗೆ ಬಿಸಿಸಿಐ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಸರಣಿಗೂ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.

Karun Nair Eyes India A Call-Up for England Tour After Stellar Domestic Performances

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ಭಾರತ "ಎ" ತಂಡ ಇಂಗ್ಲೆಂಡ್‌ನಲ್ಲಿ ನಾಲ್ಕು ದಿನಗಳ ಪಂದ್ಯವನ್ನು ಆಡಲಿದೆ. ಈ ವೇಳೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಆಟಗಾರರು ಇದರಲ್ಲಿ ಕಾಣಿಸಿಕೊಳ್ಳಬಹುದು. ಭಾರತ ಎ ಮತ್ತು ಲಯನ್ಸ್ ನಡುವೆ ಎರಡು ನಾಲ್ಕು ದಿನಗಳ ಪಂದ್ಯಗಳು ನಡೆಯಲಿವೆ.

2 ನಾಲ್ಕು ದಿನದ ಪಂದ್ಯ

ಕೋಲ್ಕತ್ತಾದಲ್ಲಿ ಮೇ 25 ರಂದು ಐಪಿಎಲ್‌ ಕೊನೆಗೊಂಡ ಬಳಿಕ, ಮೇ 30 ರಂದು ಭಾರತ "ಎ" ತಂಡದ ಮೊದಲ ನಾಲ್ಕು ದಿನದ ಪಂದ್ಯ ನಡೆಯಲಿದೆ. ಇನ್ನು ಈ ಸರಣಿಯ ಎರಡನೇ ನಾಲ್ಕು ದಿನದ ಪಂದ್ಯ ಜೂನ್ 6 ರಿಂದ ನಡೆಯಲಿದೆ.

ಕರುಣ್‌ ನಾಯರ್‌ ಭಾರತ ತಂಡದ ಪರ ಆಡಿ ಸೈ ಎನಿಸಿಕೊಂಡಿರುವ ಆಟಗಾರ. ಆದರೆ ಇವರು 2017 ರಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಇವರು ಟೀಮ್ ಇಂಡಿಯಾ ಪರ 6 ಟೆಸ್ಟ್‌ ಪಂದ್ಯ ಆಡಿದ್ದು, 374 ರನ್‌ಗಳನ್ನು ಗಳಿಸಿದ್ದಾರೆ. ಅವರ ಹೆಸರಲ್ಲಿ ಒಂದು ತ್ರಿಶತಕವೂ ಇದೆ. ಇವರ ದೇಶೀಯ ಪ್ರದರ್ಶನವನ್ನು ಗಮನಿಸಿದ ಬಿಸಿಸಿಐ ಆಯ್ಕೆ ಸಮಿತಿ ಇವರಿಗೆ ಭಾರತ "ಎ" ತಂಡದಲ್ಲಿ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ.

Story first published: Tuesday, March 25, 2025, 18:38 [IST]
Other articles published on Mar 25, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+