ಕ್ರಿಕೆಟ್ ವೃತ್ತಿ ಜೀವನದ ಮೇಲೆ ರಾಹುಲ್ ದ್ರಾವಿಡ್ ದೊಡ್ಡ ಪ್ರಭಾವ: ಕರುಣ್ ನಾಯರ್

ಭಾರತದ ಪರವಾಗಿ ಟೆಸ್ಟ್‌ನಲ್ಲಿ ತ್ರಿಶತಕವನ್ನು ಸಿಡಿಸಿದ ಎರಡನೇ ಆಟಗಾರ ಕನ್ನಡಿಗ ಕರುಣ್ ನಾಯರ್. ಸದ್ಯ ಕರ್ನಾಟಕ ರಣಜಿ ತಂಡದ ನಾಯಕನಾಗಿರುವ ಕರುಣ್ ನಾಯರ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಯಾವ ರೀತಿ ಪ್ರಭಾವ ಬೀರಿದರು ಎಂದು ಹೇಳಿದ್ದಾರೆ.
ಕ್ರಿಕೆಟ್‌ನಲ್ಲಿ ಸದ್ಯ ನಾನಿರುವ ಸ್ಥಾನಕ್ಕೇರಲು ರಾಹುಲ್ ದ್ರಾವಿಡ್ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಕರುಣ್ ಹೇಳಿದ್ದಾರೆ. ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಅವಕಾಶವನ್ನು ಪಡೆಯಲು ರಾಹುಲ್ ದ್ರಾವಿಡ್ ಕಾರಣ ಎಂದು ಕರುಣ್ ನಾಯರ್ ಹೇಳಿದ್ದಾರೆ.
ರಾಹುಲ್ ದ್ರಾವಿಡ್ ಓರ್ವ ಆಟಗಾರರಿಗೆ ಸ್ಪೂರ್ತಿಯನ್ನು ನೀಡುವಂತಾ ವ್ಯಕ್ತಿ. ಅವರಿಂದಾಗಿಯೇ ನನ್ನ ಆತ್ಮವಿಶ್ವಾಸ ಹೆಚ್ಚಾಯಿತು, ಮತ್ತು ಅವರೇ ಐಪಿಎಲ್‌ನಂತಾ ಟೂರ್ನಿಯಲ್ಲೂ ನಾನು ಆಡಬಹುದು ಎಂದು ವಿಶ್ವಾಸವನ್ನು ತುಂಬಿದವರು ಎಂದು ಕರುಣ್ ನಾಯರ್ ಹೇಳಿದ್ದಾರೆ.
ರಾಹುಲ್ ದ್ರಾವಿಡ್ ಇದ್ದ ಎರಡು ಐಪಿಎಲ್ ಫ್ರಾಂಚೈಸಿಯಲ್ಲಿ ಕರುಣ್ ನಾಯರ್ ಪ್ರತಿನಿಧಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್, ಎರಡೂ ಫ್ರಾಂಚೈಸಿಯಲ್ಲೂ ದ್ರಾವಿಡ್ ಮೆಂಟರ್ ಆಗಿದ್ದರು. ಈ ಮೂಲಕವೇ ಕರುಣ್ ನಾಯರ್ ರಾಷ್ಟ್ರೀಯ ತಂಡದ ಕದ ತಟ್ಟಲು ಸಾಧ್ಯವಾಯಿತು.
ಯುಟ್ಯೂಬ್ ಚಾನೆಲ್ ಒಂದಕ್ಕೆ ನಿಡಿದ ಸಂದರ್ಶನದಲ್ಲಿ ಈ ಮಾತನ್ನು ಕರುಣ್ ನಾಯರ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕದ ಮತ್ತೋರ್ವ ಪ್ರತಿಭಾನ್ವಿತ ಕ್ರಿಕೆಟಿಗ ಕೆಎಲ್ ರಾಹುಲ್ ಬಗ್ಗೆಯೂ ಕರುಣ್ ಮಾತನಾಡಿದ್ದಾರೆ. ನಾವಿಬ್ಬರೂ ಅಂಡರ್-13 ತಂಡದಿಂದಲೂ ಜೊತೆಯಾಗಿದ್ದೇವೆ, ಇಬ್ಬರ ಮಧ್ಯೆಯೂ ಉತ್ತಮ ಬಾಂಧವ್ಯವಿದೆ. ಎಲ್ಲವನ್ನೂ ಅರ್ಥಮಾಡಿಕೊಳ್ಳುವಷ್ಟು ಸ್ನೇಹ ನಮ್ಮದು ಕೆಎಲ್ ರಾಹುಲ್ ಜೊತೆಗಿನ ಸ್ನೇಹದ ಬಗ್ಗೆಯೂ ಕರುಣ್ ಮಾತನಾಡಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications