ಟಿ20: ಕರುಣ್ ಶತಕ, ಜಾರ್ಖಂಡ್ ವಿರುದ್ಧ ಕರ್ನಾಟಕಕ್ಕೆ ಜಯ

ಬೆಂಗಳೂರು, ಜನವರಿ 25: ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕರುಣ್ ನಾಯರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಸೂಪರ್ ಲೀಗ್ನಲ್ಲಿ ಜಾರ್ಖಂಡ್ ವಿರುದ್ಧ ಕರ್ನಾಟಕ ಸುಲಭ ಜಯ ದಾಖಲಿಸಿದೆ.
ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕರುಣ್ ನಾಯರ್ 100ರನ್ (52ಎಸೆತ, 8 ಬೌಂಡರಿ, 7 ಸಿಕ್ಸರ್) ನೆರವಿನಿಂದ 4 ವಿಕೆಟ್ಗೆ 201 ಸ್ಕೋರ್ ಗಳಿಸಿತು. ಬೃಹತ್ ಸ್ಕೋರ್ ಬೆನ್ನಟ್ಟಿದ ಜಾರ್ಖಂಡ್ ಕೇವಲ 78ರನ್ನಿಗೆ ಸರ್ವ ಪತನ ಕಂಡಿತು.
ಈ ಮೂಲಕ ಕರ್ನಾಟಕ ತಂಡ ಸೂಪರ್ ಲೀಗ್ ನಲ್ಲಿ ಎರಡು ಸೋಲಿನ ಬಳಿಕ ಮೊದಲ ಗೆಲುವು ದಾಖಲಿಸಿತು.
ಕರುಣ್ ನಾಯರ್ ಅವರಿಗೆ ಪವನ್ ದೇಶಪಾಂಡೆ (56) ಉತ್ತಮ ನೆರವು ನೀಡಿದರು. 3ನೇ ವಿಕೆಟ್ 130ರನ್ಗಳ ನೆರವಿನಿಂದ 4 ವಿಕೆಟ್ಗೆ 201ರನ್ ಕಲೆಹಾಕಿತು. ವಿನಯ್ ಕುಮಾರ್ ಅನುಪಸ್ಥಿತಿಯಲ್ಲಿ ಕರುಣ್ ನಾಯರ್ ಅವರು ತಂಡವನ್ನು ಮುನ್ನಡೆಸಿದ್ದು ವಿಶೇಷ.
ಸಂಕ್ಷಿಪ್ತ ಸ್ಕೋರ್ :
ಕರ್ನಾಟಕ: 4/201 (ಕರುಣ್ 100, ಪವನ್ 56, ಮೊನು 16ಕ್ಕೆ 2)
ಜಾರ್ಖಂಡ್: 14.2 ಓವರ್ಗಳಲ್ಲಿ 78 ಆಲೌಟ್ (ವಿಕಾಸ್ 25, ಇಶಾನ್ 18, ಪ್ರಸಿದ್ಧ ಕೃಷ್ಣ 8ಕ್ಕೆ 2, ಮಿಥುನ್ 23ಕ್ಕೆ 2, ಅರವಿಂದ್ 6ಕ್ಕೆ 2, ಸುಚಿತ್ 13ಕ್ಕೆ 2).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications