For Quick Alerts
ALLOW NOTIFICATIONS  
For Daily Alerts
 

Karun Nair: ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಕರುಣ್‌ಗೆ ಇಲ್ಲ ಸ್ಥಾನ

ದೇಶೀಯ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಕರುಣ್‌ ನಾಯರ್‌ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಕಡೆಗಣನೆ ಮಾಡಿದೆ. ಇವರನ್ನು ಮುಂಬರುವ ಚಾಂಪಿಯನ್ಸ್ ಟ್ರೋಫಿ ತಂಡದಿಂದ ಕೈ ಬಿಡಲಾಗಿದೆ. ವಿಜಯ್ ಹಜಾರೆ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಇವರಿಗೆ, ಭಾರತ ಏಕದಿನ ತಂಡದಲ್ಲಿ ಸ್ಥಾನ ಲಭಿಸುವುದು ಪಕ್ಕಾ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕರುಣ್‌ ಅವರಿಗೆ ಈ ಬಾರಿಯೂ ನಿರಾಸೆ ಕಾದಿದೆ ಸುಮಾರು ಏಳು ವರ್ಷಗಳ ಬಳಿಕ ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್‌ ಮಾಡುವ ಕನಸಿಗೆ ಪೆಟ್ಟು ಬಿದ್ದಿದೆ.

ವಿದರ್ಭ ತಂಡದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಕರುಣ್‌ ನಾಯರ್‌ ಅವರನ್ನು ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡುವಂತೆ ಭಾರೀ ಬೇಡಿಕೆ ವ್ಯಕ್ತವಾಗಿತ್ತು. ಆದರೆ ಬಿಸಿಸಿಐ ಇವರ ಆಟಕ್ಕೆ ಮನ್ನಣೆ ನೀಡಿಲ್ಲ.ಚಾಂಪಿಯನ್ಸ್ ಟ್ರೋಫಿ ಹಾಗೂ ಇಂಗ್ಲೆಂಡ್ ವಿರುದ್ಧದ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಕರುಣ್‌ ವಿಫಲರಾಗಿದ್ದಾರೆ. ಈ ಮೂಲಕ 33 ವರ್ಷದ ಕರುಣ್ ನಾಯರ್‌ ಕಂ ಬ್ಯಾಕ್‌ ಕನಸು ಮತ್ತಷ್ಟು ಮುಂದೆ ಸಾಗಿದೆ. ಈ ಬಾರಿ ದೇಶೀಯ ವಿಜಜ್ ಹಾಜರೆ ಟ್ರೋಫಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದ ಕರುಣ್‌ ಅವರಿಗೆ ಸ್ಥಾನ ನೀಡುವುದು ಪಕ್ಕಾ ಎಂದು ಹಿರಿಯ ಆಟಗಾರರು ಸಹ ಧ್ವನಿ ಎತ್ತಿದ್ದರು.

Karun Nair Left Out of Champions Trophy Squad Despite Stellar Vijay Hazare Performances

ಕರುಣ್‌ ನಾಯರ್‌ ಏಕದಿನ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಅಬ್ಬರಿಸಿದ್ದಾರೆ. 752 ಸರಾಸರಿಯಲ್ಲಿ ರನ್‌ ಕಲೆ ಹಾಕಿದ ಆಟಗಾರನಿಗೆ ಅವಕಾಶ ಇಲ್ಲದೆ ಇದ್ದರೆ ಇನ್ನು ಯಾರಿಗೆ ಅವಕಾ ನೀಡಲಾಗುತ್ತದೆ ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ದೇಶೀಯ ಟೂರ್ನಿಯಲ್ಲಿ ಇವರು ಆಡಿದ 9 ಪಂದ್ಯಗಳಲ್ಲಿ (ಫೈನಲ್ ಪಂದ್ಯ ಹೊರತು ಪಡಿಸಿ) 752 ರನ್‌ ಸಿಡಿಸಿದ್ದಾರೆ. ಇದರಲ್ಲಿ 5 ಶತಕ ಹಾಗೂ 1 ಅರ್ಧಶತಕ ಸೇರಿದೆ. ಇನ್ನು ಕರುಣ್ ನಾಯರ್ ಈ ಟೂರ್ನಿಯಲ್ಲಿ ಒಮ್ಮೆ ಮಾತ್ರ ಔಟ್ ಆಗಿದ್ದಾರೆ.

ಏಕೆ ಸ್ಥಾನವಿಲ್ಲ?

ಕರುಣ್ ನಾಯರ್ ಆಟವನ್ನು ಕಂಡು ಮಾಜಿ ಕ್ರಿಕೆಟ್ ಆಟಗಾರರು ಸಹ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಹರ್ಭಜನ್‌ ಸಿಂಗ್ ಅವರು ಇವರಿಗೆ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದರು. ಅಲ್ಲದೆ ಹರ್ಭಜನ್‌ ಕರುಣ್‌, ಟ್ಯಾಟೋ ಹಾಕಿಸಿಕೊಂಡಿಲ್ಲ ಎಂದೋ, ಅಥವಾ ರಂಗ್‌ ಬಿರಂಗಿ ಬಟ್ಟೆ ಹಾಕಿಕೊಳ್ಳುವುದಿಲ್ಲ ಎಂದು ಅವರನ್ನು ತಂಡದಿಂದ ಅವರಿಗೆ ತಂಡದಲ್ಲಿ ಅವಕಾಶ ನೀಡುತ್ತಿಲ್ಲವೇ ಎಂದು ಭಜ್ಜಿ ಪ್ರಶ್ನೆ ಮಾಡಿದ್ದಾರೆ.

ಕರುಣ್ ಸಾಧನೆ

ಕರುಣ್‌ ನಾಯರ್ ಭಾರತ ತಂಡದ ಪರ ಆರು ಟೆಸ್ಟ್‌ ಪಂದ್ಯಗಳನ್ನು ಆಡಿದ್ದು 374 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ ಒಂದು ತ್ರಿಶತಕ ಸಹ ಸೇರಿದೆ. ಇನ್ನು ಟೀಮ್ ಇಂಡಿಯಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಆಟಗಾರ ಎಂಬ ಖ್ಯಾತಿ ಇವರದ್ದಾಗಿದೆ. ಇವರಿಗೂ ಮೊದಲು ವೀರೇಂದ್ರ ಸೆಹ್ವಾಗ್‌ ಈ ಸಾಧನೆ ಮಾಡಿದ್ದರು.

Story first published: Saturday, January 18, 2025, 15:18 [IST]
Other articles published on Jan 18, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+