Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Karun Nair: ಕರ್ನಾಟಕ ತಂಡಕ್ಕೆ ಮರಳಿದ ಸ್ಟಾರ್‌ ಪ್ಲೇಯರ್‌: ಹೆಚ್ಚಿದ ಬಲ

ಸದ್ಯ ಇಂಗ್ಲೆಂಡ್‌ನಲ್ಲಿ ಟೀಮ್ ಇಂಡಿಯಾ ಪ್ರವಾಸ ಬೆಳೆಸಿದೆ. ಈ ವೇಳೆ ಟೀಮ್ ಇಂಡಿಯಾ 1-2 ರಿಂದ ಹಿನ್ನಡೆ ಅನುಭವಿಸುತ್ತಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ತಂಡದ ಭಾಗವಾಗಿದ್ದ ಸೂಪರ್‌ ಸ್ಟಾರ್‌ ಆಟಗಾರ ಕರುಣ್‌ ನಾಯರ್‌ ಈಗ ಮತ್ತೆ ತವರಿನ ತಂಡಕ್ಕೆ ಮರಳಿದ್ದಾರೆ. ದೇಶೀಯ ಟೂರ್ನಿಗಳಲ್ಲಿ ಈ ಹಿಂದಿನ ಆವೃತ್ತಿಯಲ್ಲಿ ವಿದರ್ಭ ತಂಡದ ಪರ ಬ್ಯಾಟಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದ್ದರು. ಇವರ ಅಮೋಘ ಪ್ರದರ್ಶನದ ಬಲದಿಂದ ವಿದರ್ಭ ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಸಫಲವಾಗಿದೆ.

ಟೀಮ್ ಇಂಡಿಯಾಕ್ಕೆ ಇವರು 8 ವರ್ಷಗಳ ಬಳಿಕ ಕಂ ಬ್ಯಾಕ್‌ ಮಾಡಿದ್ದಾರೆ. ಕರುಣ್‌ ನಾಯರ್ ದೇಶೀಯ ಕ್ರಿಕೆಟ್ ನಲ್ಲಿ ರನ್‌ ಮಹಲ್ ಕಟ್ಟಿ ಅಬ್ಬರಿಸಿದ್ದಾರೆ. ಆದರೆ ಇವರು ಸದ್ಯ ಇಂಗ್ಲೆಂಡ್‌ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇವರು ಮುಂದಿನ ಟೆಸ್ಟ್‌ ಪಂದ್ಯ ಆಡುತ್ತಾರಾ ಇಲ್ಲವೋ ಎಂಬ ಬಗ್ಗೆ ಅನುಮಾನಗಳು ಎದ್ದಿವೆ. ಈ ಟೆಸ್ಟ್‌ ಸರಣಿಯ ಮಧ್ಯೆ ಕರ್ನಾಟಕ ತಂಡ ಖುಷಿ ಪಡುವ ವಿಚಾರವನ್ನು ಕರುಣ್ ನಾಯರ್ ನೀಡಿದ್ದಾರೆ.

Karun Nair Returns to Karnataka After Stint with Vidarbha Amidst England Tour Struggles

ದೇಶೀಯ ಟೂರ್ನಿಯಲ್ಲಿ ಕರ್ನಾಟಕ ತಂಡದ ಪರ ಆಡಲು ಅವಕಾಶ ಪಡೆಯದೇ ಇದ್ದಾಗ ಇವರು, ಪಕ್ಕದ ವಿದರ್ಭಕ್ಕೆ ಹಾರು ಹೋದರು. ಆದರೆ ಈಗ ಅವರು ಮತ್ತೆ ಕರ್ನಾಟಕ ತಂಡಕ್ಕೆ ಮರಳಲಿದ್ದಾರೆ. ಆದರೆ ಕಳಪೆ ಫಾರ್ಮ್‌ನಿಂದಾಗಿ ಅವರನ್ನು ತಂಡದಿಂದ ಕೈಬಿಡಲಾಯಿತು. ನಾಯರ್ ಈಗ ಮುಂದಿನ ದೇಶೀಯ ಋತುವಿನಲ್ಲಿ ತಮ್ಮ ದೇಶೀಯ ತಂಡ ಕರ್ನಾಟಕ ಪರ ಆಡುವುದನ್ನು ಕಾಣಬಹುದು.

ವಿದರ್ಭ ಕ್ರಿಕೆಟ್‌ ಸಂಸ್ಥೆಯಿಂದ ಕರುಣ್‌ ನಾಯರ್‌ಗೆ ಎನ್‌ಓಸಿ ಲಭಿಸಿದೆ ಎಂದು ಕ್ರಿಕ್‌ ಬಜ್‌ ವರದಿ ಮಾಡಿದೆ. ಕರುಣ್ ನಾಯರ್‌ ಕರ್ನಾಟಕಕ್ಕೆ ಮತ್ತೆ ಮರಳಿದ್ದಾರೆ. ನಾಯರ್ ಸುಮಾರು ಮೂರು ವರ್ಷಗಳ ನಂತರ ಕರ್ನಾಟಕ ಪರ ಆಡಲು ಸಿದ್ಧರಾಗುತ್ತಿದ್ದಾರೆ. ವಿದರ್ಭ ಪರ ಕಳೆದ ಆವೃತ್ತಿಯಲ್ಲಿ ಕರುಣ್‌ ರಣಜಿ ಟ್ರೋಫಿಯಲ್ಲಿ 863 ರನ್‌ ಹಾಗೂ ವಿಜಯ್‌ ಹಜಾರೆ 779 ರನ್‌ ಗಳಿಸಿ ಅಬ್ಬರಿಸಿದ್ದಾರೆ.

Karun Nair Returns to Karnataka After Stint with Vidarbha Amidst England Tour Struggles

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಾಧನೆ

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕರುಣ್ ನಾಯರ್‌ ಅಮೋಘ ಸಾಧನೆ ಮಾಡಿದ್ದಾರೆ. ಇಲ್ಲಿಯ ವರೆಗೆ ಇವರು 119 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇವರು 8601 ರನ್ ಗಳಿಸಿದ್ದು, ಈ ವೇಳೆ 48.86 ಸರಾಸರಿಯಲ್ಲಿ ರನ್‌ ಕಲೆ ಹಾಕಿದ್ದಾರೆ. ಈ ವೇಳೆ 24 ಶತಕ ಬಾರಿಸಿದ್ದಾರೆ. ಲೀಸ್ಟ್‌ ಎ ಪಂದ್ಯಗಳಲ್ಲಿ ಇವರು 107 ಪಂದ್ಯಗಳಲ್ಲಿ 41.15 ಸರಾಸರಿಯಲ್ಲಿ 3128 ರನ್ ಸಿಡಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಇವರು ಇಂಗ್ಲೆಂಡ್‌ನಲ್ಲಿ ಆಡಿದ 3 ಟೆಸ್ಟ್ ಪಂದ್ಯಗಳ 6 ಇನಿಂಗ್ಸ್‌ಗಳಲ್ಲಿ 131 ರನ್ ಗಳಿಸಿದ್ದಾರೆ.

Story first published: Sunday, July 20, 2025, 22:32 [IST]
Other articles published on Jul 20, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+