For Quick Alerts
ALLOW NOTIFICATIONS  
For Daily Alerts
 

ಜಂಟಿ ಜೀವನಕ್ಕೆ ಪಾದಾರ್ಪಣೆ ಮಾಡಲು ಕರುಣ್ ನಾಯರ್-ಸನಾಯ ಸಜ್ಜು

Karun Nair-Sanaya Takariwala wedding on 16 January

ಬೆಂಗಳೂರು, ಅಕ್ಟೋಬರ್ 13: ಕರ್ನಾಟಕ ತಂಡದ ನಾಯಕ ಮಾನೀಷ್ ಪಾಂಡೆ ಡಿಸೆಂಬರ್ 2ರಂದು ನಟಿ ಆಶ್ರಿತಾ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಮನೀಷ್ ತಂಡದ ಸಹ ಆಟಗಾರ ಕರುಣ್ ನಾಯಕರ್ ಕೂಡ ಒಂಟಿಯಿಂದ ಜಂಟಿ ಜೀವನಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಕರ್ನಾಟಕ ಬ್ಯಾಟ್ಸ್‌ಮನ್ ಕರುಣ್ ನಾಯರ್ ಮದುವೆ 2020ರ ಜನವರಿ 16ರಂದು ಸನಾಯ ಟಂಕರಿವಾಲಾ ಜೊತೆ ನಡೆಯಲಿದೆ. ಇವರಿಬ್ಬರ ನಿಶ್ಚಿತಾರ್ಥ ಕಳೆದ ಜೂನ್‌ನಲ್ಲಿ ಕೇರಳದಲ್ಲಿ ನಡೆದಿತ್ತು. ಕರಣ್ ನಾಯರ್ ಸದ್ಯ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದಾರೆ.

Karun Nair-Sanaya Takariwala wedding on 16 January

2016ರಲ್ಲಿ ಭಾರತ ಟೆಸ್ಟ್‌ ತಂಡವನ್ನು ಪ್ರತಿನಿಧಿಸಿದ್ದ ಕರುಣ್‌, ಚೆನ್ನೈನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ತ್ರಿಶತಕ ದಾಖಲಿಸಿ ಜನಪ್ರಿಯತೆ ಗಿಟ್ಟಿಸಿದ್ದರು. ಜನವರಿ 16ರಂದು ರಾಜಸ್ಥಾನದ ಉದಯಪುರದಲ್ಲಿ ಕರುಣ್-ಸನಾಯಾ ಮದುವೆ ನಡೆಸಲು ಯುವ ಜೋಡಿಯ ಕುಟುಂಬಗಳು ನಿರ್ಧರಿಸಿವೆ.

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿರುವ ಕರುಣ್, 63 ಇನ್ನಿಂಗ್ಸ್‌ಗಳಲ್ಲಿ 1464 ರನ್ ಬಾರಿಸಿದ್ದಾರೆ. ಇದರಲ್ಲಿ 10 ಅರ್ಧ ಶತಕಗಳು ಸೇರಿವೆ. ಭಾರತ ಪರ 6 ಟೆಸ್ಟ್‌, 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

Story first published: Sunday, October 13, 2019, 11:41 [IST]
Other articles published on Oct 13, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+