Maharaja Trophy 2024: ಗಾಯಗೊಂಡ ಸಿಂಹದಂತೆ ಘರ್ಜಿಸಿದ ಕರುಣ್ ನಾಯರ್ ; ಭಾರತ ತಂಡ ಸೇರ್ತಾರಾ?
ಆಗಸ್ಟ್ 20 ಮಂಗಳವಾರ, ಪ್ರಸ್ತುತ ಟೀಮ್ ಇಂಡಿಯಾ ಆನೇಕ ಸ್ಟಾರ್ ಆಟಗಾರರಿದ್ದಾರೆ. ಕೆಲವರು ಏಕದಿನದಲ್ಲಿ ಫೇಮಸ್ ಆಗಿದ್ದರೆ, ಇನ್ನು ಕೆಲವರು ಟಿ20 ಕ್ರಿಕೆಟ್‌ನಲ್ಲಿ ತಮ್ಮ ಖದರ್ ತೋರುತ್ತಿದ್ದಾರೆ ಕಿಂಗ್. ಆದರೆ ಚೊಚ್ಚಲ ಟೆಸ್ಟ್ ಸರಣಿಯಲ್ಲೇ ಭಾರತದ ಪರ ತ್ರಿಶತಕ ಬಾರಿಸಿ ಸಂಚಲನ ಮೂಡಿಸಿದ್ದ ವಿಶಿಷ್ಟ ವಜ್ರವೊಂದು 8 ವರ್ಷಗಳ ಹಿಂದೆ ಸಿಕ್ಕಿತ್ತು.
ಈ ಆಟಗಾರ ಕೆಲವೇ ತಿಂಗಳುಗಳಲ್ಲಿ ಟೀಮ್ ಇಂಡಿಯಾದಿಂದ ಕಣ್ಮರೆಯಾದರು. ಅಂದಿನಿಂದಲ್ಲೂ ಪ್ರತಿ ಬಾರಿಯೂ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆ ಆಟಗಾರ ಬೇರೆ ಯಾರು ಕನ್ನಡಿಗ ಕರುಣ್ ನಾಯರ್. 7 ವರ್ಷಗಳ ಹಿಂದೆ ದಾಖಲೆ ಬರೆದಿದ್ದ ಈ ಆಟಗಾರ ಇದೀಗ ಹೊಸ ಅವತಾರದಲ್ಲಿ ಬಿಸಿಸಿಐ ಬಾಗಿಲು ತಟ್ಟಿದ್ದಾರೆ.

ಮಹಾರಾಜ ಟ್ರೋಫಿಯಲ್ಲೂ ದಾಖಲೆ
2017 ರಿಂದ ಕರುಣ್ ನಾಯರ್ ಟೀಮ್ ಇಂಡಿಯಾದಿಂದ ದೂರ ಉಳಿದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಈ ಆಟಗಾರನ ಬಗ್ಗೆ ಬಿಸಿಸಿಐ ಗಮನವನ್ನೇ ಹರಿಸಿಲ್ಲ. ಎಷ್ಟೋ ಬಾರಿ ತಂಡಕ್ಕೆ ಕಮ್ ಬ್ಯಾಕ್ ಮಾಡುವ ಆಟವಾಡಿದರೂ ಬಿಸಿಸಿಐ ಆಯ್ಕೆ ಸಮಿತಿ ಮಾತ್ರ ಅವರಿಗೆ ಮಣೆ ಹಾಕಿಲ್ಲ.
ಇದೀಗ 2024ರ ಮಹಾರಾಜ ಟಿ20 ಟ್ರೋಫಿಯಲ್ಲಿ ಕರುಣ್ ನಾಯರ್ ಅವರ ಹೊಸ ಅವತಾರವನ್ನು ನೋಡಲಾಗುತ್ತಿದೆ. ಗಾಯಗೊಂಡ ಸಿಂಹದಂತೆ ಮೈದಾನದಲ್ಲಿ ಘರ್ಜಿಸಿ ಶತಕ ಹೊಡೆದು ಸಂಭ್ರಮಿಸಿದ್ದಾರೆ. ಅವರು ಕೇವಲ 48 ಎಸೆತಗಳಲ್ಲಿ 13 ಬೌಂಡರಿ ಹಾಗೂ 9 ಸಿಕ್ಸರ್ ನೆರವಿನಿಂದ 124 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್ ನೋಡಿದ ಅಭಿಮಾನಿಗಳು ಮತ್ತೆ ಕರುಣ್ ಭಾರತ ತಂಡ ಸೇರುವುದು ಪಕ್ಕಾ ಎನ್ನುತ್ತಿದ್ದಾರೆ.
ಈ ಶತಕಕ್ಕೂ ಮುನ್ನ ಕರುಣ್ ಕಳೆದ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ 66 ರನ್ ಗಳಿಸಿದ್ದರು. ಐಪಿಎಲ್ 2025ರ ಮೆಗಾ ಹರಾಜಿನ ಮೊದಲು ಕರುಣ್ ಅಬ್ಬರದ ಬ್ಯಾಟಿಂಗ್ ಅವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಐಪಿಎಲ್ ಫ್ರಾಂಚೈಸಿಗಳು ಕರುಣ್ ನಾಯರ್ ಅವನ್ನು ಖರೀದಿ ಮಾಡಲು ಮಂದಾಗುವ ಸಾಧ್ಯತೆಗಳಿವೆ. ಅವರು ಭಾರತ ಪರ ಕೇವಲ 6 ಟೆಸ್ಟ್ ಮತ್ತು 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ತ್ರಿಶತಕ
2016ರಲ್ಲಿ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ಗೆ ಕರುಣ್ ಪಾರ್ದಪಣೆ ಮಾಡಿದರು. ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವಾಡಿದ ಕರುಣ್ ಆಂಗ್ಲ ಬೌಲರ್‌ಗಳ ಬೆವರಿಳಿಸಿದರು. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಅಜೇಯ 303 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಟೀಮ್ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದರು.
ಆದರೆ ಅಚ್ಚರಿಯ ಸಂಗತಿ ಎಂದರೆ ಕರುಣ್ ತ್ರಿಶತಕ ಬಾರಿಸಿದ ನಂತರ ಕೇವಲ 3 ಟೆಸ್ಟ್ ಆಡುವ ಅವಕಾಶ ಪಡೆದು ಟೀಮ್ ಇಂಡಿಯಾದಿಂದ ದೂರ ಉಳಿದರು. ಈಗ ಸಿಡಿದೆದ್ದಿರುವ ಕರುಣ್ ನಾಯರ್ ಬ್ಯಾಟ್ ಸದ್ದು ಬಿಸಿಸಿಐ ಕಿವಿಗೆ ಬೀಳುತ್ತೋ? ಇಲ್ಲವೋ? ಎಂಬುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications