Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Karun Nair: ಐಪಿಎಲ್‌ನಲ್ಲೂ ಮಿಂಚಿದ ಕನ್ನಡಿಗನಿಗೆ ಟೆಸ್ಟ್‌ ತಂಡದಲ್ಲಿ ಸಿಗುತ್ತಾ ಸ್ಥಾನ?

ಅವಕಾಶಕ್ಕಾಗಿ ಕಾದು ಕಾದು ಸುಸ್ತಾದ ಪ್ರತಿಭೆಗೆ ಕೊನೆಗೂ ಅವಕಾಶ ಲಭಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾನುವಾರ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಕರುಣ್ ನಾಯರ್ ಬ್ಯಾಟಿಂಗ್ ಮಾಡುವ ಅವಕಾಶ ಪಡೆದರು. ಇಂಪ್ಯಾಕ್ಟ್‌ ಪ್ಲೇಯರ್ ಆಗಿ ಬಂದ ಕರುಣ್‌ ನಿಜಕ್ಕೂ ಇಂಪ್ಯಾಕ್ಟಿಂಗ್ ಬ್ಯಾಟಿಂಗ್ ಮಾಡಿ ಗಮನ ಸೆಳೆದರು. ಇವರ ಅಮೋಘ ಬ್ಯಾಟಿಂಗ್ ಪ್ರದರ್ಶನ ಕಂಡು ಅಭಿಮಾನಿಗಳು ಫುಲ್ ಖುಷ್ ಆದರು. ಕರುಣ್ ನಾಯರ್‌ ಅವರ ಆಟ ಕಂಡು ಅಭಿಮಾನಿಗಳಿಗು ಕೇಳುತ್ತಿರುವ ಪ್ರಶ್ನೆ ಇನ್ನು ಎಷ್ಟು ಪರೀಕ್ಷೆ?

ಕರುಣ್‌ ನಾಯರ್‌ ಪ್ರಸಕ್ತ ವರ್ಷ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರ ಫಾರ್ಮ್‌ ದೇಶೀಯ ಟೂರ್ನಿಯಲ್ಲಿ ಅವರ ತಂಡಕ್ಕೆ ಭಾರೀ ಲಾಭ ತಂದಿದೆ. ವಿಜಯ್‌ ಹಜಾರೆ, ರಣಜಿ ಟ್ರೋಫಿಗಳಲ್ಲಿ ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದರು. ಇವರ ಬ್ಯಾಟಿಂಗ್ ಕಂಡು ಅಭಿಮಾನಿಗಳು ಇವರಿಗೆ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿ ಅಥವಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವಕಾಶ ಸಿಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕರುಣ್‌ ಆಸೆ ನುಚ್ಚು ನೂರಾಗಿತ್ತು.

Karun Nair Shines Bright Against Mumbai Indians Fans Demand Test Comeback

ಕರುಣ್ ನಾಯರ್ ಅವರ ಪ್ರದರ್ಶನಕ್ಕೆ ತಕ್ಕ ಪ್ರತಿಫಲ ಯಾವಾಗ ಎಂಬ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಭಾನುವಾರ ಕರುಣ್‌ ವೇದಿಕೆ ಸಿದ್ಧ ಪಡಿಸಿಕೊಂಡರು. ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಕರುಣ್ ನಾಯರ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸತತ ನಾಲ್ಕು ಪಂದ್ಯಗಳನ್ನು ಬೆಂಚ್‌ ಮೇಲೆ ಕಾದು ಸುಸ್ತಾಗಿದ್ದ ಕರುಣ್‌ಗೆ ಕೊನೆಗೂ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವ ಅವಕಾಶ ಲಭಿಸಿತು. ಈ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಕರುಣ್ ಅಬ್ಬರಿಸಿದರು.

ಇಂಪ್ಯಾಕ್ಟ್‌ ಮಾಡಿದ ಕರುಣ್‌

ಮುಂಬೈ ವಿರುದ್ಧದ ಪಂದ್ಯದಲ್ಲಿ ಮುಕೇಶ್‌ ಕುಮಾರ್‌ ಬದಲಿಗೆ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ಕರುಣ್‌ ನಾಯರ್‌, ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಇವರ ಬ್ಯಾಟಿಂಗ್ ಕಂಡು ಇವರನ್ನು ಕೊಳ್ಳದ ಫ್ರಾಂಚೈಸಿಗಳು ಕೈ ಕೈ ಹಿಚುಕಿಕೊಂಡರು. ವಿಶ್ವದ ಸ್ಟಾರ್ ಬೌಲರ್ ಎಂದೇ ಖ್ಯಾತಿ ಪಡೆದಿರುವ ಜಸ್ಪ್ರಿತ್ ಬುಮ್ರಾ ಅವರಿಗೂ ಕರುಣ್‌ ದಂಡಿಸಿದರು. ಇವರು ಬುಮ್ರಾ ಅವರ 9 ಎಸೆತ ಎದುರಿಸಿ 2 ಸಿಕ್ಸರ್‌, 3 ಬೌಂಡರಿ ಬಾರಿಸಿ 26 ರನ್‌ ಸಿಡಿಸಿದರು. ಮುಂಬೈ ತಂಡದ ಅನುಭವಿ ಬೌಲರ್‌ ಟ್ರೆಂಟ್ ಬೌಲ್ಟ್‌ ಅವರ 5 ಎಸೆತುಗಳಲ್ಲಿ ಕರುಣ್‌ ಮೂರು ಬೌಂಡರಿ ಬಾರಿಸಿದರು.

ಕರುಣ್ ನಾಯರ್‌ ಅವರ ಅಮೋಘ ಆಟಕ್ಕೆ ಬ್ರೇಕ್ ಹಾಕುವಲ್ಲಿ ಮುಂಬೈ ತಂಡದ ಸ್ಟಾರ್ ಬೌಲರ್‌ಗಳು ವಿಫಲರಾದರು. ಇವರ ಆಟ ಡೆಲ್ಲಿ ಕ್ಯಾಪಿಟಲ್ಸ್‌ ಜಯಕ್ಕೆ ನೆರವಾಗಲಿಲ್ಲ, ಎಂಬುದೇ ಬೇಸರದ ಸಂಗತಿ. ಕರುಣ್‌ ಕ್ಲಾಸಿಕ್ ಆಟ ಕಂಡು ಅಭಿಮಾನಿಗಳು ಇವರಿಗೆ ಇಂಗ್ಲೆಂಡ್‌ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅವಕಾಶ ನೀಡಬೇಕು ಎಂದು ಹೇಳುತ್ತಿದ್ದಾರೆ. ಆದರೆ ಇವರಿಗೆ ಅವಕಾಶ ಸಿಗುತ್ತದಾ ಎಂಬುದನ್ನು ಕಾದು ನೋಡಬೇಕಿದೆ.

Story first published: Monday, April 14, 2025, 17:32 [IST]
Other articles published on Apr 14, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+