IND vs ENG Test: 3146 ದಿನಗಳ ಬಳಿಕ ಟೆಸ್ಟ್‌ನಲ್ಲಿ ಅರ್ಧಶತಕ ಬಾರಿಸಿದ ಕರುಣ್: ಮೊದಲ ದಿನ ಭಾರತ 6ಕ್ಕೆ 204
ಭರವಸೆಯ ಬ್ಯಾಟರ್ ಕರುಣ್ ನಾಯರ್ ಬಾರಿಸಿದ ಅರ್ಧಶತಕ ಹಾಗೂ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರ ಸ್ಥಿರ ಪ್ರದರ್ಶನದ ಫಲವಾಗಿ ಟೀಮ್ ಇಂಡಿಯಾ ಐದನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ದಿನದಾಟದ ಮುಕ್ತಾಯಕ್ಕೆ 6 ವಿಕೆಟ್ ಕಳೆದುಕೊಂಡು 204 ರನ್ ಸೇರಿಸಿತು. ಕರುಣ್ ನಾಯರ್ (ಅಜೇಯ 52), ವಾಷಿಂಗ್ಟನ್ ಸುಂದರ್ (ಅಜೇಯ 19) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಐದನೇ ಟೆಸ್ಟ್ ಪಂದ್ಯದ ಮೊದಲ ದಿನ ಟೀಮ್ ಇಂಡಿಯಾ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿತು. ಈ ವೇಳೆ ಟೀಮ್ ಇಂಡಿಯಾದ ಆರಂಭಿಕ ಆಟಗಾರರು ಎಚ್ಚರಿಕೆಯ ಆಟಕ್ಕೆ ಮಣೆ ಹಾಕಿದರು. ಪಿಚ್ ವೇಗದ ಬೌಲರ್‌ಗಳಿಗೆ ನೆರವು ನೀಡುತ್ತದೆ ಎಂದೇ ಇಂಗ್ಲೆಂಡ್ ನಾಯಕ ಓಲಿ ಪೋಪ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಇವರ ನಿರ್ಧಾರವನ್ನು ಇಂಗ್ಲೆಂಡ್ ವೇಗದ ಬೌಲರ್‌ಗಳು ಆರಂಭದಲ್ಲಿ ಸರಿ ಎಂದು ಸಾಬೀತು ಪಡಿಸಿದರು.

ಟೀಮ್ ಇಂಡಿಯಾದ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಐದನೇ ಟೆಸ್ಟ್ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇವರು ಗಸ್ ಅಟ್ಕಿನ್ಸನ್ ಅವರ ಎಸೆತವನ್ನು ತಪ್ಪಾಗಿ ಗ್ರಹಿಸಿದರು. ಇನಿಂಗ್ಸ್ ನಾಲ್ಕನೇ ಓವರ್‌ನ ಮೊದಲ ಎಸೆತ ಬಿದ್ದು ಒಳ ಬಂದಿತು. ಜೈಸ್ವಾಲ್ ಆಡಲು ಮುಂದಾರು. ಇಂಗ್ಲೆಂಡ್ ಅಪೀಲ್ ಮಾಡಿತು. ಅಂಪೈರ್ ನಾಟೌಟ್ ಎಂದು ನೀಡಿದಾಗ ಮೇಲ್ಮನವಿ ಸಲ್ಲಿಸಿತು. ಈ ವೇಳೆ ಟಿವಿ ಅಂಪೈರ್ ಪರಿಶೀಲನೆ ನಡೆಸಿ ಔಟ್ ಎಂದು ತೀರ್ಪಿನೀಡಿದರು.
ಸರಣಿಯುದ್ದಕ್ಕೂ ಅಮೋಘವಾಗಿ ಬ್ಯಾಟಿಂಗ್ ನಡೆಸಿದ್ದ ಕೆಎಲ್ ರಾಹುಲ್, ಕೊನೆಯ ಟೆಸ್ಟ್ ಪಂದ್ಯದಲ್ಲೂ ತಂಡಕ್ಕೆ ಆಧಾರವಾಗುವ ಸೂಚನೆ ನೀಡಿದರು. ಇವರು 40 ಎಸೆತಗಳನ್ನು ಎದುರಿಸಿ 1 ಬೌಂಡರಿ ಸಹಾಯದಿಂದ 14 ರನ್ ಬಾರಿಸಿದ್ದಾಗ, ಕ್ರಿಸ್ ವೋಕ್ಸ್ ಎಸೆತದಲ್ಲಿ ಔಟ್ ಆದರು. ಕ್ರಿಸ್ ವೋಕ್ಸ್ ಎಸೆದ ಶಾರ್ಟ್ ಆಫ್ ಲೆಂಥ್ ಡಿಲಿವರಿಯನ್ನು ರಾಹುಲ್ ತಪ್ಪಾಗಿ ಗುರುತಿಸಿ, ಕಟ್ ಮಾಡಲು ಹೋಗಿ ಬೋಲ್ಡ್ ಆದರು. ಟೀಮ್ ಇಂಡಿಯಾ ಭೋಜನ ವಿರಾಮಕ್ಕೂ ಮುನ್ನ 2 ವಿಕೆಟ್ ಕಳೆದುಕೊಂಡು 72 ರನ್ ಕಲೆ ಹಾಕಿತ್ತು. ಮಳೆ ಕಾಟ ನೀಡಿದ್ದರಿಂದ ಪಂದ್ಯ ತಡವಾಗಿ ಆರಂಭವಾಯಿತು. ಪಂದ್ಯ ಆರಂಭವಾದ ಬಳಿಕ ಶುಭಮನ್ ಗಿಲ್ ತಾಳ್ಮೆ ಕಳೆದುಕೊಂಡರು. ಅಲ್ಲದೆ 21 ರನ್ ಬಾರಿಸಿದ್ದಾಗ ಇಲ್ಲದ ರನ್ ಬಾರಿಸಲು ಹೋಗಿ ಔಟ್ ಆದರು.
7 ವಿಕೆಟ್‌ಗೆ ಅರ್ಧಶತಕದ ಜೊತೆಯಾಟ
ಶುಭಮನ್ ಗಿಲ್ ಔಟ್ ಆಗುತ್ತಿದ್ದಂತೆ ಸಾಯಿ ಸುದರ್ಶನ್ ಅವರು ಸಹ ತಾಳ್ಮೆ ಕಳೆದುಕೊಂಡರು. ಇವರು 108 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 38 ರನ್ ಬಾರಿಸಿ ಜೋಶ್ ಟಂಗ್ ಎಸೆತದಲ್ಲಿ ಜೇಮಿ ಸ್ಮಿತ್‌ಗೆ ಕ್ಯಾಚ್ ನೀಡಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ ಭಾರತ ಡ್ರಾ ಮಾಡಿಕೊಳ್ಳುವಲ್ಲಿ ಮಹತ್ವದ ಪಾತ್ರವಹಿಸಿದ್ದ ಆಲ್‌ರೌಂಡರ್ ರವೀಂದ್ರ ಜಡೇಜಾ 9 ರನ್‌ಗಳಿಗೆ ಆಟ ಮುಗಿಸಿದರು. ವಿಕೆಟ್ ಕೀಪರ್ ರೂಪದಲ್ಲಿ ಆಡುವ ಅವಕಾಶವನ್ನು ಪಡೆದ ಧ್ರುವ್ ಜುರೇಲ್ 40 ಎಸೆತಗಳಲ್ಲಿ 19 ರನ್ ಬಾರಿಸಿ ಔಟ್ ಆದರು.

ಏಳನೇ ವಿಕೆಟ್‌ಗೆ ಕರುಣ್ ನಾಯರ್ ಹಾಗೂ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಜೋಡಿ 88 ಎಸೆತಗಳಲ್ಲಿ ಅಜೇಯ 51 ರನ್ ಸೇರಿಸಿದೆ.
3146 ದಿನಗಳ ಬಳಿಕ ಸಾಧನೆ
ಕರ್ನಾಟಕದ ಸ್ಟಾರ್ ಆಟಗಾರ ಕರುಣ್ ನಾಯರ್ ಐದನೇ ಟೆಸ್ಟ್ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಸಫಲರಾಗಿದ್ದಾರೆ. ಇವರು ಈ ಸರಣಿಯಲ್ಲಿ ಈ ಮೊದಲು ಸಿಕ್ಕ ಮೂರು ಅವಕಾಶಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಆದರೆ ಓವಲ್ ಟೆಸ್ಟ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಲ್ಲದೆ ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾದರು. ಕರುಣ್ 98 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ ಅಜೇಯ 52 ರನ್ ಬಾರಿಸಿದ್ದಾರೆ.
ಕರುಣ್ ಇದಕ್ಕೂ ಮೊದಲು ಡಿಸೆಂಬರ್ 19 ರಂದು ಚೆನ್ನೈನಲ್ಲಿ ಆರ್ಭಟ ನಡೆಸಿದ್ದರು. ಈ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ತ್ರಿಶತಕ ಬಾರಿಸಿ ಅಬ್ಬರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications