Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Karun Nair: ಬಿಸಿಸಿಐ ಆಯ್ಕೆ ಸಮಿತಿ "ಕರುಣೆ" ತೋರುತ್ತಾ?

ಫಾರ್ಮ್‌ ಇಲ್ಲದೇ ಇದ್ದರೆ ಆ ಆಟಗಾರ ಎಷ್ಟು ವೇದನೆಗೆ ಒಳಗಾಗುತ್ತಾನೆ ಎಂಬುದನ್ನು ಹಲವು ಆಟಗಾರರನ್ನು ನೋಡಿ ಕಲಿಯಬಹುದು. ಸದ್ಯ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸಹ ಕಳಪೆ ಫಾರ್ಮ್‌ ಎಂಬ ಶನಿಯನ್ನು ತಲೆಯ ಮೇಲೆ ಕುಡಿಸಿಕೊಂಡು ಬಿಟ್ಟಿದ್ದಾರೆ. ಇದೇ ರೀತಿ ಕಳಪೆ ಫಾರ್ಮ್‌ನಿಂದಾಗಿ ಟೀಮ್ ಇಂಡಿಯಾದಿಂದ ಹೊರ ನಡೆದಿರುವ ಭರವಸೆಯ ಆಟಗಾರನ ಕಥೆ ಇದು.

ಒಂದು ವೇಳೆ ಇವರ ಪ್ರದರ್ಶನ ಸ್ಥಿರವಾಗಿದ್ದರೆ, ಇಲ್ಲಿಯವರೆಗೆ ಸುಮಾರು 60 ಟೆಸ್ಟ್‌ ಪಂದ್ಯಗಳನ್ನಾದ್ರೂ ಆಡಬಹುದಿತ್ತು. ಆದರೆ ಕಳಪೆ ಫಾರ್ಮ್‌ ಇವರ ನಿದ್ದೆ ಗೆಡಿಸಿತು. ಟೆಸ್ಟ್ ಕ್ರಿಕೆಟ್‌ನಲ್ಲಿ ಈಗ ಆಡುತ್ತಿರುವ ಅದೆಷ್ಟೋ ಸ್ಟಾರ್ ಆಟಗಾರರು ಲೆಕ್ಕವಿಲ್ಲದಷ್ಟು ಪಂದ್ಯಗಳನ್ನು ಆಡಿದರೂ, ಮಾಡದ ಸಾಧನೆಯನ್ನು ಈ ಕರ್ನಾಟಕದ ಸ್ಟಾರ್ ಪ್ಲೇಯರ್ ಜಸ್ಟ್‌ 6 ಪಂದ್ಯಗಳಲ್ಲಿ ಮಾಡಿ ಮುಗಿಸಿದ್ದಾರೆ. ಆದರೆ 2017ರ ನಂತರ ಇವರಿಗೆ ಟೀಮ್ ಇಂಡಿಯಾ ಬಾಗಿಲ ಮುಚ್ಚಿದೆ. ಈಗ ಮತ್ತೆ ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡಲು ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ.

Karun Nair s Remarkable Resurgence Four Consecutive Centuries Ignite Team India Comeback Hopes

ಒಂದು ಕಾಲದಲ್ಲಿ ಕರ್ನಾಟಕ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಆಧಾರ ಸ್ಥಂಬವಾಗಿದ್ದ ಕರುಣ್‌ ನಾಯರ್, ನಂತರ ಫಾರ್ಮ್‌ ಇಲ್ಲದೆ ಪರದಾಟ ನಡೆಸಿದರು. ಈ ವೇಳೆ ಯಾವ ತಂಡಕ್ಕೆ ಇವರು ಅನಿವಾರ್ಯ ಎಂಬಂತೆ ಕಾಣುತ್ತಿದ್ದರೋ, ಯಾವ ತಂಡವನ್ನು ದೇಶೀಯ ಟೂರ್ನಿಗಳಲ್ಲಿ ಮುನ್ನಡೆಸಿದ್ದರೋ, ಅವರನ್ನೆ ತಂಡ ಕೈ ಬಿಡಬೇಕಾಯಿತು. ಆಗ ಬೇರೆ ವಿಧಿ ಇಲ್ಲದೇ ಕರುಣ್‌ ವಿದರ್ಭ ತಂಡವನ್ನು ಸೇರಿಕೊಂಡರು. ಸೇರಿಕೊಂಡಾಗಲೂ ಆ ಉತ್ಸಹ ಏನು ಇರಲಿಲ್ಲ. ಆದರೆ ಕ್ರಮೇಣ ಆಟದ ಪ್ರಖರತೆ ಹೊರ ಹೊಮ್ಮುತಾ ಸಾಗಿತು.

ಸದ್ಯ ಕರುಣ್‌ ನಾಯರ್‍‌ಗೆ 33 ವರ್ಷ ನಿವೃತ್ತಿ ವಯಸ್ಸಂತೂ ಖಂಡಿತವಾಗಿಯೂ ಅಲ್ಲ. ಇದೇ ವಯಸ್ಸಿನಲ್ಲಿ ಟೀಮ್ ಇಂಡಿಯಾಕ್ಕೆ ಅದೆಷ್ಟೋ ಆಟಗಾರರು ತಮ್ಮ ಚೊಚ್ಚಲ ಪಂದ್ಯವನ್ನು ಆಡಿದ್ದಾರೆ. ಆದರೆ ಕರುಣ್ ಈಗಾಗಲೇ ಟೀಮ್ ಇಂಡಿಯಾ ಜೆರ್ಸಿ ತೊಟ್ಟಾಗಿದೆ. ಈಗೇನಿದ್ದರೂ ಕಂ ಬ್ಯಾಕ್ ಕನಸು ಕಾಣುತ್ತಿದ್ದಾರೆ. ಸದ್ಯ ಸಾಮಾಜಿಕ ತಾಣದಲ್ಲಿ ಕರುಣ್ ಎರಡು ವರ್ಷದ ಹಿಂದೆ ಹಾಕಿದ್ದ ಪೊಸ್ಟ್‌ ಒಂದು ಸಖತ್ ವೈರಲ್ ಆಗಿದೆ.

Karun Nair s Remarkable Resurgence Four Consecutive Centuries Ignite Team India Comeback Hopes

ಅವಕಾಶದ ಕನಸು

"ಡಿಯರ್ ಕ್ರಿಕೆಟ್‌; ನನಗೆ ಇನ್ನೊಂದು ಅವಕಾಶ ನೀಡು" ಎಂದು ಕರುಣ್ ಎರಡು ವರ್ಷದ ಹಿಂದೆ ಬರೆದುಕೊಂಡಿದ್ದರು. ಈಗ ಈ ಟ್ವೀಟ್ ಸಖತ್ ವೈರಲ್ ಆಗುತ್ತಿದೆ. ದೇಶೀಯ ವಿಜಯ್ ಹಜಾರೆ ಟೂರ್ನಿಯಲ್ಲಿ ರನ್ ಮಹಲ್ ಕಟ್ಟುತ್ತಾ ಸಾಗಿದರು. ಪರಿಣಾಮ ಇವರು ಚಾಂಪಿಯನ್ಸ್ ಟ್ರೋಫಿಗೆ ತಮ್ಮ ಹಕ್ಕನ್ನು ಮಂಡಿಸುತ್ತಲೇ ಇದ್ದಾರೆ. ಪ್ರಸಕ್ತ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರುಣ್‌ ಮುಟ್ಟಿದ್ದೆಲ್ಲವೂ ಚಿನ್ನ. ಕರುಣ್‌ ಈ ವರ್ಷ ಆಡಿದ 6 ಇನಿಂಗ್ಸ್‌ಗಳಲ್ಲಿ 664 ರನ್‌ ಸಿಡಿಸಿದ್ದಾರೆ. ಇದರಲ್ಲಿ 5 ಶತಕ ಸೇರಿವೆ.

ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಸತತ ನಾಲ್ಕು ಶತಕಗಳನ್ನು ಬಾರಿಸುವ ಮೂಲಕ ನಾಯರ್ ಶ್ರೀಲಂಕಾದ ಕುಮಾರ ಸಂಗಕ್ಕಾರ, ಭಾರತದ ದೇವದತ್ ಪಡಿಕ್ಕಲ್ ಮತ್ತು ದಕ್ಷಿಣ ಆಫ್ರಿಕಾದ ಅಲ್ವಿರೋ ಪೀಟರ್ಸನ್ ದಾಖಲೆಯನ್ನು ಸರಿಗಟ್ಟಿದ್ದಾರೆ.

Story first published: Monday, January 13, 2025, 19:30 [IST]
Other articles published on Jan 13, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+