For Quick Alerts
ALLOW NOTIFICATIONS  
For Daily Alerts
 

Karun Nair: ಕನ್ನಡಿಗನಿಗೆ ಸಿಗುತ್ತಾ ಮತ್ತೊಂದು ಚಾನ್ಸ್‌: ನಿರಾಸೆ ಅನುಭವಿಸಿದ ಕರುಣ್‌

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್‌ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸಂಯೋಜನೆ ಏನು ಇರಲಿದೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಈ ವೇಳೆ ಟೀಮ್ ಇಂಡಿಯಾದ ಪರ ಎರಡೂ ಟೆಸ್ಟ್‌ ಪಂದ್ಯಗಳಲ್ಲಿ ಅಡುವ ಅವಕಾಶವನ್ನು ಪಡೆದು, ತಮ್ಮ ಘನತೆಗೆ ತಕ್ಕ ಆಟವನ್ನು ಆಡುವಲ್ಲಿ ವಿಫಲರಾಗಿರುವ ಆ ಒಬ್ಬ ಪ್ಲೇಯರ್‌ ಸ್ಥಾನದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ.

ಲೀಡ್ಸ್ ಹಾಗೂ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕದ ಕರುಣ್ ನಾಯರ್‌, ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸುವಲ್ಲಿ ವಿಫಲರಾದರು. ಇವರು ಮೊದಲ ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ, ಎರಡನೇ ಟೆಸ್ಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಸುಮಾರು 8 ವರ್ಷಗಳ ಬಳಿಕ ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡಿದ್ದ ಕರುಣ್‌ ನಾಯರ್, ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಳ್ಳಬಲ್ಲರು ಎಂದು ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು.

Karun Nair s Spot in Jeopardy for Lord s Test

ದೇಶೀಯ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಕರುಣ್‌ ನಾಯರ್‌ ಏಕದಿನ ಹಾಗೂ ರಣಜಿ ಪಂದ್ಯಗಳಲ್ಲಿ ಅಬ್ಬರಿಸಿದ್ದರು. ಹೀಗಾಗಿ ಇವರಿಗೆ ರಾಷ್ಟ್ರೀಯ ತಂಡದ ಪರ ಆಡುವ ಅವಕಾಶ ಲಭಿಸಿತು. ಆದರೆ ಈ ಅವಕಾಶವನ್ನು ಕರುಣ್‌ ಬಳಸಿಕೊಳ್ಳುವಲ್ಲಿ ಎಡವಿದ್ದಾರೆ. ಕರುಣ್‌ ಎರಡೂ ಇನಿಂಗ್ಸ್‌ನಲ್ಲಿ ನೆಲಕ್ಕೂರಿ ನಿಂತು ಬಿಗ್ ಇನಿಂಗ್ಸ್ ಕಟ್ಟುವ ಸೂಚನೆಯನ್ನು ನೀಡಿದರೂ ಸಹ ಆಗಲಿಲ್ಲ. ಎರಡನೇ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಚಿಕ್ಕ ಚಿಕ್ಕ ಇನಿಂಗ್ಸ್‌ ಕಟ್ಟಿದರು. ಆದರೆ ಇದೇ ಮೊತ್ತವನ್ನು ದೊಡ್ಡದಾಗಿ ಕನ್ವರ್ಟ್ ಮಾಡುವಲ್ಲಿ ವಿಫಲರಾದರು. ಹೀಗಾಗಿ ಇವರ ಸ್ಥಾನದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ.

ಲಾರ್ಡ್ಸ್‌ನಲ್ಲಿ ಸಿಗುತ್ತಾ ಕೊನೆಯ ಅವಕಾಶ

ಕನ್ನಡಿಗ ಕರುಣ್‌ ನಾಯರ್ ಅವರಿಗೆ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆಡುವ ಅವಕಾಶ ಸಿಹಬಹುದಾ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ವೇಳೆ ಶುಭಮನ್‌ ಗಿಲ್ ಅವರ ಮೇಲೆ ಭರವಸೆ ಇಟ್ಟು ಇನ್ನೊಂದು ಚಾನ್ಸ್‌ ನೀಡಿದರೂ ಅಚ್ಚರಿಯಿಲ್ಲ. ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದ್ದರಿಂದ ಬ್ಯಾಟಿಂಗ್ ಕ್ರಮಾಂಕದಲ್ಲಿ ಹೆಚ್ಚಿನ ಬದಲಾವಣೆಗಳನ್ನು ನೋಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

Karun Nair s Spot in Jeopardy for Lord s Test

ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕರುಣ್ ನಾಯರ್ ಸೊನ್ನೆ ಸುತ್ತಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ 20 ರನ್‌ ಬಾರಿಸಿ ಔಟ್ ಆದರು. ಬರ್ಮಿಂಗ್ ಹ್ಯಾಮ್‌ನಲ್ಲೂ ಇದೇ ಕಥೆ ಮುಂದುವರೆಯಿತು. ಮೊದಲ ಇನಿಂಗ್ಸ್‌ನಲ್ಇ 31 ಹಾಗೂ ಎರಡನೇ ಇನಿಂಗ್ಸ್‌ 26 ರನ್‌ ಸಿಡಿಸಿದ ಕರುಣ್‌ ಔಟ್ ಆದರು. ಒಟ್ಟಾರೆ ನಾಲ್ಕು ಇನಿಂಗ್ಸ್‌ನಲ್ಲಿ ನಾಯರ್‌ 77 ರನ್‌ ಸಿಡಿಸಿದ್ದು, ಇವರ ಸ್ಥಾನಕ್ಕೆ ಅಪಾಯ ಕಾದಿದೆ. ಇವರಿಗೆ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಅವಕಾಶ ಸಿಗುತ್ತಾ ಎಂಬ ಪ್ರಶ್ನೆಗಳು ಎದ್ದಿವೆ.

Story first published: Monday, July 7, 2025, 19:30 [IST]
Other articles published on Jul 7, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+