For Quick Alerts
ALLOW NOTIFICATIONS  
For Daily Alerts
 

Ranji Trophy: ಕರುಣ್‌ ನಾಯರ್ 174, ಕರ್ನಾಟಕ 371ಕ್ಕೆ ಅಲೌಟ್

ಭರವಸೆಯ ಆಟಗಾರರಾದ ಕರುಣ್ ನಾಯರ್‌ (ಅಜೇಯ 174) ಹಾಗೂ ಶ್ರೇಯಸ್‌ ಗೋಪಾಲ್‌ (57 ರನ್‌) ಇವರುಗಳ ಭರ್ಜರಿ ಆಟದ ನೆರವಿನಿಂದ ಕರ್ನಾಟಕ ರಣಜಿ ಟ್ರೋಫಿ ಬಿ ಗುಂಪಿನ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಗೋವಾ ವಿರುದ್ಧ 371 ರನ್‌ ಕಲೆ ಹಾಕಿದೆ. ದಿನದಾಟದ ಮುಕ್ತಾಯಕ್ಕೆ ಗೋವಾ ಎರಡನೇ ದಿನದ ಮುಕ್ತಾಯಕ್ಕೆ 1 ವಿಕೆಟ್‌ಗೆ 28 ರನ್‌ ಕಲೆ ಹಾಕಿದೆ.

ಭಾನುವಾರ ಕರ್ನಾಟಕ 5 ವಿಕೆಟ್‌ಗೆ 222 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ ಕರ್ನಾಟಕದ ಆರಂಭ ಸ್ಥಿರವಾಗಿತ್ತು. 6ನೇ ವಿಕೆಟ್‌ಗೆ ಕರುಣ್ ನಾಯರ್‌ ಹಾಗೂ ಶ್ರೇಯಸ್ ಗೋಪಾಲ್‌ ಜೋಡಿ 117 ರನ್‌ಗಳ ಜೊತೆಯಾಟವನ್ನು ನೀಡಿತು. ಈ ವೇಳೆ ಆಲ್‌ರೌಂಡರ್‌ ಶ್ರೇಯಸ್‌ ಗೋಪಾಲ್‌ 109 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 57 ರನ್‌ ಬಾರಿಸಿ ಅಬ್ಬರಿಸಿದರು. ಕೆಳ ಕ್ರಮಾಂಕದಲ್ಲಿ ಯಶೋವರ್ಧನ್‌ ಪ್ರತಾಪ್‌ 2 ಬೌಂಡರಿ ನೆರವಿನಿಂದ 14 ರನ್‌ ಸಿಡಿಸಿದರು.

Karun Nair s Unbeaten 174 Powers Karnataka to 371 Against Goa in Ranji Trophy

8ನೇ ವಿಕೆಟ್‌ಗೆ ಕರುಣ್ ನಾಯರ್‌, ವಿಜಯ್‌ ಕುಮಾರ್ ವೈಶಾಖ್‌ ಜೋಡಿ ತಂಡಕ್ಕೆ ಆಧಾರವಾದರು. ಈ ಜೋಡಿ ಎದುರಾಳಿ ಬೌಲರ್‌ಗಳ ತಂತ್ರವನ್ನು ಮೆಟ್ಟಿ ನಿಂತು ಆಡಿದ ಕರುಣ್‌, ವೈಶಾಖ್‌ ಜೋಡಿ ಆರ್ಭಟಿಸಿತು. ಸುಮಾರು 16 ಓವರ್‌ಗಳಲ್ಲಿ ಬ್ಯಾಟ್ ಮಾಡಿದ ಜೋಡಿ 60 ರನ್‌ ಸಿಡಿಸಿತು. ಈ ವೇಳೆ ವಿಜಯ್‌ ಕುಮಾರ್ ವೈಶಾಖ್‌ 4 ಬೌಂಡರಿ ನೆರವಿನಿಂದ 31 ರನ್‌ ಕಲೆ ಹಾಕಿತು. ಅಭಿಲಾಷ್ ಶೆಟ್ಟಿ, ವಿದ್ವತ್ ಕಾವೇರಪ್ಪಾ ರನ್ ಕಲೆ ಹಾಕುವಲ್ಲಿ ವಿಫಲರಾದರು.

ಕರುಣ್‌ ಅಬ್ಬರ

ವಿದರ್ಭ ತಂಡದಿಂದ ಇದೇ ರಣಜಿ ಆವೃತ್ತಿಯಲ್ಲಿ ಮತ್ತೆ ಕರ್ನಾಟಕಕ್ಕೆ ಬಂದಿರುವ ಕರುಣ್ ನಾಯರ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಳಸಿಕೊಂಡರು. ಇವರು 267 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 174 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಪರಿಣಾಮ ಕರ್ನಾಟಕ ಉತ್ತಮ ಮೊತ್ತ ಕಲೆ ಹಾಕಲು ನೆರವಾದರು. ಗೋವಾ ತಂಡದ ಪರ ಅರ್ಜುನ್ ತೆಂಡೂಲ್ಕರ್, ವಾಸುಕಿ ಕೌಶಿಕ್‌ ತಲಾ ಮೂರು ವಿಕೆಟ್‌ ಪಡೆದರು.

ಗೋವಾ ತಂಡ ಮೊದಲ ಇನಿಂಗ್ಸ್ ಆರಂಭಿಸಿದ್ದು ಆರಂಭಿಕ ಮಂಥನ್ ಖುಟ್ಕರ್ (9) ಅವರ ವಿಕೆಟ್‌ ಕಳೆದುಕೊಂಡಿದೆ. ಬಿದ್ದ ಏಕೈಕ ವಿಕೆಟ್‌ನ್ನು ಅಭಿಲಾಷ್ ಶೆಟ್ಟಿ ಪಡೆದಿದ್ಧಾರೆ. ಗೋವಾ ಇನ್ನು 343 ರನ್‌ಗಳ ಹಿನ್ನಡೆಯನ್ನು ಅನುಭವಿಸುತ್ತಿದೆ.

Story first published: Sunday, October 26, 2025, 20:01 [IST]
Other articles published on Oct 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+