ಕಾವ್ಯಾ ಮಾರನ್, ಅನಿರುದ್ಧ್ ಮದುವೆ ಫಿಕ್ಸ್? ಸಂದರ್ಶನದಲ್ಲಿ ಚಿಕ್ಕಪ್ಪ ಹೇಳಿದ್ದಿಷ್ಟು...
ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಪಂದ್ಯಗಳ ವೇಳೆ ಮೈದಾನದಲ್ಲಿ ಕಾಣಿಸಿಕೊಳ್ಳುವ ಕಾವ್ಯಾ ಮಾರನ್ ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ಎಸ್‌ಆರ್‌ಎಚ್ ಪಂದ್ಯಗಳು ನಡೆದಾಗ ಮೈದಾನಕ್ಕೆ ಬಂದು ಆಟಗಾರರನ್ನು ಹುರಿದುಂಬಿಸುವ ಕಾವ್ಯಾ ಮಾರನ್ ಅವರು ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಕಾಲಿವುಡ್‌ನ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಜೊತೆ ಕಾವ್ಯಾ ಮದುವೆ ಫಿಕ್ಸ್ ಆಗಿದೆ ಎಂಬ ವದಂತಿಗಳಿಗೆ, ಇದೀಗ ಕುಟುಂಬದ ಹಿರಿಯ ಸದಸ್ಯರೇ ಬಿಗ್ ಅಪ್‌ಡೇಟ್ ನೀಡಿದ್ದಾರೆ.
ಕಾವ್ಯಾ ಮಾರನ್ ಮತ್ತು ಖ್ಯಾತ ಸಂಗೀತ ಸಂಯೋಜಕ ಮತ್ತು ಸಂಯೋಜಕ ಅನಿರುದ್ಧ್ ರವಿಚಂದರ್ ಅವರ ವಿವಾಹಕ್ಕೆ ಸಂಬಂಧಿಸಿದಂತೆ ದೊಡ್ಡ ಅಪ್‌ಡೇಟ್ ಬಂದಿದೆ. ಅನಿರುದ್ಧ್ ಅವರ ಚಿಕ್ಕಪ್ಪ ನಟ ವೈ.ಜಿ. ಮಹೇಂದ್ರನ್ ಅವರು ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇತ್ತೀಚಿಗೆ ಇವರಿಬ್ಬರ ಮಾತುಕತೆ ನಡೆದಿದೆ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ. ಇವರು ಹೀಗೆ ಹೇಳುತ್ತಲೇ ಊಹಾಪೋಹ ಮತ್ತಷ್ಟು ಹೆಚ್ಚಾಗಿದೆ.

ಇದು ನಿಜವೇ?
ಕಾವ್ಯಾ ಹಾಗೂ ಅನಿರುದ್ಧ್ ಅವರಿಬ್ಬರ ವಿವಾಹವು ತಮಗೆ ತಿಳಿದ ಮಟ್ಟಿಗೆ ಅಂತಿಮಗೊಂಡಿದೆ ಎಂದು ವೈ.ಜಿ. ಮಹೇಂದ್ರನ್ ಹೇಳಿದ್ದಾರೆ. ಈ ಬಗ್ಗೆ ಎಸ್‌ಆರ್‌ಎಚ್ ಸಹ ಮಾಲೀಕೆ ಕಾವ್ಯಾ ಮಾರನ್, ಅನಿರುದ್ಧ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಈ ಸುದ್ದಿಯನ್ನು ಖಚಿತ ಪಡಿಸುವುದು ಈಗ ಕಷ್ಟವಾಗಿದ್ದು, ಸದ್ಯ ಇದನ್ನು ವದಂತಿ ಎಂದು ಪರಿಗಣಿಸಲಾಗಿದೆ.
ವೈ.ಜಿ. ಮಹೇಂದ್ರನ್ ಅವರು ಸಂದರ್ಶನದಲ್ಲಿ ಎಲ್ಲೂ ಕಾವ್ಯಾ ಮಾರನ್ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸಿಲ್ಲ. ಆದರೆ, ಅವರು ನೀಡಿದ "ಐಪಿಎಲ್ ತಂಡ ಮತ್ತು ತಂದೆಯ ಬಿಸಿನೆಸ್" ಎಂಬ ಸುಳಿವು ಕಾವ್ಯಾ ಮಾರನ್ ಅವರನ್ನೇ ಉಲ್ಲೇಖಿಸಿದ್ದು ಚರ್ಚೆಗಳನ್ನು ಆರಂಭಿಸಿದೆ.
ಸಂದರ್ಶನದಲ್ಲಿ ಹೇಳಿದ್ದೇನು?
ತಮಿಳು ನಟ ವೈ.ಜಿ. ಮಹೇಂದ್ರನ್ ತಮಿಳು ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿವಾಹದ ಬಗ್ಗೆ ಮಾತನಾಡಿದ್ದಾರೆ. ಅನಿರುದ್ಧ್ ಶಾಂತ ಸ್ವಭಾವದ ಒಳ್ಳೆಯ ಹುಡುಗ. ಆತನನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಅನಿರುದ್ಧ್ ಅದ್ಧೂರಿಯಾಗಿ ಮದುವೆಯಾಗಲು ಯೋಚನೆ ನಡೆಸುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ವಧು ಕಾವ್ಯಾ ಮಾರನ್ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದಿದ್ದರೂ, ಅವರ ಬಿಸಿನೆಸ್ ಸಾಮರ್ಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅನಿರುದ್ಧ್ ಕೈಹಿಡಿಯಲಿರುವ ಹುಡುಗಿಯೂ ತುಂಬಾ ಒಳ್ಳೆಯವಳು. ಅವಳು ಸಾಧಾರಣ ಯುವತಿಯಲ್ಲ; ಐಪಿಎಲ್ ತಂಡ ಹಾಗೂ ತಂದೆಯ ಉದ್ಯಮದಲ್ಲಿ ಸಾಥ್ ನೀಡುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಮತ್ತು ಕಾವ್ಯಾ ಮಾರನ್ ಮದುವೆ ವದಂತಿ ಹೊಸದೇನು ಅಲ್ಲ. 2025ರಲ್ಲಿ ಈ ಸಂಬಂಧ ಸಾಮಾಜಿಕ ತಾಣದಲ್ಲಿ ಚರ್ಚೆಗಳು ಆರಂಭವಾಗಿದ್ದವು.
ಅನಿರುದ್ಧ್ ಯಾರು?
ಅನಿರುದ್ಧ್ ರವಿಚಂದರ್ ಭಾರತ ಚಿತ್ರರಂಗದ, ವಿಶೇಷವಾಗಿ ಕಾಲಿವುಡ್‌ನ ಅತ್ಯಂತ ಜನಪ್ರಿಯ ಯುವ ಸಂಗೀತ ಸಂಯೋಜಕ ಮತ್ತು ಗಾಯಕ. ತಮ್ಮ 21ನೇ ವಯಸ್ಸಿನಲ್ಲಿಯೇ "ವೈ ದಿಸ್ ಕೊಲವೆರಿ ಡಿ" ಹಾಡಿನ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಇವರು, ಪ್ರಸ್ತುತ ಸೂಪರ್‌ಸ್ಟಾರ್ ರಜನಿಕಾಂತ್ ಅವರ 'ಜೈಲರ್', ಕಮಲ್ ಹಾಸನ್ ಅವರ 'ವಿಕ್ರಮ್' ಮತ್ತು ಶಾರುಖ್ ಖಾನ್ ಅವರ 'ಜವಾನ್' ನಂತಹ ಸಾಲು ಸಾಲು ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications