IPL 2024: ಸೋಲಿನ ಬಳಿಕ ಡ್ರೆಸಿಂಗ್ ರೂಮ್‌ನಲ್ಲಿ SRH ಆಟಗಾರರನ್ನು ಹುರಿದುಂಬಿಸಿದ ಕಾವ್ಯಾ ಮಾರನ್; ವಿಡಿಯೋ ವೈರಲ್!
ಮೇ 28 ಮಂಗಳವಾರ, ಐಪಿಎಲ್ 2024ರ ಟೂರ್ನಿಯುದ್ಧಕ್ಕೂ ಅದ್ಭುತ ಪ್ರದರ್ಶನ ನೀಡಿದ ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ತಂಡವು ಫೈನಲ್‌ನಲ್ಲಿ ಸೋತಿದೆ.
ಭಾನುವಾರ ಚೆನ್ನೈನಲ್ಲಿ ನಡೆದ ಮೆಗಾ ಹೈವೋಲ್ಟೇಜ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೈದರಾಬಾದ್ ತಂಡ 8 ವಿಕೆಟ್ ಗಳಿಂದ ಸೋಲನುಭವಿಸಿದ್ದು, ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗುವ ಕನಸು ಕೂಡ ಭಗ್ನಗೊಂಡಿದೆ.

ಈ ನೋವಿನ ಸೋಲಿನಿಂದ ಎಸ್‌ಆರ್‌ಹೆಚ್ ಆಟಗಾರರು ತೀವ್ರ ನಿರಾಸೆಗೊಂಡಿದ್ದಾರೆ. ಅದೇ ಸಮಯದಲ್ಲಿ ಎಸ್‌ಆರ್‌ಹೆಚ್ ಸಿಇಒ ಕಾವ್ಯಾ ಮಾರನ್ ಕೂಡ ಸೋಲಿನ ಬಳಿಕ ಅಳಲು ತೋಡಿಕೊಂಡಿದ್ದಾರೆ.
ಇದೀಗ ಕಾವ್ಯಾ ಮಾರನ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಸ್‌ಆರ್‌ಹೆಚ್ ಆಟಗಾರರನ್ನು ಹುರಿದುಂಬಿಸಿರುವ ವಿಡಿಯೋ ವೈರಲ್ ಆಗಿದೆ. ಕೆಕೆಆರ್ ವಿರುದ್ಧದ ಸೋಲಿನ ಬಳಿಕ ಕಾವ್ಯಾ ಮಾರನ್ ಡ್ರೆಸ್ಸಿಂಗ್ ರೂಮ್‌ಗೆ ಹೋಗಿ ತನ್ನ ತಂಡದ ಆಟಗಾರರಿಗೆ ಅಭಿನಂದಿಸಿದ್ದಾರೆ.
ಕಾವ್ಯಾ ಮಾರನ್ ಮಾತನಾಡಿರುವ ವಿಡಿಯೋದಲ್ಲಿ ನೀವೆಲ್ಲರೂ ನಮಗೆ ತುಂಬಾ ಹೆಮ್ಮೆ ತಂದಿದ್ದೀರಿ. ಇದನ್ನು ಹೇಳಲು ನಾನು ಇಲ್ಲಿಗೆ ಬರಬೇಕಾಯಿತು. ನೀವು ಟಿ20 ಕ್ರಿಕೆಟ್ ಆಡುವ ವಿಧಾನವನ್ನು ಮರು ವ್ಯಾಖ್ಯಾನಿಸಿದ್ದೀರಿ. ಹೀಗಾಗಿ ಎಲ್ಲರೂ ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ.
ದುಃಖಪಡಬೇಡಿ ಸ್ನೇಹಿತರೇ, ನಾವು ಫೈನಲ್ ಆಡಿದ್ದೇವೆ. ಇಂದು ನಮ್ಮ ದಿನವಾಗಿರಲಿಲ್ಲ. ಆದರೆ ನಮ್ಮ ಕ್ರಿಕೆಟ್ ಶೈಲಿಯ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ ಆವೃತ್ತಿ ಅನ್ನು ನಾವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ಮುಗಿಸಿದ್ದೇವೆ.
ಆದರೆ ನಿಮ್ಮ ಆಟವನ್ನು ನೋಡಿದ ಅಭಿಮಾನಿಗಳು ಮೈದಾನಕ್ಕೆ ಬಂದು ಬೆಂಬಲಿಸಿದ್ದಾರೆ. ಈ ಋತುವಿನಲ್ಲಿ ನಾವು ಅದ್ಭುತವಾಗಿ ಆಡಿದ್ದೇವೆ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ತುಂಬಾ ಧನ್ಯವಾದಗಳು ಸ್ನೇಹಿತರೇ ಎಂದು ಹೇಳುವ ಮೂಲಕ ಆಟಗಾರರ ಪ್ರದರ್ಶನಕ್ಕೆ ಕಾವ್ಯಾ ಮಾರನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಸ್‌ಆರ್‌ಹೆಚ್ ಒಡತಿಯ ನಡೆಗೆ ಪ್ರಶಂಸೆ
ಫೈನಲ್‌ನಲ್ಲಿ ತನ್ನ ತಂಡ ಹೀನಾಯವಾಗಿ ಸೋತಿದಕ್ಕೆ ಕಾವ್ಯಾ ಮಾರನ್ ಸ್ಟೇಡಿಯಂನಲ್ಲಿ ಅಳಲು ಪ್ರಾರಂಭಿಸಿದ್ದರು. ಎಷ್ಟೇ ಪ್ರಯತ್ನಿಸಿದ್ದರೂ ಕಾವ್ಯಾ ಮಾರನ್ ಅವರು ತನ್ನ ಕಣ್ಣೀರನ್ನು ತಡೆಯಲು ಸಾಧ್ಯವಾಗಲಿಲ್ಲ. ನೋವಿನಲ್ಲೂ ವಿಜೇತ ಕೆಕೆಆರ್ ತಂಡಕ್ಕೆ ಚಪ್ಪಾಳೆ ತಟ್ಟುತ್ತಲೇ ಅಭಿನಂದಿಸಿದ್ದರು.
ಆದರೆ ಕಾವ್ಯ ಮಾರನ್ ಆಳುತ್ತಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೇ ಸೋಲಿನ ನೋವಿನಲ್ಲೂ ನಗುತ್ತಾ ತಂಡದ ಪ್ರದರ್ಶನವನ್ನು ಹೊಗಳಿದ ಎಸ್‌ಆರ್‌ಹೆಚ್ ಫ್ರಾಂಚೈಸಿ ಒಡತಿಯ ನಡೆಯನ್ನು ಎಲ್ಲರೂ ಪ್ರಶಂಸಿಸುತ್ತಿದ್ದಾರೆ.
ಕಾವ್ಯಾ ಮಾರನ್‌ಗೆ ಸಮಾಧಾನ ಮಾಡಿದ್ದ 'ಬಿಗ್ ಬಿ'
ಕಾವ್ಯಾ ಮಾರನ್ ಆಳುವ ವಿಡಿಯೋ ನೋಡಿದ ಬಾಲಿವುಡ್ ಸ್ಟಾರ್ ನಟ 'ಬಿಗ್ ಬಿ' ಖ್ಯಾತಿಯ ಅಮಿತಾಭ್ ಬಚ್ಚನ್ ಅವರು ಬೇಸರಗೊಂಡಿದ್ದರು. ತಮ್ಮ ಬ್ಲಾಗ್‌ನಲ್ಲಿ ಶಾರುಖ್ ಖಾನ್- ಚುಹಿ ಚಾವ್ಲಾ ಮಾಲೀಕತ್ವದ ಕೆಕೆಆರ್ ಗೆದ್ದಿರುವುದಕ್ಕೆ ಅಭಿನಂದಿಸಿದ್ದರು. ಅಲ್ಲದೆ, ಎಸ್‌ಆರ್‌ಹೆಚ್ ಸೋತಿದಕ್ಕೆ ನಿರಾಶೆಯಾಗಿದೆ ಎಂದು ಬರೆದಿದ್ದಾರೆ.
2024ರ ಐಪಿಎಲ್ ಋತುವಿನಲ್ಲಿ ಸನ್ ರೈಸಸ್ ಹೈದರಾಬಾದ್ ಅತ್ಯುತ್ತಮ ತಂಡವಾಗಿತ್ತು. ಕಾವ್ಯಾ ಮಾರನ್ ತ್ನನ್ನ ಕಣ್ಣೀರನ್ನು ತಡೆಯಲು ಪ್ರಯತ್ನಿಸುತ್ತಿರುವ ವಿಡಿಯೋ ನೋಡಿ ಬೇಸರವಾಯಿತು.
ತನಗೆ ನೋವಾಗಿದೆ ಎಂದು ತೋರಿಸಲು ಕಾವ್ಯಾ ಬಯಸಲಿಲ್ಲ. ಅವಳ ಸ್ಥಿತಿ ನೋಡಿ ನನಗೆ ಬೇಸರ ತಂದಿದೆ. ಅದರೆ ಪರವಾಗಿಲ್ಲ, ನಾಳೆ ನಿನ್ನದಮ್ಮಾ ಎಂದು ಅಮಿತಾಭ್ ಬರೆಯುವ ಮೂಲಕ ಕಾವ್ಯಾ ಮಾರನ್ ಅವರನ್ನು ಸಮಾಧಾನ ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications